`Swapna Mantapa'' selected for international film festivals

ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ `ಸ್ವಪ್ನ ಮಂಟಪ’ ಆಯ್ಕೆ - CineNewsKannada.com

ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ `ಸ್ವಪ್ನ ಮಂಟಪ’ ಆಯ್ಕೆ

ಪ್ರೊ.ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ `ಸ್ವಪ್ನಮಂಟಪ’ ದೆಹಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಮತ್ತು ಚಿಕಾಗೊ ಅಂತರಾಷ್ಟ್ರೀಯ ಚಿತ್ರೋತ್ಸವಗಳ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಚಿಕಾಗೊ ಚಿತ್ರೋತ್ಸವದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತ ತಲುಪಿದೆ.

ಎ.ಎಂ.ಬಾಬು ಮಲೈ ಮಹದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರವನ್ನು `ಸ್ವಪ್ನಮಂಟಪ’ ಚಿತ್ರ ಅದೇ ಹೆಸರಿನ ಬರಗೂರರ ಕಾದಂಬರಿಂ ಆಧರಿಸಿದ ಸಿನಿಮಾವಾಗಿದೆ. ಬರಗೂರರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ.

ನಾಡಿನ ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆಯ ಅಗತ್ಯ ಮನಗಾಣಿಸುವ ಕಥಾವಸ್ತುವನ್ನು ಸ್ವಪ್ನಮಂಟಪ' ಚಿತ್ರ ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬಸ್ವಪ್ನಮಂಟಪ’ ನಿರ್ಮಾಣ ಮಾಡಿರುತ್ತಾನೆ. ಚಾರಿತ್ರಿಕ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನಕ್ಕೆ ಚಿತ್ರದ ನಾಯಕ-ನಾಯಕಿ ತಡೆಯೊಡ್ಡುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.

ಕಥಾನಾಯಕರಾಗಿ ವಿಜಯ ರಾಘವೇಂದ್ರ ಮತ್ತು ನಾಯಕಿಯಾಗಿ ರಂಜನಿ ರಾಘವನ್ ಇಬ್ಬರೂ ದ್ವಿಪಾತ್ರದಲ್ಲಿ ಅಭಿನಯಿಸಿರುವ ಚಿತ್ರದ ತಾರಾಗಣದಲ್ಲಿ ಸುಂದರರಾಜ್, ರಜನಿ, ಶೋಭಾ ರಾಘವೇಂದ್ರ, ರಾಜಪ್ಪ ದಳವಾಯಿ, ಸುಂದರರಾ ಅರಸು, ಮಹಾಲಕ್ಷ್ಮೀ, ಅಂಬರೀಶ್ ಸಾರಂಗಿ, ವೆಂಕಟರಾಜು, ಶಿವಲಿಂಗ ಪ್ರಸಾದ್ ಮುಂತಾದವರು ಇದ್ದಾರೆ.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ ಇರುವ ಈ ಚಿತ್ರದ ಸಹನಿರ್ದೇಶಕರು ನಟ್ರಾಜ್ ಶಿವು ಮತ್ತು ಪ್ರವೀಣ್

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin