Balaji Manohar in a special role in the film "Ramarasa"

“ರಾಮರಸ ” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಬಾಲಾಜಿ ಮನೋಹರ್ - CineNewsKannada.com

“ರಾಮರಸ ” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಬಾಲಾಜಿ ಮನೋಹರ್

ವಿಭಿನ್ನ ನಟನೆಯ ಮೂಲಕ ಕಡಿಮೆ ಪಾತ್ರ ಮಾಡಿದ್ದರೂ ತಮ್ಮ ವಿಷೇಶ ಛಾಪನ್ನು ಮೂಡಿಸಿರುವ ಬಾಲಾಜಿ ಮನೋಹರ್, ಈಗ “ರಾಮರಸ” ಚಿತ್ರದ ಮೂಲಕ ಮೂರು ಬೇರೆ ತರಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

#BalajiManohar

ರಾಮರಸದ ಪಾತ್ರಗಳಲ್ಲಿ ಕ್ಷಾತ್ರ ತೇಜಸ್ಸಿನ ಗಹನತೆ, ಶಾಕ್ತಪರಂಪರೆಯ ಧೀಮಂತಿಕೆ ಹಾಗು ಅತೀಂದ್ರ ಶಕ್ತಿಗಳ ಅನಾವರಣ ಇದೆ. ಇಂತಹದ್ದನ್ನ ನಿಭಾಯಿಸಲು ಕಡಿಮೆ ಸ್ಥರದ ನಟರಿಂದ ಸಾಧ್ಯನೇ ಇರಲಿಲ್ಲ. ಡಬ್ಬಿಂಗಲ್ಲಿ ಕ್ಲೈಮ್ಯಾಕ್ಸಿಗೆ ಬೇಕಾದ ಒಂದು ಬೇರೆ ತರಹದ ಧ್ವನಿಗೆ ನಿರ್ದೇಶಕರು ಸೌಂಡ್ ಇಂಜಿನಿಯರ್ ಜೊತೆ ತಿಂಗಳಿಂದ ಚರ್ಚಿಸುತ್ತಿದ್ದಾಗ, ಬಾಲಾಜಿಯವರು ಡಬ್ಬಿಂಗಲ್ಲಿ ತಮ್ಮ ಧ್ವನಿ ಬದಲಿಸಿಯೇ ಈ ಸಮಸ್ಯಯನ್ನು ಸಾಲ್ವ ಮಾಡಿದರು.

#BalajiManohar

ಕನ್ನಡದ ನಟ ಚಿತ್ರದ ಬಿಡುಗಡೆಯಾದ ನಂತರ ತೆಲಗು ತಮಿಳಿಗೆ ಹೊರಟು ಆಮೇಲೆ ನಮಗೆ ಸಿಗೋದಿಲ್ಲ ನೋಡ್ತಿರಿ ಅಂತ ನಿರ್ಮಾಪಕರು ಶರಾ ಬರೆದಂಗೆ ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೆÇೀಷಕ ನಟನೊಬ್ಬನ ನಟನೆಯ ಬಗ್ಗೆ ಗಾಂಧಿನಗರ ಇಷ್ಟೊಂದು ಉತ್ಸಾಹ ತೋರಿಸುತ್ತಿರುವುದು ಶುಭಶಕುನವಾಗಿ ತೋರುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin