Actress Harshika Poonacha couple exchanged vows after visiting Kollur
ಕೊಲ್ಲೂರಿಗೆ ಭೇಟಿ ನೀಡಿ ಹರಕೆ ತೀರಿಸಿದ ನಟಿ ಹರ್ಷಿಕಾ ಪೂಣಚ್ಚ ದಂಪತಿ
ಕನ್ನಡ ಚಿತ್ರರಂಗದ ಸದಾ ಕ್ರಿಯಾಶೀಲ ದಂಪತಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ, ಈ ದಂಪತಿ ತಮ್ಮ ಪುತ್ರಿಯ ಜೊತೆ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ಮಗು ಜನಿಸಿದ ಬಳಿಕ ಕೊಲ್ಲೂರಿಗೆ ಭೇಟಿ ನೀಡುವುದಾಗಿ ಹರಿಸಿಕೊಂಡಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರು ಪುತ್ರಿಯ ಜೊತೆಗೂಡಿ ಕೊಲ್ಲೂರಿಗೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದಿದ್ದಾರೆ.
ಹರ್ಷಿಕಾ ಮತ್ತು ಭವನ್ ದಂಪತಿ ಕೊಲ್ಲೂರಿಗೆ ಕುಟುಂಬ ಸಮೇತ ಭೇಟಿ ನೀಡಿ ತಮ್ಮ ಹರಕೆ ತೀರಿಸಿದರು. ಈ ವೇಳೆ ದೇವಾಲಯದಲ್ಲಿ ತಮ್ಮ ನೆಚ್ಚಿನ ನಟ, ಮತ್ತು ನಟಿಯನ್ನು ಕಂಡ ಅಭಿಮಾನಿಗಳು ಸೆಲ್ಪೀ, ತೆಗೆಸಿಕೊಂಡು ಸಂತಸ ಪಟ್ಟರು.