Actress Ithi Acharya's entry into Bollywood on birthday celebrations

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ, ಇತಿ ಆಚಾರ್ಯ ಬಾಲಿವುಡ್‍ಗೆ ಪ್ರವೇಶ - CineNewsKannada.com

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ, ಇತಿ ಆಚಾರ್ಯ ಬಾಲಿವುಡ್‍ಗೆ ಪ್ರವೇಶ

ಇತಿ ಆಚಾರ್ಯ ನಟನೆ ಜೊತೆಗೆ ಮಾಡೆಲಿಂಗ್ ಮಿಂಚುತ್ತಿದ್ದಾರೆ. 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡಿರುವ ಈ ಕನ್ನಡತಿ ಆರ್.ವಿ.ಎಸ್.ಪಿ. ಪ್ರೊಡಕ್ಷನ್ಸ್ ಹೌಸ್ ಮೂಲಕ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.

Iti Acharya

ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋರ್ಡಿಂಗ್ಸ್‍ನಲ್ಲಿ ಕಾಣಿಸಿಕೊಂಡ ಹಿರಿಮೆ ಅವರದ್ದು. ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್‍ನ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿ ಆಚಾರ್ಯ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

Iti Acharya

ಇತಿ ಆಚಾರ್ಯ ತಮ್ಮ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾದ ಅಪ್ ಡೇಟ್ ಹಂಚಿಕೊಂಡಿದ್ದಾರೆ. “ದಿ ಶೂಸ್ ಐ ವೋರ್” ಎಂಬ ಹೊಸ ಹಿಂದಿ ಚಿತ್ರದಲ್ಲಿ ಇತಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಪ್ರತಿಭೆ ಸಂಜಯ್ ಚರಣ್ ನಿರ್ದೇಶನದ ಈ ಸಿನಿಮಾದಲ್ಲಿ ಇನ್ನಮುಲ್ಕ್ ಮತ್ತು ಸ್ಕ್ಯಾಮ್ ಖ್ಯಾತಿಯ ಫೈಸಲ್ ರಶೀದ್ ಗೆ ಜೋಡಿಯಾಗಿ ಕನ್ನಡತಿ ಅಭಿನಯಿಸಲಿದ್ದಾರೆ.

Iti Acharya

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇತಿ ಆಚಾರ್ಯ, ‘ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಇದೆ. ತುಂಬಾ ಉತ್ಸುಕಳಾಗಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಕಲಿಯುವುದು ಇದೆ. ವಿಭಿನ್ನ ಕಥೆಯಾಗಿದ್ದು, ಇದೊಂದು ಟೆಕ್ನಿಕಲ್ ಸಿನಿಮಾ’ ಎಂದಿದ್ದಾರೆ.

Iti Acharya

ಇತಿ ಆಚಾರ್ಯ, ಕನ್ನಡದಲ್ಲಿ ಕವಚ, ಧ್ವನಿ, ಡೀಲ್ ರಾಜಾ, ಪಂಗನಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin