Actress Priyanka released a new poster of 'Capture' on her birthday

ನಟಿ ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ‘ಕ್ಯಾಪ್ಚರ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ - CineNewsKannada.com

ನಟಿ ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ‘ಕ್ಯಾಪ್ಚರ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿರುವ ಹಿರಿಯ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಬಂಡವಾಳ ಹಾಕಿರುವ “ ಕ್ಯಾಪ್ಚರ್” ಚಿತ್ರದ ಮತ್ತೊಂದು ಪೋಸ್ಟರ್ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಕ್ಯಾಪ್ಚರ್ ತಂಡದ ಜೊತೆ ನಟಿ ಪ್ರಿಯಾಂಕಾ ಉಪೇಂದ್ರ ವಿಭಿನ್ನವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಈ ವೇಳೆ ಚಿತ್ರತಂಡ ನಟಿಗೆ ಹುಟ್ಟುಹಬ್ಬದ ಸಪ್ರೈಸ್ ನೀಡಿದೆ. ಈ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ. ಪತ್ನಿಗೆ ಅಭಿಮಾನಿಗಳಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದ್ದು ಉಪೇಂದ್ರ ಕೂಡ ಖುಷಿಯಾಗಿದ್ದಾರೆ

‘ಕ್ಯಾಪ್ಚರ್’ ಸಿನಿಮಾತಂಡ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿ ಸಂಭ್ರಮಿಸಿದರು. ವಿಭಿನ್ನವಾದ ಕೇಕ್ ತಯಾರಿಸಿದ್ದ ಕ್ಯಾಪ್ಚರ್ ತಂಡ ಪ್ರಿಯಾಂಕಾ ಅವರಿಗೆ ಬಿಗ್ ಸಪ್ರ್ರೈಸ್ ನೀಡಿದರು. ಇದೇ ಸಮಯದಲ್ಲಿ ಕ್ಯಾಪ್ಚರ್ ತಂಡದಿಂದ ಪ್ರಿಯಾಂಕಾ ಅವರ ಮತ್ತೊಂದು ಪೆÇೀಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಡ್ರೋನ್ ಮೂಲಕ ಚಿತ್ರದ 2ನೇ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಮತ್ತಷ್ಟು ವಿಭಿನ್ನವಾಗಿಸಿದರು.

ಅದ್ದೂರಿಯಾಗಿ ನೆರವೇರಿದ ಪ್ರಿಯಾಂಕ ಹುಟ್ಟುಹಬ್ಬಕ್ಕೆ ಪತಿ ರಿಯಲ್ ಸ್ಟಾರ್ ಉಪೇಂದ್ರ ಪ್ರಿಯಾಂಕಾ ಅವರಿಗೆ ಕೇಕ್ ತಿನಿಸುವ ಮೂಲಕ ಶುಭಾಶಯ ಹೇಳಿದರು. ಜೊತೆಗೆ ಕ್ಯಾಪ್ಚರ್ ಚಿತ್ರ ತಂಡಕ್ಕೂ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ನಟಿ ಪ್ರಿಯಾಂಕ ಉಪೇಂದ್ರ ಅವರು ಕ್ಯಾಪ್ಚರ್ ತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರಿಯಾಂಕಾ ಉಪೇಂದ್ರ ಸಂತಸ ವ್ಯಕ್ತಪಡಿಸಿ, ‘ದೀಪಾವಳಿಗೆ ಬರ್ತಡೇ ಬಂದಿದ್ದು ತುಂಬಾ ಖುಷಿ ಇದೆ. ಉಪೇಂದ್ರ ಅವರ ಬರ್ತಡೇ ಗಣೇಶ ಹಬ್ಬಕ್ಕೆ ಬರುತ್ತೆ. ತುಂಬಾ ವಿಶೇಷವಿದು. ನನಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ, ಮದುವೆ ಅದ ಮೇಲೂ ನನ್ನ ಗ್ರಾಫ್ ಹೀಗೆ ಹೋಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಒಳ್ಳೆ ಸಿನಿಮಾಗೆ ಆಡಿಯನ್ಸ್ ಬೆಂಬಲ ಇದ್ದೇ ಇರುತ್ತೆ, ಇದು ನನ್ನ ಟೀಂ ಎಫರ್ಟ್’ ಎಂದರು.

ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರಿಗೂ ವಿಶ್ ಮಾಡಿದರು. ‘ನನ್ನ ಜೀವನದ ಬಗ್ಗೆ ನಾನು ಯಾವುದೇ ಪ್ಲಾನ್ ಮಾಡಿಲ್ಲ. ಈ ಕ್ಷಣವನ್ನು ಎಂಜಾಯ್ ಮಾಡುತ್ತೇನೆ ಅಷ್ಟೇ. ನನ್ನಿಂದ ಸ್ವಲ್ಪ ಜನಕ್ಕೆ ಪ್ರೇರಣೆ ಸಿಕ್ಕದ್ದರೂ ನನಗೆ ಅದು ತುಂಬಾ ಖುಷಿ’ ಎಂದರು.

ಸದ್ಯ ಪ್ರಿಯಾಂಕಾ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕ್ಯಾಪ್ಚರ್ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕ್ಯಾಪ್ಚರ್ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಟೈಟಲ್ ಮತ್ತು ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಕ್ಯಾಪ್ಚರ್ ಡಿಸೆಂಬರ್ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಕ್ಯಾಪ್ಚರ್ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ತಮ್ಮ ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಸಿಸಿಟಿವಿ ಕಾನ್ಸೆಪ್ಟ್ ನಲ್ಲಿ ಮೂಡಿ ಬಂದಿರುವ ಕ್ಯಾಪ್ಚರ್ ಸಿನಿಮಾ ಬಾರಿ ಕುತೂಹಲ ಮೂಡಿಸಿದ್ದು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin