Sai for Kannada, Jai for other languages: Actress Supreeta Satyanarayan

ಕನ್ನಡಕ್ಕೂ ಸೈ, ಬೇರೆ ಭಾಷೆಗೂ ಜೈ : ನಟಿ ಸುಪ್ರೀತಾ ಸತ್ಯನಾರಾಯಣ್ - CineNewsKannada.com

ಕನ್ನಡಕ್ಕೂ ಸೈ, ಬೇರೆ ಭಾಷೆಗೂ ಜೈ : ನಟಿ ಸುಪ್ರೀತಾ ಸತ್ಯನಾರಾಯಣ್

ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಮೈಸೂರಿನ ಬೆಡಗಿ ಸುಪ್ರೀತಾ ಸತ್ಯನಾರಾಯಣ . ಕನ್ನಡದಲ್ಲಿ ನಟಿಸುತ್ತಲೇ ಪರಭಾಷೆಯಲ್ಲಿ ಜೈ ನಿಸಿಕೊಳ್ಳಲು ಮುಂದಾಗಿದ್ದಾರೆ.ಇದೀಗ ಅಜಯ್ ರಾವ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ” ಯುದ್ಧಕಾಂಡ” ಚಿತ್ರದಲ್ಲಿ ವಕೀಲೆಯ ಪಾತ್ರ ಮಾಡಿದ್ದಾರೆ. ಪೌರಾಣಿಕ ಪಾತ್ರ ಮಾಡುವ ಮಹಾದಾಸೆ ಹೊರ ಹಾಕಿದ್ದಾರೆ..

  • ಸದ್ಯ ಯಾವ ಚಿತ್ರ ತೆರೆಗೆ ಬಂದಿವೆ. ಯಾವಾವ ಚಿತ್ರಗಳು ಬಿಡುಗಡೆ ಹಂತದಲ್ಲಿವೆ

ಲಾಂಗ್ ಡ್ರೈವ್ ಮೆಲೋಡಿ ಡ್ರಾಮ", ಬಿಡುಗಡೆಯಾಗಿದೆ. ಯುದ್ಧಕಾಂಡ, ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ನಡೆದಿದೆ.. ತೆಲುಗಿನ ಪಯಣಂ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ತೆಲುಗಿನಒಂಟರಿ ಗುಲಾಬಿ” ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದೇನೆ ಈ ನಡುವೆ ಕನ್ನಡ, ತೆಲುಗು ಸೇರಿದಂತೆ ಅನೇಕ ಚಿತ್ರಗಳಿಂದ ಆಫರ್ ಬಂದಿವೆ.

  • ನಿಮ್ಮ ಹಿನ್ನೆಲೆ ಏನು ಹೇಳುವುದಾದರೆ

ನನ್ನೂರು ಮೈಸೂರು. ಇಂಜಿನಿಯರಿಂಗ್ ಮುಗಿಸಿದ್ದೆ, ಇಂಟೆಲ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು.ಹೀಗಾಗಿ ಬೆಂಗಳೂರಿಗೆ ಬಂದೆ. ಒಂದೂವರೆ ವರ್ಷ ಕಂಪನಿಯಲ್ಲಿ ಕೆಲಸ ಮಾಡಿದೆ.

  • ಬಣ್ಣದ ಜಗತ್ತು ಪ್ರವೇಶಿಸಿದ್ದು ಹೇಗೆ

ಮೊದಲಿನಿಂದ ಕಥೆ ಬರೆಯುವ ಗೀಳು ಇತ್ತು. ಸ್ನೇಹಿತರೊಬ್ಬರ ಮೂಲಕ ವಾಹಿನಿಯೊಂದರಲ್ಲಿ ಸ್ಕ್ರಿಪ್ಟ್ ರೈಟರಳಿಗೆ ಅವಕಾಶ ಇದೆ ಎನ್ನುವ ಮಾಹಿತಿ ಸಿಕ್ಕಿತು. ಒಮ್ಮೆ ಪ್ರಯತ್ನ ಮಾಡೋಣ ಎಂದು ಚಾನೆಲ್‍ಗೆ ಭೇಟಿ ನೀಡಿ ಪರೀಕ್ಷೆ ಬರೆದೆ. ನಾನು ಬರೆಯುತ್ತಿದ್ದುದನ್ನು ನೋಡಿದ್ದ ಚಾನೆಲ್ ಮಂದಿ ಪರೀಕ್ಷೆ ಮುಗಿದು ಹೊರ ಬಂದಾಗ ನಟನೆಯಲ್ಲಿ ಆಸಕ್ತಿ ಇದೆಯಾ ನಟಿಸುತ್ತೀರಾ ಎಂದು ಕೇಳಿದರು.ಅದಕ್ಕೂ ಮುನ್ನ ಕ್ಯಾಮರ ಎದುರಿಸಿದ ಅನುಭವ ಇರಲಿಲ್ಲ. ಬಂದ ಅವಕಾಶ ಬಿಡಬಾರದು ಎನ್ನುವ ಕಾರಣಕ್ಕೆ ಒಕೆ ಮಾಡುತ್ತೇನೆ ಎಂದೆ. ಆಗ ಸಿಕ್ಕಿದ್ದೇ “ಸೀತಾ ವಲ್ಲಭ” ಧಾರಾವಾಹಿ.

  • ಧಾರಾವಾಹಿಯ ಅನುಭವ ಬಗ್ಗೆ ಹೇಳಿ

ಸೀತಾ ವಲ್ಲಭ ಧಾರಾವಾಹಿ ಮೊದಲ ಬಾರಿಗೆ ನಟನೆ ಮಾಡುತ್ತಿದ್ದರಿಂದ ಪ್ರತಿಯೊಂದು ವಿಷಯವನ್ನು ಕಲಿತುಕೊಂಡೆ, ಧಾರಾವಾಹಿ ತಂಡ ಕೂಡ ಕಲಿಕೆಗೆ ಅವಕಾಶ ಮಾಡಿಕೊಟ್ಟಿತು. ಹೀಗಾಗಿ ಮೊದಲ ಧಾರಾವಾಹಿ 550 ಎಪಿಸೋಡ್ ಪ್ರಸಾರವಾಗಲು ಕಾರಣವಾಯಿತು. ನನ್ನ ನಟನೆಗೆ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಆ ಬಳಿಕ ಸರಸು ಧಾರಾವಾಹಿ ಮಾಡಿದೆ ಅದರೂ ಕೂಡ 250 ಎಪಿಸೋಡು ದಾಟಿತು

  • ಅಜಯ್ ರಾವ್ ಜೊತೆ ಚಿತ್ರದ ಅನುಭವ ಹೇಗಿತ್ತು

ನಟ ಅಜಯ್ ರಾವ್ ನಿರ್ಮಾಣ ಮತ್ತು ನಟನೆಯಲ್ಲಿ ಮೂಡಿ ಬರುತ್ತಿರುವ “ಯುದ್ಧಕಾಂಡ” ಚಿತ್ರದಲ್ಲಿ ವಕೀಲೆಯ ಪಾತ್ರ ಮಾಡಿದ್ದೇನೆ. ಪ್ರಮುಖ ಪಾತ್ರ ಸಿಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಬಾಕಿ ಚಿತ್ರೀಕರಣ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ.

• ತೆಲುಗು ಚಿತ್ರದಲ್ಲಿ ಅವಕಾಶ ಸಿಕ್ಕದು ಹೇಗೆ

ಕನ್ನಡದ ಕಾದಂಬರಿ “ನೀನು ನಿನ್ನೊಳಗೆ ಖೈದಿ” ಕಾದಂಬರಿ ಆಧಾರಿತ ಚಿತ್ರ. ಕನ್ನಡದವರೇ ಆದ ಕೀರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನುಳಿದಂತೆ ಎಲ್ಲರೂ ತೆಲುಗಿನವರು. ಒಮ್ಮ ಕಾದಂಬರಿ ಓದಲು ನಿರ್ದೇಶಕರು ಕೊಟ್ಟಿದ್ದರು. ಒದಿದೆ. ತುಂಬಾನೇ ಇಷ್ಟವಾಯಿತು. ಈ ರೀತಿಯ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೆ. ಆಸೆ ಈಡೇರಿದೆ.

  • ಪರಭಾಷೆಯಿಂದ ಅವಾಕಾಶ ಬಂದಿದೆಯಾ

ತೆಲುಗು ಮಾತ್ರವಲ್ಲ ಕನ್ನಡದಿಂದಲೂ ಹೊಸ ಹೊಸ ಅವಕಾಶಗಳು ಬರುತ್ತಿವೆ. ಯಾವುದನ್ನು ತತ್ ಕ್ಷಣಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಪಾತ್ರಕ್ಕಿರುವ ತೂಕ ಸೇರಿದಂತೆ ವಿವಿಧ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆ ನಂತರ ನಿರ್ಧಾರ ಮಾಡುತ್ತೇನೆ. ನಾಯಕಿ ಅಲ್ಲದೆ ಎರಡನೇ ನಾಯಕಿ ಪಾತ್ರಕ್ಕೂ ಅವಕಾಶ ಬರುತ್ತಿವೆ. ನಾನು ಇನ್ನು ಒಪ್ಪಿಕೊಂಡಿಲ್ಲ.

• ಚಿತ್ರದ ಆಯ್ಕೆಯಲ್ಲಿ ಯಾವುದಕ್ಕೆ ಒತ್ತು ಕೊಡುತ್ತೀರಾ.

ಚಿತ್ರತಂಡ ನನ್ನನ್ನು ಹೇಗೆ ಅಪೆÇ್ರೀಚ್ ಮಾಡುತ್ತದೆ ಎನ್ನುವುದನ್ನು ನೋಡುತ್ತೇನೆ. ನನ್ನ ಪಾತ್ರ. ಮತ್ತು ಚಿತ್ರದ ಕಥೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕಥೆ ಮತ್ತು ನನ್ನ ಪಾತ್ರ ಇಷ್ಟವಾದರೆ ಚಿತ್ರದಲ್ಲಿ ನಟಿಸುತ್ತೇನೆ. ಇಲ್ಲದಿದ್ದರೆ ಇಲ್ಲ.

• ಯಾವ ರೀತಿಯ ಪಾತ್ರ ಮಾಡುವ ಆಸೆ ಇದೆ.

ಮೈಥಾಲಜಿ ಚಿತ್ರದಲ್ಲಿ ಪಾತ್ರ ಮಾಡುವ ಆಸೆ ಇದೆ. ಇಂತಹುದೆ ಅಂತ ಅಲ್ಲ. ಯಾವುದೇ ಪಾತ್ರ ಮಾಡಲು ಇಷ್ಟ. ಅದರಲ್ಲಿಯೂ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮಾಡುವ ಚಿತ್ರಗಳ ಮಾದರಿಯ ಚಿತ್ರಗಳಲ್ಲಿ ನಟಿಸುವ ಆಸೆ ಇದೆ.

• ಗ್ಲಾಮರ್ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯ

ಕಥೆಯ ಬಗ್ಗೆ ಚರ್ಚೆ ಮಾಡುವಾಗ ಪಾತ್ರ ಹೇಗೆ ಸಾಗಲಿದೆ ಎನ್ನುವ ಐಡಿಯಾ ಬರಲಿದೆ. ಸನ್ನಿವೇಶಗಳ ಬಗ್ಗೆ ಮುಂಚೆಯೇ ಮಾಹಿತಿ ಪಡೆಯುತ್ತೇನೆ. ಬೋಲ್ಡ್ ಪಾತ್ರ ಮಾಡಲು ಕಂಡಿತಾ ಇಷ್ಟವಿಲ್ಲ. ಒಂದು ವೇಳೆ ಪಾತ್ರ ಸವಾಲಿನಿಂದ ಕೂಡಿದ್ದರೂ ಕೂಡ. ಪಾತ್ರವನ್ನು ನಿರ್ದೇಶಕರು ಯಾವ ರೀತಿ ತೋರಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರೇಕ್ಷಕರಿಗೆ ಫೀಲ್ ಕೊಡಲು ಅವಕಾಶವಿದೆ. ಕೇವಲ ಕಣ್ಣಲ್ಲಿಯೂ ಕೂಡ ತೋರಿಸಬಹುದು, ಎಲ್ಲವೂ ನಿರ್ದೇಶಕರ ಮೇಲೆ ಅವಲಂಬಿತವಾಗಿರುತ್ತದೆ. ಬೋಲ್ಡ್ ಪಾತ್ರ ಮಾಡಬೇಕು ಬೇಡ, ಅಥವಾ ತಪ್ಪು, ಸರಿ ಅಂತ ಹೇಳುತ್ತಿಲ್ಲ. ಬೋಲ್ಡ್ ಪಾತ್ರದಲ್ಲಿ ನಂಬಿಕೆ ಇಲ್ಲ

• ಬೇರೆಯವರು ಬೋಲ್ಡ್ ಪಾತ್ರದಲ್ಲಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯ

ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸರಿ ತಪ್ಪು ಅಂತ ಹೇಳುವುದಿಲ್ಲ. ತೋರಿಸುವುದ ತಪ್ಪು ಎಂದು ಹೇಳುತ್ತಿಲ್ಲ. ಯಾರಿಗೆ ಇಷ್ಟ ಇದೆಯೋ ಅವರು ಮಾಡ್ತಾರೆ. ಇಷ್ಟ ಇಲ್ಲದವರು ಅಂತಹ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ.

• ಸಿನಿಮಾದಲ್ಲಿ ಟೂ ಪೀಸ್ ಹಾಕುತ್ತೀರಾ? ಈ ಬಗ್ಗೆ ನಿಮ್ಮ ಅಭಿಪ್ರಾಯ

ಸಿನಿಮಾ ಹೆಸರೇಳಲ್ಲ. ಆ ಸಿನಿಮಾದಲ್ಲಿ ಈ ರೀತಿ ಮಾಡಬೇಕು ಅಂದರು.ಈ ರೀತಿಯ ಪಾತ್ರ ಮಾಡುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಚಿತ್ರತಂಡಕ್ಕೆ ಹೇಳಿದೆ.ಈ ರೀತಿಯ ಪಾತ್ರ ಇದ್ದರೆ ಮಾಡುವುದಿಲ್ಲ ಎಂದು.

” ಈ ರೀತಿಯ ನಿಮ್ಮ ನಿರ್ಧಾರದಿಂದ ಅವಕಾಶ ಮಿಸ್ ಆಗಿದೆಯಾ

ಪಾತ್ರ ನಮಗೆ ಇಷ್ಟವಾಗದಿದ್ದರೆ. ನನಗೆ ಪಾತ್ರ ಮಿಸ್ ಆಗಿದೆ ಅಂತ ನನಗೆ ಅನ್ನಿಸುವುದಿಲ್ಲ. ಆ ರೀತಿಯ ಯಾವುದೇ ಫೀಲಿಂಗ್ ಕೂಡ ಬಂದಿಲ್ಲ. ನನಗೆ ಯಾವುದು ಇಷ್ಟವಾಗುತ್ತೋ ಆ ರೀತಿಯ ಪಾತ್ರ ಮಾಡುತ್ತೇನೆ. ಇಷ್ಟವಿಲ್ಲದ ಪಾತ್ರವನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin