ಸಿನಿಮಾ ನನ್ನ ಫ್ಯಾಶನ್ , ಸಾಧಿಸುವ ಹಂಬಲ; ನಟಿ ಶರಣ್ಯ ಶೆಟ್ಟಿ
“ಸಿನಿಮಾ ನನ್ನ ಫ್ಯಾಶನ್, ಇಲ್ಲಿಯೇ ಏನಾದರೂ ಸಾಧನೆ ಮಾಡಬೇಕು, ಜೀವದ ಕೊನೆ ಉಸಿರುವ ಇರುವ ತನಕ ನಟಿಯಾಗಿಯೇ ಇರಬೇಕು ಎನ್ನುವ ಆಸೆ ನನ್ನದು. ಹೀಗಾಗಿ ಚಿತ್ರರಂಗಕ್ಕೆ ಹೀಗೆ ಬಂದು ಹಾಗೆ ಹೋಗುವುದು ನನಗೆ ಇಷ್ಟವಿಲ್ಲ. ಇಲ್ಲಿ ಸಾಧನೆ ಮಾಡಬೇಕು ಎನ್ನುವುದು ನನ್ನ ಪರಮ ಗುರಿ…”.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕರಾವಳಿ ಬೆಡಗಿ ಶರಣ್ಯ ಶೆಟ್ಟಿ , ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಲೇ ಕಿರುತೆರೆಯಲ್ಲಿ ನಾಯಕಿಯಾಗಿ ಹಿರಿತೆರೆಯಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ದಾರೆ..
ಸಿನಿಮಾ ಯಾನದ ಬಗ್ಗೆ ಮುಕ್ತವಾಗಿ ಮಾತು ಹಂಚಿಕೊಂಡ ಶರಣ್ಯ ಶೆಟ್ಟಿ , ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಕನಸು ಕಟ್ಟಿಕೊಂಡಿದ್ದಾರೆ. ಈ ಕುರಿತು ಅವರೊಂದಿಗೆ ಮಾತುಕತೆ.
• ಸಿನಿಮಾಗೆ ಬಂದದ್ದು ಹೇಗೆ
ಚಿತ್ರರಂಗಕ್ಕೆ ಸಡನ್ ಆಗಿ ಬಂದೆ, ಆಸಕ್ತಿ ಇಲ್ಲದೆ, ಚಿತ್ರರಂಗಕ್ಕೆ ಬಂದಿಲ್ಲ. ಚಿಕ್ಕಂದಿನಿಂದಲೇ ನಟಿಯಾಗುವ ಕನಸಿತ್ತು. ಚೆನ್ನಾಗಿ ಓದುತ್ತಿದ್ದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಶಾಲಾ –ಕಾಲೇಜು ದಿನಗಳಿಂದಲೇ ಭಾಗಿಯಾಗುತ್ತಿದೆ, ಸಿನಿಮಾ, ನಟನೆ, ಡಾನ್ಸ್‍ನಲ್ಲಿ ನನ್ನ ಹವ್ಯಾಸ. ಸಿನಿಮಾ ಬಗ್ಗೆ ಚಿಕ್ಕ ವಯಸ್ಸಿನಲ್ಲಿ ಒಲವು ಇದ್ದದುರಿಂದ ಮಾಡಲಿಂಗ್ ಆರಂಬಿಸಿದೆ. ಚಿಕ್ಕ ಬಾವಿಯಿಂದ ಆರಂಭಮಾಡಿ ಕೆರೆ, ನದಿ, ಇದೀಗ ಸಿನಿಮಾ ಎನ್ನುವ ಸಾಗರ ದಲ್ಲಿ ಈಜಲು ಬಂದಿದ್ದೇನೆ. ಮಾಡಲಿಂಗ್‍ನಲ್ಲಿ ತೊಡಗಿಸಿಕೊಂಡಿದ್ದರಿಂದ ಚಿತ್ರರಂಗ ಬರುವುದು ಸಲುಭವಾಯಿತು, ಬಂದ ತಕ್ಷಣ ನಾಯಕಿಯಾಗಿ ಅವಕಾಶ ಸಿಗಲಿಲ್ಲ. ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸುತ್ತಲೇ ನಾಯಕಿಯಾಗಿದ್ದೇನೆ.
• ಸಿನಿಮಾ ನಿಮ್ಮ ಪ್ರಕಾರ ಏನು
ಸಿನಿಮಾ ನನ್ನ ಪ್ರಕಾರ ಅನೇಕರಿಗೆ ಬದುಕು ನೀಡುವ ನೇಮು, ಫೇಮು ನೀಡುವ ಪವಿತ್ರ ಸ್ಥಳ ಅದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಸಿನಿಮಾ ಅಂದರೆ ನನಗೆ ಮೊದಲಿನಿಂದಲೂ ಹುಚ್ಚು. ಧಾರಾವಾಹಿಯಲ್ಲಿ ನಾಯಕಿಯಾಗಿ 6-7 ತಿಂಗಳು ನಟಿಸಿದೆ, ಸಿನಿಮಾ ಮೇಲಿನ ಅತಿಯಾದ ಪ್ರೀತಿಯಿಂದ ಧಾರಾವಾಹಿ ಬಿಟ್ಟು ಸಿನಿಮಾಕ್ಕೆ ಬಂದೆ. ಧಾರಾವಾಹಿಯಲ್ಲಿಯೇ ಇದ್ದರೆ ಸಿನಿಮಾಗೆ ಎಲ್ಲಿ ತೊಂದರೆ ಯಾಗುತ್ತೋ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡೆ. ನಟಿಯಾಗಿ ನನ್ನ ಕೆಲಸ ಬಗ್ಗೆ ಗೌರವ ಇದೆ, ದಿನ ಬೆಳಗ್ಗೆ ಆದರೆ ಮೇಕಪ್ ಗೆ ಪೂಜೆ ಮಾಡಿ ದಿನ ಆರಂಭಿಸುತ್ತೇನೆ.
• ಚಿಕ್ಕ ಪುಟ್ಟ ಪಾತ್ರದಿಂದ ಹಿಡಿದು ನಾಯಕಿಯಾಗುವ ತನಕ ನಿಮ್ಮ ಜರ್ನಿ ನೆನಪು ಮಾಡಿಕೊಳ್ಳುವುದಾದರೆ
ಇದು ಖುಷಿಯ ಕ್ಷಣ. ಅದನ್ನು ಎಂದಿಗೂ ಮರೆಯಲು ಆಗುವುದಿಲ್ಲ. ನೋಡಲು ಸುಂದರವಾಗಿದ್ದರಿಂದ ಜೊತೆಗೆ ನಟಿಯಾಗಬೇಕು ಎನ್ನುವ ಕನಸು ಇದ್ದುರಿಂದ ಸಿನಿಮಾ ರಂಗಕ್ಕೆ ಬಂದೆ. ಮೊದಲು ಮೊದಲು ನಾನು ಸುಂದರವಾಗಿದ್ದೇನೆ ಎನ್ನುವುದನ್ನು ಯಾರಾದರು ನೋಡಿ ಸಿನಿಮಾದಲ್ಲಿ ಅವಕಾಶ ನೀಡಲಿ ಎಂದು ಚಿತ್ರೀಕರಣ ಸ್ಥಳದಲ್ಲಿ ಕಾದು ಕುಳಿತಿದ್ದೂ ಉಂಟು. ಚಿತ್ರರಂಗದಲ್ಲಿ ಮುಂದೆ ಎಷ್ಟೇ ಎತ್ತರಕ್ಕೆ ಹೋದರೂ ನಡೆದು ಬಂದ ಹಾದಿಯನ್ನು ಮರೆಯುವುದಿಲ್ಲ.
• ನಟಿಯಾಗಿದ್ದರೆ ಏನಾಗಿರುತ್ತಿದ್ದಿರಿ
ನಾನು ಇಂಜಿನಿಯರಿಂಗ್ ಮಾಡಿದ್ದೇನೆ. ಈ ಕೆಲಸಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ನಟಿಯಾಗಬೇಕು ಎನ್ನುವುದು ನನ್ನ ಅಯ್ಕೆಯೇ ಹೊರತು ಬೇರೆ ಏನನ್ನು ಯೋಚನೆ ಮಾಡಿರಲಿಲ್ಲ. ಸಾಯುವ ತನಕ ನಟಿಯಾಗಿ ಮುಂದುವರಿಯುವ ಹಂಬಲ ಮತ್ತು ಕನಸಿದೆ.
• ಮೊದಲ ಚಿತ್ರ ಯಾವುದು
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿ ಬೋಪ್ಪಣ್ಣ ಮೊದಲ ಸಿನಿಮಾ ಚಿತ್ರ. ಚಿಕ್ಕ ಪಾತ್ರದ ಮೂಲಕ. ಮೊದಲ ಬಾರಿಗೆ ಕ್ಯಾಮರಾ ಮೆಕಪ್ ಹಚ್ಚಿದ್ದೇನೆ. ಖುಷಿ ಇದೆ. ಆನಂತರ ಹಲವು ಚಿತ್ರಗಲ್ಲಿ ನಟಿಸಿದ್ದೇನೆ. 1980 ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡೆ. ಅದಾದ ನಂತರ ಹಟ್ಟುಹಬ್ಬ ಶುಭಾಷಯಗಳು, ಸ್ಪೂಕಿ ಕಾಲೇಜು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ.
• ಯಾವ ರೀತಿಯ ಪಾತ್ರ ಮಾಡುವಾಸೆ. ಯಾವ ನಟಿರು ನಿಮಗೆ ಇಷ್ಟ.
ಗ್ಲಾಮರ್ ರೋಲ್, ಹಳ್ಳಿ ಹುಡುಗಿ ಸೇರಿದಂತೆ ಯಾವುದೇ ಪಾತ್ರ ಸಿಕ್ಕೂ ಅದಕ್ಕೆ ನ್ಯಾಯ ಒದಗಿಸಬೇಕು ಎನ್ನುವು ಉದ್ದೇಶ ನನ್ನದು. ಇತ್ತೀಚಿನ ನಟಿಯರಲ್ಲಿ ಸಾಯಿ ಪಲ್ಲವಿ ನನಗೆ ಸ್ಪೂರ್ತಿ ಮತ್ತು ಪ್ರೇರಣೆ. ಅವರ ರೀತಿ ಬೇರೆ ಬೇರೆ ಕಥೆಗಳು ಮತ್ತು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಜೊತೆಗೆ ಕನ್ನಡದ ನಟಿ ರಾಧಿಕಾ ಪಂಡಿತ್ ಕೂಡ ನನಗಿಷ್ಠ. ನೆಗೆಟೀವ್ ಅಥವಾ ಪಾಸಿಟೀವ್ ಯಾವುದೇ ಇರಲಿ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಗುರಿ ನನ್ನದು.
• ಚಿತ್ರರಂಗ ಮತ್ತು ಅಲ್ಲಿನ ಅನುಭವ ಹಂಚಿಕೊಳ್ಳುವುದಾದರೆ
ಎಲ್ಲಾ ಕ್ಷೇತ್ರದಲ್ಲಿ ಒಳ್ಳವರು ಕೆಟ್ಟವರು ಇದ್ದಾರೆ. ಎರಡೂ ಕೈ ತಟ್ಟಿದರೆ ಮಾತ್ರ ಚಪ್ಪಾಳೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಹೇಗೆ ಇರುತ್ತೇವೆಯೋ ಹಾಗೆ ಚಿತ್ರರಂಗ ನಮ್ಮನ್ನು ನಡೆಸಿಕೊಳ್ಳುತ್ತದೆ. ಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಒಳ್ಳೆಯ ಪಾತ್ರ ಮತ್ತು ಕಥೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ., ಸಿನಿಮಾ ರಂಗ ನನ್ನ ದೃಷ್ಠಿಯಲ್ಲಿ ದೇವಸ್ಥಾನವಿದ್ದಂತೆ ಪೂಜ್ಯ ಭಾವನೆ ಇದೆ.
• ಚಿತ್ರರಂಗದಲ್ಲಿ ನಿಮ್ಮ ಗುರಿ
ಚಿತ್ರರಂಗದಲ್ಲಿಯೇ ಕಡೆ ತನಕ ಇರಬೇಕು ಎಂದು ಬಂದವಳು ನಾನು. ಸಿಗುವ ಪಾತ್ರಕ್ಕೆ ಜೀವ ತುಂಬುವ ಮೂಲಕ ಯಾವುದೇ ಪಾತ್ರ ನೀಡಿದರೂ ಈಕೆ ಮಾಡುತ್ತಾಳೆ ಎಂದು ಚಿತ್ರರಂಗದಿಂದ ಕರೆಸಿಕೊಳ್ಳಬೇಕು ಆಸೆ ಮತ್ತು ಗುರಿ ಇದೆ. ದೇಹದಲ್ಲಿ ಉಸಿರುವ ಇರುವ ತನಕ ನಟಿಯಾಗಿಯೇ ಇರಬೇಕು ಎನ್ನುವ ಆಸೆ ಇದೆ. ಸಿನಿಮಾ ರಂಗದಲ್ಲಿ ಒಂದೇ ಎರಡೋ ಚಿತ್ರ ಮಾಡಿ ಹೋಗಲು ಬಂದಿಲ್ಲ ಸಿನಿಮಾದಿಂದ ದುಡ್ಡು ಆಸೆ ಇಲ್ಲ, ಪ್ರೀತಿಯಿಂದ ಬಂದಿದ್ದೇನೆ ದೇವರನ್ನು ಪ್ರಿತಿಸುವ ರೀತಿ ಸಿನಿಮಾ ರಂಗವನ್ನು ಪೂಜಿಸುತ್ತೇನೆ, ಜನರ ಮನಸ್ಸಿನಲ್ಲಿ ಒಳ್ಳೆಯ ನಟಿಯಾಗಿ ಗುರುತಿಸಿಕೊಳ್ಳುವ ಆಸೆ ಇದೆ.
• ಸದ್ಯ ಯಾವಾವ ಚಿತ್ರಗಳು ಕೈಯಲ್ಲಿವೆ
ನಗುವಿನ ಹೂವುಗಳ ಮೇಲೆ ಬಿಡುಗಡೆ ಸಿzದ್ದವಾಗಿದೆ ಯಾವಾಗ ಬಿಡುಗಡೆ ಎನ್ನುವುದು ಗೊತ್ತಿಲ್ಲ. ಚಂದ್ರಮೋಹನ್ ನಿರ್ದೇಶನ ಚಿತ್ರ ಹೊಸ ಚಿತ್ರ ನವಂಬರ್‍ನಲ್ಲಿ ಆರಂಭವಾಗಲಿದೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ಈ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಲಿದೆ.
• ಚಿತ್ರರಂಗಕ್ಕೆ ಬಂದಾಗ ಮನೆಯವರ ಬೆಂಬಲ ಹೇಗಿತ್ತು
ನಮ್ಮದು ಸಂಪ್ರದಾಯಸ್ಥ ಕುಟುಂಬ.ಮೊದಲು ಚಿತ್ರರಂಗಕ್ಕೆ ಬರುತ್ತೇನೆ ಎಂದಾಗ ಬೆಂಬಲ ಸಿಕ್ಕಿರಲಿಲ್ಲ, ನನಗೆ ಚಿಕ್ಕಂದಿನಿಂದ ಇರುವಾಗಲೂ ನಾಯಕಿಯಾಗಬೇಕು ಎನ್ನುವ ಕನಸು ಮತ್ತು ಗುರಿಇತ್ತು. ಆದರೆ ಮನೆಯವರಿಗೆ ನಮ್ಮ ಹುಡುಗಿ ಚಿತ್ರರಂಗಕ್ಕೆ ಹೋದರೆ ಅವಳಿಗೆ ಹುಡುಗು ಸಿಗುವುದಿಲ್ಲ ಮದುವೆಯಾಗಲು ಕಷ್ಟವಾಗತ್ತದೆ ಎನ್ನುವ ಭಾವನೆ ಪೋಷಕರಲ್ಲಿದೆ. ಇದೀಗ ಅಪ್ಪ-ಅಮ್ಮನ ಬೆಂಬಲವಿದೆ, ಸಿನಿಮಾ ರಂಗದ ಬಗ್ಗೆ ಗೌರವೂ ಹೆಚ್ಚಿದೆ