ಶೇಕ್ ಇಟ್ “ಪುಷ್ಟವತಿ” ಹಾಡು ಸಿನಿಮಾ ಕೆರಿಯರ್ ಬದಲಿಸಿದೆ: ನಟಿ ನಿಮಿಕಾ ರತ್ನಾಕರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕ್ರಾಂತಿ” ಚಿತ್ರದ ಪದ್ಮಾವತಿ ಹಾಡಿನಲ್ಲಿ ಕಾಣಿಸಿಕೊಂಡು ಕರ್ನಾಟಕದ ಕ್ರಷ್ ಆಗಿದ್ದಾರೆ ನಟಿ ನಿಮಿಕಾ ರತ್ನಾಕರ್. ಒಂದೇ ಒಂದು ಹಾಡು ಹೆಚ್ಚು ಜನಪ್ರಿಯತೆ ಮತ್ತು ಚಿತ್ರರರಂಗದಲ್ಲಿ ಗುರುತು ಸಿಗುವಂತೆ ಮಾಡಿದೆ. ಇದರ ಬೆನ್ನಲ್ಲೇ ಹಲವು ಚಿತ್ರಗಳಿಂದ ನಿಮಿಕಾ ರತ್ನಾಕರ್ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದಿವೆ.

• ಮೊದಲ ಚಿತ್ರ ಯಾವುದು
ಇಂಜಿನಿಯರ್ ಪೂರ್ಣಗೊಳಿಸಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದೆ. ಮಿಸ್ ಇಂಡಿಯಾ ಸೂಪರ್ ಟಾಲೆಂಟ್ ಸ್ಪರ್ಧೆಯಲ್ಲಿ ಗೆದ್ದು ಮಿಸ್ ಸೂಪರ್ ಟಾಲೆಂಟ್ ವಲ್ಡ್ ಗೆ ಆಯ್ಕೆಯಾಗಿದ್ದೆ. ರಜೆ ಕೊಟ್ಟಿರಲಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟು ಹೋಗದ್ದೆ. ವಾಪಸ್ ಬಂದ ನಂತರ ಕೆಲಸ ಇರಲಿಲ್ಲ, ರಾಮಧನ್ಯ ಚಿತ್ರಕ್ಕೆ ಆಡಿಷನ್ ಕೊಟ್ಟೆ. ಚಿತ್ರಕ್ಕೆ ಆಯ್ಕೆಯಾಗಿದೆ. ಆಕಸ್ಮಿಕವಾಗಿ ಪ್ರವೇಶ
• ನಾಯಕಿಯಾಗದಿದ್ದರೆ ಏನಾಗಿರುತ್ತಿದ್ದಿರಿ
ಹಾಡು ಹಾಡುವುದು ಎಂದರೆ ನನಗೆ ಇಷ್ಟ. ಮೂರು ವರ್ಷ ಕೆಎಎಸ್ ಪ್ರಿಮಿಲ್ಸ್ ಪಾಸ್ ಮಾಡಿದ್ದೆ. ಏನೇ ಅಂದುಕೊಂಡಿದ್ದೆ, ಏನೋ ಆಯ್ತು, ನಾಯಕಿಯಾಗಿದ್ದೇನೆ.

• ಮೊದಲ ಸಿನಿಮಾ ಅನುಭವ
ರಾಮಧನ್ಯ ಮೊದಲು ಮಾಡಿದ ಚಿತ್ರ. ನಾನು ಚಿಕ್ಕವಯಸ್ಸಿನರಿವಾಗ ಅಪ್ಪ ನಿರ್ಮಾಣ ಮಾಡಿದ್ದ ಚಿತ್ರದಲ್ಲಿ ಸಣ್ಣ ಪಾತರ ಪಾತ್ರ ಮಾಡಿದ್ದೆ. ಆದರೆ ರಾಮಧನ್ಯ ಮೊದಲ ಚಿತ್ರ.
• ಚಿತ್ರರಂಗದ ಅನುಭವ ಹಂಚಿಕೊಳ್ಳುವುದಾದರೆ
ತುಂಬಾನೇ ಚೆನ್ನಾಗಿದೆ. ಕೋವಿಡ್ ಎರಡು ವರ್ಷ ಬಿಟ್ಟರೆ ಎಲ್ಲವೂ ಚೆನ್ನಾಗಿದೆ. ಕಳೆದ ವರ್ಷ ನನ್ನ ಕೆರಿಯರ್ ಅಂತ್ಯವಾಯಿತು ಅಂದುಕೊಂಡೆ ಆಗ ಸಿಕ್ಕಿದ್ದೇ ಕ್ರಾಂತಿ ಚಿತ್ರದಲ್ಲಿ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ.

• ಯಾವ ರೀತಿಯ ಪಾತ್ರದಲ್ಲಿ ನಟಿಸುವ ಆಸೆ
ಇಂತಹುದೇ ಪಾತ್ರ ಬೇಕು ಎನ್ನುವ ಆಸೆ ಇಲ್ಲ. ಯಾಕಂದ್ರೆ, ನಾನು ಹೊಸಬಳು. ಮಾಡದಿರುವ ಎಲ್ಲ ಪಾತ್ರಗಳಲ್ಲಿ ನಟಿಸುವ ಆಸೆ ಇದೆ.

• ಯಾವ ನಟಿಯರು ನಿಮಗೆ ಇಷ್ಟ
ಸಿನಿಮಾ ಶ್ರಿದೇವಿ ಮತ್ತು ಮಾಲಾಶ್ರೀ ನನ್ನ ರೋಲ್ ಮಾಡಲ್ ಅವರ ರೀತಿ ಪಾತ್ರ ಮಾಡಿ ಹೆಸರು ಮಾಡುವ ಆಸೆ ಇದೆ

• ಈಗ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದೀರಾ
ತ್ರಿಶೂಲ'' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಓಂ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ , ರವಿಶಂಕರ್ ಇದ್ದಾರೆ ಚಿತ್ರದಲ್ಲಿ ನನ್ನದು ಉಪೇಂದ್ರ ಅವರ ಜೋಡಿ. ಡಬ್ಬಿಂಗ್ ಮುಗಿದಿದೆ. ಹಾಡು ಬಾಕಿ ಇದೆ. ಯಾವಾಗ ಬಿಡುಗಡೆ ಎನ್ನವುದು ಇನ್ನೂ ಗೊತ್ತಿಲ್ಲ,
ಫೀನಿಕ್ಸ್ “ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಅವರೇ ನಿರ್ದೇಶಕರು. ಇದೊಂದು ಮಹಿಳಾ ಪ್ರಧಾನ ಚಿತ್ರ. ನಟಿಸಲು ಕಾತುರಳಾಗಿದ್ದೇನೆ

- ಸಿನಿಮಾ ರಂಗದಲ್ಲಿ ನಿಮ್ಮ ಗುರಿ
ಚಿತ್ರರಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಮನರಂಜಿಸುವ ಗುರಿ ಹೊಂದಿದ್ದೇನೆ. ಪ್ರೀತಿ ಪಡೆಯಬೇಕು. ಇನ್ನು ಒಂದಷ್ಟು ವರ್ಷ ಚಿತ್ರರಂಗದಲ್ಲಿ ಇರಬೇಕು.
- ಕುಟುಂಬದ ಬೆಂಬಲ ಹೇಗಿದೆ
ತಮ್ಮ ಬೆಂಬಲ ನೀಡಿದ್ದ, ಅಪ್ಪ 8 ತಿಂಗಳು ನನ್ನ ಜೊತೆ ಮಾತನಾಡಿರಲಿಲ್ಲ. ಅಮ್ಮ ಗೊಂದಲದಲ್ಲಿದ್ರು, ಅಪ್ಪ ಆ ನಂತರ ಮಾತನಾಡಲು ಮಾತು ಆರಂಭಿಸಿದ್ದರು. ಅಪ್ಪ ಮಾತನಾಡಿದ್ದ 8 ತಿಂಗಳು ಜೀವನದ ಕೆಟ್ಟ ದಿನಗಳು. ಸಿನಿಮಾ ಸಿಕ್ಕ ಖುಷಿಗಿಂತ ಅಪ್ಪ ಮಾತನಾಡಲಿಲ್ಲ ಎನ್ನುವ ಬೇಜಾರಿತ್ತು.

- ಏನಾದರೂ ಹೇಳಬೇಕು ಅಂದರೆ
ಪುಷ್ಪವತಿ ಚಿತ್ರದ ಹಾಡಿನ ನಂತರ ಕೆರಿಯರ್ ಲೈಫ್ ಬದಲಾಗಿದೆ. ಹಾಡಿಗಿಂತ ಮುಂಚೆ ಅನೇಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ನನ್ನನ್ನು ಗುರಿತಿಸಿರಲಿಲ್ಲ. ಹಾಡಿನ ನಂತರ ನನ್ನನ್ನು ಗುರುತಿಸು ಪ್ರೀತಿ ಮರೆಯಲಾಗದ್ದು ,ಡಿ ಭಾಸ್ ಅಭಿಮಾನಿಗಳು ಹೆಚ್ಚು ಕರ್ನಾಟಕ ಕ್ರಷ್, ಡಾರ್ಲಿಂಗ್, ಬೇರೆ ಬೇರೆ ಹೆಸರಿನಿಂದ ಕರೀತಾರೆ. ಇದು ಖುಷಿಯ ವಿಚಾರ