ಅವಕಾಶ ಸಿಕ್ಕರೆ “ಡಿ ಬಾಸ್” ಜೊತೆ ಮತ್ತಷ್ಟು ಚಿತ್ರಗಳಲ್ಲಿ ನಟನೆ: ನಟ ವಿನೋದ್ ಪ್ರಭಾಕರ್
ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ಟೈಗರ್ ಪ್ರಭಾಕರ್ ಪುತ್ರ ಮರಿ ಟೈಗರ್ ಎಂದೇ ಖ್ಯಾತಿ ಪಡೆದಿರುವ ನಟ ವಿನೋದ್ ಪ್ರಭಾಕರ್ ಚಿತ್ರರಂಗ ನಂಟಿನೊಂದಿಗೆ ಬೆಳದರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಂಡಿತ್ತು. ಕಷ್ಟದ ದಿನಗಳನ್ನೆ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಬ್ಯುಸಿ ನಟರಾಗಿದ್ದಾರೆ. ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುವುದು ನನ್ನ ಉದ್ದೇಶ ನಾನೊಬ್ಬ ನಿರ್ದೇಶಕರ ನಟ ಎಂದು ನಮ್ರತೆಯಿಂದ ಹೇಳಿಕೊಂಡಿದ್ದಾರೆ.
ನಟನಾಗಿ ಗುರುತಿಸಿಕೊಳ್ಳಲು ಕಷ್ಟಪಡುತ್ತಲೇ ಟೈಗರ್ ಟಾಕೀಸ್ ಹುಟ್ಟು ಹಾಕುವ ಮೂಲಕ ನಿರ್ಮಾಪಕರೂ ಆಗಿದ್ದಾರೆ .ಒಳ್ಳೆಯ ಕಥೆ ಅವಕಾಶ ಸಿಕ್ಕರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಆಸೆ ಇದೆ ಎಂದಿದ್ದಾರೆ.ಸಿನಿಮಾಯಾನದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ವಿನೋದ್ ಪ್ರಭಾಕರ್, ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿ ಸ್ಮರಿಸಿದ್ದಾರೆ.
• ನಟ ದರ್ಶನ್ ಜೊತೆ ಎರಡು ಸಿನಿಮಾ ಮಾಡಿದ್ದೀರಿ ಮತ್ತೆ ನಟಿಸುವ ಆಸೆ ಇದೆಯಾ
ನವಗ್ರಹ'' ಚಿತ್ರದ ಬಳಿಕ
ರಾಬರ್ಟ್” ಚಿತ್ರದಲ್ಲಿ ದರ್ಶನ್ ಸಾರ್ ಜೊತೆ ಕೆಲಸ ಮಾಡಿದ್ದೇನೆ, ಅವಕಾಶ ಮತ್ತು ಒಳ್ಳೆಯ ಕಥೆ ಹೊಂದಿಕೆಯಾಗುವ ಪಾತ್ರ ಸಿಕ್ಕರೆ ಕಂಡಿತಾ ಡಿ ಬಾಸ್ ಜೊತೆ ಸಿನಿಮಾ ಮಾಡುವೆ ಎಂದಿದ್ದಾರೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಬಾಸ್ ಜೊತೆ ಈಗ ಮಾಡಿರುವ ಎರಡೂ ಚಿತ್ರಗಳು ಒಳ್ಳೆಯ ಹೆಸರು ತಂದಿಕೊಟ್ಟಿವೆ.
• ನೀವು ದರ್ಶನ್ ಅವರನ್ನು ಏನೆಂದು ಕರೆಯುತ್ತೀರಾ, ಅವರ ಸಹಕಾರದ ಬಗ್ಗೆ ಹೇಳುವುದಾದರೆ
ದರ್ಶನ್ ಸಾರ್ ಅವರ ಅಭಿಮಾನಿ ನಾನು. ಅವರನ್ನು ಬಾಸ್ ಎಂದೇ ಕರೆಯುವುದು. ಅವರು ನನ್ನನ್ನು ಟೈಗರ್ ಎನ್ನುತ್ತಾರೆ. ಇಬ್ಬರ ನಡುವಿನ ಬಾಂಧವ್ಯ ಚೆನ್ನಾಗಿದೆ. ಅದನ್ನು ಕೊನೆ ತನಕ ಕಾಪಾಡಿಕೊಳ್ಳುವ ಉದ್ದೇಶವಿದೆ, ಪೆÇ್ರಡಕ್ಷನ್ ಸಂಸ್ಥೆ ಆರಂಭ ಮಾಡ್ತೇನೆ ಎಂದಾಗ ಡಿ ಬಾಸ್ ಖುಷಿಯಿಂದ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಯಾವಾಗ ನನ್ನ ಕಡೆ ಸಹಾಯ ಬೇಕು ಬಾ ಎನ್ನುವ ದೊಡ್ಡ ಗುಣ ಪ್ರದರ್ಶಿಸಿದ್ದಾರೆ. ಅದರ ಪ್ರೀತಿಯ,ಬೆಂಬಲವೇ ನನಗೆ ಶ್ರೀರಕ್ಷೆ, ಹೀಗಾಗಿ ಒಮ್ಮೆಯೂ ಹಣಕಾಸಿನ ವಿಷಯ ಅವರ ಬಳಿ ಪ್ರಸ್ತಾಪ ಮಾಡಿಲ್ಲ. ನಾನು ಅವರನ್ನು ಬಾಸ್ ಎಂದೇ ಕರೆಯುವುದು ಅವರು ಟೈಗರ್ ಎನ್ನುತ್ತಾರೆ. ನಮ್ಮಿಬ್ಬರ ಮಧ್ಯೆ ಅವರು ಹಿರಿಯಣ್ಣನ ಸ್ಥಾನದಲ್ಲಿದ್ದಾರೆ.
• ನಾಯಕನಾಗುವ ಮುನ್ನ ನಿಮ್ಮ ಬಗ್ಗೆ ಹೇಳುವುದಾದರೆ
ಚಿತ್ರರಂಗಕ್ಕೆ ಬಂದಾಗ ಎಲ್ಲವೂ ಅರಿವಾಗುವ ವೇಳೆಗೆ ಮೂರು ಸಿನಿಮಾ ಮಾಡಿದ್ದೆ. ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದು ಗೊತ್ತಿರಲಿಲ್ಲ. ಆ ಬಳಿಕ “ ಮೂರು ವರ್ಷ ಸಿನಿಮಾ ಇರಲಿಲ್ಲ. ಹೊಸಕರೆಹಳ್ಳಿ ಮನೆಯಲ್ಲಿ ಕಿಟಕಿ ಬಾಗಿಲು ಮುಂದೆ ದಿನಾ ಬೆಳಗಾದರೆ ಕೆಲಸಕ್ಕೆ ಹೋಗಿ ಬರುವವರನ್ನು ನೋಡಿ ಕಾಲ ಕಳೆದಿದ್ದೇನೆ. ಕೆಲಸವಿಲ್ಲ ,ಕೈಯಲ್ಲಿ ಕಾಸಿಲ್ಲ. ಅಮ್ಮ, ಎದ್ದೋಗಿ ತಿಂಡಿ ತಿನ್ನು ಅನ್ನುವ ತನಕ ಕಿಟಕಿ ಬಾಗಿಲ ಬಳಿಯೇ ಕುಳಿತುಕೊಳ್ಳುತ್ತಿದ್ದೆ.
• ನಿಮ್ಮ ಬದುಕಲ್ಲಿ ನಿಮ್ಮ ಪತ್ನಿ ನಿಶಾ ಪಾತ್ರ ಏನು
ನಾನು ಏನೂ ಅಲ್ಲದಿದ್ದಾಗ, ನನ್ನ ಬಳಿ ಹಣವಿಲ್ಲದಾಗಲೂ ಪ್ರೀತಿಸಿದ ಹುಡುಗಿ ಕೈ ಹಿಡಿದು ಮುನ್ನೆಡೆಸಿದ್ದಾರೆ. ಕಷ್ಟದಲ್ಲಿದ್ದಾಗಲೂ ಯಾವುದಕ್ಕೂ ಗಮನ ಕೊಡದೆ ಬೆನ್ನೆಲುಬಾಗಿ ನಿಂತು, ಜೀವನದ ಅರ್ಧಾಂಗಿಯಾಗಿ ಬಂದು ಬದುಕು ಸರಿತೂಗಿಸಿಕೊಂಡು ಹೋಗುತ್ತಿದ್ದಾರೆ. ಇಂದು ಬದುಕಿನಲ್ಲಿ ,ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಕಾರಣ ಪತ್ನಿ ನಿಶಾ. ಇಂದು ನಾನು ನಟನಾಗಿ ನಿರ್ಮಾಪಕನಾಗಿ ಗುರುತಿಸಿಕೊಳ್ಳಲು ಪತ್ನಿ ನಿಶಾ ಅವರೇ ಕಾರಣ .ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು.ಚಿತ್ರರಂಗದಲ್ಲಿ ಸರಿ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಸಿ, ಜೀವನ ಅಂದ್ರೆ ಹಾಗಲ್ಲ, ಹೀಗೆ ಎನ್ನುವುದನ್ನು ಪರಿಚಯ ಮಾಡಿದಾಕೆ. ನಟನನ್ನು ನಿರ್ಮಾಪಕನ್ನಾಗಿ ಮಾಡಿದ್ದಾರೆ. ಬದುಕಿನಲ್ಲಿ ಬಂದ ಭಾಗ್ಯದ ಬೆಳಕು ಪತ್ನಿ .
• ನಿಮ್ಮ ಸಾಮಥ್ರ್ಯ ಮತ್ತು ವೀಕ್ನೆಸ್ ಏನು
ನನ್ನ ಚಿತ್ರಗಳಿಗೆ ಎಷ್ಟು ಬಂಡವಾಳ ಹಾಕಿದರೆ ಅದು ಮರಳಿ ಬರುತ್ತದೆ ಎನ್ನುವ ಸಾಮಥ್ರ್ಯದ ಅರಿವು ನನಗಿದೆ ಅದು ನನ್ನ ಸಾಮಥ್ರ್ಯ ಹೀಗಾಗಿ ಯಾರಾದರೂ 10 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನೇ ಬೇಡ ಎನ್ನುತ್ತೇನೆ. ಐದಾರು ಕೋಟಿ ರೂಪಾಯಿಯಲ್ಲಿ ಸಿನಿಮಾ ಮಾಡಿ ಎನ್ನುತ್ತೇನೆ. ನಿರ್ಮಾಪಕ ಹಾಕಿದ ಬಂಡವಾಳ ವಾಪಸ್‍ಬರಬೇಕು,ಅದುವೇ ನನ್ನ ಗುರಿ, ನನ್ನ ಸಾಮಥ್ರ್ಯಕ್ಕಿಂತ 25 ರಿಂದ 50 ಲಕ್ಷ ಮಾತ್ರ ಹಾಕಿ ಅದರ ಮೇಲೆ ಹಾಕಬೇಡಿ ಎಂದು ಹೇಳುತ್ತೇನೆ. 10 ಕೋಟಿ ಬಂಡವಾಳ ಹಾಕಿ 5ರಿಂದ 6 ಕೋಟಿ ಹಣ ವಾಪಸ್ ಬಂದರೆ ನಿರ್ಮಾಪಕರಿಗೆ ನಾಲ್ಕೈದು ಕೋಟಿ ನಷ್ಟವಾಗುತ್ತದೆ. ಇದರಿಂದ ಆ ನಿರ್ಮಾಪಕ ನನಗೆ ಮತ್ತೆ ಚಿತ್ರ ನಿರ್ಮಾಣ ಮಾಡುವುದಿಲ್ಲ. ಜೊತೆಗೆ ನನಗಾಗಿ ಚಿತ್ರ ನಿರ್ಮಾಣ ಮಾಡಲು ಮುಂದಾಗುವ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹಾಕಲು ಹಿಂಜರಿಯುತ್ತಾರೆ. ಹೀಗಾಗಿ ನಿರ್ಮಾಪಕನ್ನು ಕಳೆದುಕೊಳ್ಳಲು ಬಯಸುವುದಿಲ್ಲ
• ಟೈಸನ್ ನಿಮಗೆ ಯಶಸ್ಸು ತಂದುಕೊಟ್ಟ ಮೊದಲ ಚಿತ್ರ ಅದರ ಬಗ್ಗೆ
ಟೈಸನ್ ಚಿತ್ರದಿಂದ ಹೆಚ್ಚು ಲಾಭವಾಗಿದೆ, ಹೀಗಾಗಿ ಆ ನಿರ್ಮಾಪಕ ಬಾಬು ರೆಡ್ಡಿ ಅವರು ಯಾವಾಗ ಬಂದರೂ ಆವರಿಗಾಗಿ ಸಿನಿಮಾ ಮಾಡುತ್ತೇನೆ. ಅವರು ಬಂಡವಾಳ ಹಾಕದಿದ್ದರೂ ಸರಿ ಅವರ ಬ್ಯಾನರ್ ಹೆಸರಲ್ಲಿ ನಿರ್ಮಾಣ ಮಾಡಲು ನಾವೇ ಬಂಡವಾಳ ಹಾಕಿ ಬಂದ ಲಾಭದಲ್ಲಿ ಶೇರು ಕೊಡುತ್ತೇವೆನನ್ನ ಕೆರಿಯರ್ನಲ್ಲಿ ಯಶಸ್ಸು ಕಂಡ ಮೊದಲ ಚಿತ್ರ ಟೈಸನ್, ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾರ್ ಕ್ಲಾಪ್ ಮಾಡಿ ಹಸಿದ್ದರು. ಅದನ್ನು ಮರೆಯಲು ಸಾಧ್ಯವಿಲ್ಲ ಎಂದರು.
• ಟೈಗರ್ ಟಾಕೀಸ್‍ನಿಂದ ಮೊದಲ ನಿರ್ಮಾಣ ಬಗ್ಗೆ ಹೇಳುವುದಾದರೆ
“ಟೈಗರ್ ಟಾಕೀಸ್ ಅಡಿ ನಿರ್ಮಾಣ ಮಾಡಿರುವ “ಲಂಕಾಸುರ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ನಿರ್ಮಾಣ ಮಾಡುವ ಸಮಯದಲ್ಲಿ ದುಡ್ಡಿಗಾಗಿ ಯಾರೆಲ್ಲಾ ಮನೆ ಮುಂದೆ ಬೆಳ್ಳಂ ಬೆಳಗ್ಗೆ ಪತ್ನಿ ಜೊತೆ ಹೋಗಿದ್ದೇವೆ ಕೆಲವರು, ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ನೈತಿಕವಾಗಿ ಬೆಂಬಲಕ್ಕೆ ನೀಡಿದ್ದಾರೆ. ಇನ್ನೂ ಕೆಲವರು ತಂತ್ರಜ್ಷರು ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಅದನ್ನು ಮರೆಯಲು ಸಾಧ್ಯವಿಲ್ಲ. ಎಲ್ಲಾ ಅಂದುಕೊಂಡಂತೆ ಆದರೆ ನವಂಬರ್ ಡಿಸೆಂಬರ್ ನಲ್ಲಿ ತೆರೆಗೆ ತರುವ ಉದ್ದೇಶವಿದೆ.