Actor Kichcha Sudeep is like school: working with him is indescribable: Vijay Chendur

ನಟ ಕಿಚ್ಚ ಸುದೀಪ್ ಶಾಲೆಯಿದ್ದಂತೆ: ಅವರ ಜೊತೆ ಕೆಲಸ ವರ್ಣಿಸಲಾಧ್ಯ: ವಿಜಯ್ ಚೆಂಡೂರ್ - CineNewsKannada.com

ನಟ ಕಿಚ್ಚ ಸುದೀಪ್ ಶಾಲೆಯಿದ್ದಂತೆ: ಅವರ ಜೊತೆ ಕೆಲಸ ವರ್ಣಿಸಲಾಧ್ಯ: ವಿಜಯ್ ಚೆಂಡೂರ್

ಕನ್ನಡದ ಬಹುಬೇಡಿಕೆಯ ಹಾಸ್ಯಕಲಾವಿದರಾಗಿ ಗುರುತಿಸಿಕೊಂಡಿರುವ ವಿಜಯ್ ಚೆಂಡೂರ್, ಚಿತ್ರದಿಂದ ಚಿತ್ರಕ್ಕೆ ತಮ್ಮ ಅನುಭವ ಹೆಚ್ಚಿಸಿಕೊಳ್ಳುತ್ತಾ ಪ್ರೇಕ್ಷಕರನ್ನು ಮತ್ತಷ್ಟು ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ಮೂಲಕ ಕನ್ನಡದಲ್ಲಿ “ ಹಾರರ್ ಸ್ಟಾರ್” ಎಂದು ಸ್ನೇಹಿತರು, ಆಪ್ತ ವಲಯ ಹಾಗು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ.

ಕಂಟೆಂಟ್ ಆಧಾರಿತ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಹಾದಾಸೆ ವ್ಯಕ್ತಪಡಿಸಿದ ಅವರು ಪ್ರೇಕ್ಷಕರನ್ನು ನಗಿಸಲು ಮತ್ತು ಅವರಿಗೆ ಮನರಂಜನೆ ನೀಡಲು ನಾಯಕನ ಪಾತ್ರ ಮಾಡಿಯೇ ರಂಜಿಸಬೇಕಾಗಿಲ್ಲ. ತೆರೆಯ ಮೇಲೆ ಎಷ್ಟು ಅವಧಿ ಎನ್ನುವುದಕ್ಕಿಂತ ಕಾಣಿಸಿಕೊಂಡಷ್ಟು ಜನರಿಗೆ ಮನರಂಜನೆ ನೀಡಿ ಅವರನ್ನು ಖುಷಿಪಡಿಸುವುದೇ ಕಲಾವಿದನ ಕೆಲಸ ಎನ್ನುತ್ತಾರೆ.ನಟ,ನಿರ್ದೇಶಕ ಕಿಚ್ಚ ಸುದೀಪ್ ಅವರ ಜೊತೆ ಮೊದಲ ಬಾರಿಗೆ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದುವೇ “ಮ್ಯಾಕ್ಸ್”. ಕನ್ನಡ ಸೇರಿದಂತೆ ಪಂಚ ಭಾಷೆಯಲ್ಲಿ ಚಿತ್ರ ಮೂಡಿಬರುತ್ತಿದೆ.

• ಕಿಚ್ಚ ಸುದೀಪ ಅವರ ಜೊತೆ ಕೆಲಸ ಮಾಡುತ್ತಿರುವ ಅನುಭವ ಹೇಗಿದೆ

ಎಕ್ಸಲೆಂಟ್. ವರ್ಣಿಸಲಸಾಧ್ಯ. ಅವರೊಂದು ಶಾಲೆ ಇದ್ದಂತೆ, ಅವರ ಫರ್ಫೆಕ್ಟ್. ಅಂದುಕೊಂಡಿದ್ದನ್ನು ತೆರೆಯ ಮೇಲೆ ತರಬೇಕು ಎನ್ನುವ ಅವರ ಕೆಲಸ ಮತ್ತು ಕೆಲಸದ ಮೇಲೆ ಇಟ್ಟಿರುವ ಪೀತಿ ಅದಕ್ಕೆ ನಾವೆಲ್ಲಾ ಫಿಧಾ. ಕಿಚ್ಚ ಸುದೀಪ್ ಶಿಸ್ತಿನ ಮನುಷ್ಯ. ಜೊತೆಗೆ ಅದ್ಬುತ ತಂತ್ರಜ್ಞ, ಕಲಾವಿದ, ನಿರ್ದೇಶಕ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದುದು ನನ್ನ ಪುಣ್ಯ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಥ್ರಿಲ್ಲಿಂಗ್ ಅನುಭವ. ಅವಕಾಶ ಸಿಕ್ಕರೆ ಮತ್ತೆ ಮತ್ತೆ ಅವರ ಜೊತೆ ನಟಿಸುವ ಆಸೆ ಇದೆ.

• ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ

ಚಿತ್ರದ ಬಗ್ಗೆ ಹಾಗು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಹಾಗಿಲ್ಲ. ಆದರೆ ಸುದೀಪ್ ಸಾರ್ ಅವರ ಜೊತೆ ಸಾಗುವ ಮುದ್ದಾದ ಪಾತ್ರ. ಚಿತ್ರ ಎಲ್ಲಿರಗೂ ಇಷ್ಟವಾಗಲಿದೆ ಎನ್ನುವ ಮೂಲಕ ಚಿತ್ರ ಮತ್ತು ಪಾತ್ರದ ಬಗ್ಗೆ ಕುತೂಹಲ ಮತ್ತಷ್ಟು ಕೆರಳಿಸುವಂತೆ ಮಾಡಿದರು.ಚಿತ್ರಕ್ಕೆ ಕಲೈ ಪುಲಿಥಾನು ಬಂಡವಾಳ ಹಾಕಿದ್ದು , ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡದ ಖ್ಯಾತ ಛಾಯಾಗ್ರಾಹಕರಾದ ಶೇಖರ್ ಚಂದ್ರ ಮತ್ತು ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಕೆಲಸ ಚಿತ್ರಕ್ಕಿದೆ. ಹೀಗಾಗಿ ಕನ್ನಡ ಸೇರಿದಂತೆ ಭಾರತೀಯ ಭಾಷೆಯಲ್ಲಿ ಮ್ಯಾಕ್ಸ್ ಅದ್ಬುತ ಚಿತ್ರವಾಗುವುದರಲ್ಲಿ ಯಾವುದೇ ಸಂದೇಹ ಮತ್ತು ಸಂಶಯವಿಲ್ಲ.

• ಇದುವರೆಗೂ ಎಷ್ಟು ಚಿತ್ರವಾಯಿತು. ಆ ಬಗ್ಗೆ ಮಾಹಿತಿ

76 ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರ ಮಾಡಿದ್ದೇನೆ. ಕೆಲವು ಚಿತ್ರಗಳ ಪಾತ್ರಗಳಿಗೆ ಮನಸ್ಸಿಗೆ ತುಂಬಾನೇ ಇಷ್ಟವಾಗಿವೆ. ಕೆಲವು ನಿರ್ದೇಶಕರು ನಿರ್ಮಾಪಕರು ಚಿತ್ರಕ್ಕೆ ನಾನೇ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದು ಇದೆ. ಇನ್ನೂ ಕೆಲವು ಕಡೆ ಸಾವಿರ ಹೂಗಳ ಮಧ್ಯೆ ನನ್ನದೂ ಒಂದು ಹೂ ಎನ್ನುವಂತೆ ಇರುತ್ತದೆ. ಚಿತ್ರ ಮತ್ತು ಪಾತ್ರದ ಮೇಲೆ ಸಂಭಾವನೆಯೂ ನಿಗಧಿಯಾಗುತ್ತದೆ. ಯಾವುದೇ ಪಾತ್ರ ಸಿಕ್ಕರೂ ಅದಕ್ಕೆ ಜೀವ ತುಂಬುದುದಷ್ಟೇ ನನ್ನ ಕೆಲಸ.

• ನಿಮ್ಮನ್ನು ಹಾರರ್ ಸ್ಟಾರ್ ಅನ್ನುತ್ತಾರೆ . ಈ ಬಗ್ಗೆ ಹೇಳುವುದಾದರೆ

ನಾನು ಹೆಚ್ಚು ಹಾರರ್ ಜಾನರ್ ಸಿನಿಮಾಗಳಲ್ಲಿ ನಟಿಸಿದ್ದರಿಂದ “ಹಾರರ್ ಸ್ಟಾರ್” ಎಂದು ಕರೆಯುತ್ತಾರೆ. ಜನರು ಮತ್ತು ಪ್ರೇಕ್ಷಕರು ಗುರುತಿಸುವುದು ಮುಖ್ಯ. ಅದು ಖುಷಿಯ ಸಂಗತಿ, ಚಿತ್ರದಲ್ಲಿ ನಟಿಸುವಾಗ ಪಾತ್ರಕ್ಕೆ ಜೀವ ತುಂಬಬೇಕು ಎನ್ನುವ ಉದ್ದೇಶ ನನ್ನದು. ಹೀಗಾಗಿ ಹಾರರ್ ಚಿತ್ರಗಳು ನನ್ನ ಪಾಲಿಗೆ ಹೆಚ್ಚಾಗಿ ಬಂದವು. ಹೀಗಾಗಿ ಜನರು ತಮ್ಮ ಮೇಲಿನ ಪ್ರೀತಿಗೆ ಹಾಗೆ ಕರೆಯುತ್ತಾರೆ. ಅದಕ್ಕಾಗಿ ನಾನು ಅಬಾರಿ.

• ಒಂದೇ ರೀತಿಯ ಪಾತ್ರಗಳ ಬಗ್ಗೆ ನಿಮ್ ಅಭಿಪ್ರಾಯ

ಕಲಾವಿದನಾಗಿ ಎಲ್ಲಾ ರೀತಿಯ ಪಾತ್ರ ಮಾಡುವ ಆಸೆ ಇದೆ. ಕೆಲವೊಮ್ಮೆ ಒಂದೇ ರೀತಿಯ ಪಾತ್ರಗಳು ಮೇಲಿಂದ ಮೇಲೆ ಬರುತ್ತವೆ. ಇನ್ನೂ ಕೆಲವು ಚಿತ್ರಗಳಲ್ಲಿ ಇದುಗರೆಗೂ ಮಾಡದೆ ಇರುವ ಪಾತ್ರ ಬರುತ್ತವೆ. ಎರಡೂ ರೀತಿಯ ಪಾತ್ರ ಮಾಡುವುದು ಕಲಾವಿದನಾಗಿ ನನ್ನ ಕೆಲಸ. ಒಂದೇ ರೀತಿಯ ಪಾತ್ರ ಎಂದು ಕೈ ಬಿಟ್ಟರೆ ಅವಕಾಶ ಕೈ ತಪ್ಪಿ ಹೋಗುತ್ತದೆ. ಬದುಕು ಸಾಗಿಸಬೇಕು ಅಲ್ಲವೆ. ಬರವಣಿಗೆ, ನಿರ್ದೇಶನ ಗೀಳು, ನಟನೆ ನನ್ನ ಬಾಳು, ಈ ಗೀಳು ಮತ್ತು ಬಾಳನ್ನು ಹೊಂದಾಣಿಕೆ ಮಾಡಿಕೊಂಡು ಸಾಗುವುದೇ ಜೀವನ ಹೀಗಾಗಿ ಬಂದ ಪಾತ್ರವನ್ನು ಒಪ್ಪಿಕೊಂಡು ಅಚ್ಚುಕಟ್ಟಾಗಿ ನಟಿಸುತ್ತೇನೆ.ನಿರ್ದೇಶಕರು ಹೇಳಿದಕ್ಕಿಂತ ಚೆನ್ನಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಆ ಕೆಲಸ ಮಾಡುತ್ತೇನೆ. ಒಂದೇ ರೀತಿಯ ಪಾತ್ರ ಎನ್ನುವಂತೆ ಕಂಡರೂ ನಟನೆಯಲ್ಲಿ ವಿಭಿನ್ನತೆ ಕೊಡಲು ಪ್ರಯತ್ನಸುವೆ.

• ಸಿನಿಮಾ ರಂಗಕ್ಕೆ ಬಂದದ್ದು ಹೇಗೆ

ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಏಡ್ಸ್ ಕುರಿತು ನಾಟಕ ಬರೆದು ಅಭಿನಯ ಮಾಡುವ ಅವಕಾಶ ಸಿಕ್ಕಿತ್ತು.ಅಷ್ಟೇ ಅಲ್ಲ ನಾಟಕಕ್ಕೆ ಪ್ರಶಸ್ತಿ ಕೂಡ ಬಂದಿತ್ತು. ಮತ್ತೊಂದು ಅಚ್ಚರಿ ಏನು ಗೊತ್ತಾ . ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಹಿರಿಯ ಕಲಾವಿದ ಮಾನು ಆಗಮಿಸಿದ್ದರು. ನಾಟಕಕ್ಕೆ ಪ್ರಶಸ್ತಿ ಬಂದ ನಂತರ ನಾನೂ ಕೂಡ ಬರವಣಿಗೆ ಮಾಡಬಲ್ಲೆ ಎನ್ನುವ ಆತ್ಮ ವಿಶ್ವಾಸ ನನ್ನಲ್ಲಿ ಮೂಡಿಸಿತು. ಅಲ್ಲಿಂದ ಬೆಂಗಳೂರಿಗೆ ಬಂದು ಫಿಲ್ಮ್ ಟೆಕ್ನಾಲಿಜಿಯಲ್ಲಿ ಡಿಪ್ಲಮೋ ಮಾಡಿದೆ. ಆ ಬಳಿಕ ಭೂಪತಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡೆ.

• ಚಿತ್ರರಂಗಕ್ಕೆ ಬಂದ ಬಗೆ ಹೇಳುವುದಾದರೆ

ನಿಜಕ್ಕೂ ಖುಷಿ ಇದೆ. 14 ವರ್ಷಗಳ ಬಣ್ಣದ ಬದುಕಿನ ಯಾನದಲ್ಲಿ ವಿಭಿನ್ನ ಬಗೆಯ ಪಾತ್ರ ಮಾಡಿದ್ದೇನೆ. ಜೊತೆ ಜೊತೆಗೆ ಬೆಳವಣಿಗೆ ಕಂಡಿದ್ದೇನೆ. ಒಂದಷ್ಟು ಕಲಿತಿದ್ದೇನೆ, ಸಿನಿಮಾವನ್ನು ತಾಂತ್ರಿಕವಾಗಿ ಇನ್ನಷ್ಟು ಆಳವಾಗಿ ಅಧ್ಯಯನ ಮಾಡುವ ಮತ್ತು ತಿಳಿದುಕೊಳ್ಳುವ ಪ್ರಯತ್ನ ಮತ್ತು ಉದ್ದೇಶವಿದೆ. ಫಿಲ್ಮ್ ಟೆಕ್ನಾಲಿಜಿಯಲ್ಲಿ ಡಿಪ್ಲಮೋ ಮುಗಿದ ಬಳಿಕ ಪುನೀತ್ ರಾಜ್ ಕುಮಾರ ಅವರ “ಅಪ್ಪು” ಚಿತ್ರದಲ್ಲಿ ಅಂಪ್ರಟೀಸ್ ಆಗಿ ತೆಲುಗಿನ ಖ್ಯಾತ ನಿರ್ದೇಕ ಪೂರಿ ಜಗನ್ನಾಥ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಎಸ್. ಗೋವಿಂದು ನಿರ್ದೇಶನ “ಭೂಪತಿ” ಮೊದಲ ಸಿನಿಮಾ,ಕಥೆಯ ಥಾಟ್ ನನ್ನದು.ಆದರೆ ಅದನ್ನು ವಿಸ್ತರಿಸಿ ಮಾಡಿದ್ದು ನಿದೇಶಕರು. ಅದಾದ ಬಳಿಕ ಸ್ವಯಂ ಕೃಷಿ ಚಿತ್ರದಲ್ಲಿ ಕತೆ, ಚಿತ್ರಕಥೆಯಲ್ಲಿ ಭಾಗಿಯಾಗಿದ್ದೆ.ಉಯ್ಯಾಲೆ ಚಿತ್ರಕ್ಕೆ ಕಥೆ ಮಾಡಿದೆ. “ಆ ದಿನಗಳು” ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ.

• ನಟನೆಯ ಜೊತೆ ಕಥೆಗಾರ ಕೂಡ ನೀವು, ಆ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾದರೆ

ಹೌದು. ರಾಕಿ ಚಿತ್ರದ ಕಥೆ ನನ್ನದೇ. ಮೊದಲ ಬಾರಿಗೆ ಕಥೆಗಾರನಾಗಿ ಗುರುತಿಸಿಕೊಂಡ ಚಿತ್ರ ಇದು. ನಿರ್ದೇಶಕ ನಾಗೇಂದ್ರ ಅರಸ್ ಅವಕಾಶ ಮಾಡಿಕೊಟ್ಟಿದ್ದರು. ಹರಿಶೃಂಗ ಸಂಭಾಷಣೆ ಬರೆದಿದ್ದರು. ಈ ಮೂಲಕ ಕಥೆಗಾರನಾಗಿ ಗುರುತಿಸಿಕೊಳ್ಳುವಂತಾಯಿತು. ಇದಲ್ಲದೆ ಅನೇಕ ನಿರ್ದೇಶಕ ಜೊತೆಗೆ ಕಥೆಯ ಚರ್ಚೆಯಲ್ಲಿ ಭಾಗಿಯಾಗಿದ್ದೇನೆ.
ಸ್ವಯಂ ಕೃಷಿ ಚಿತ್ರದಲ್ಲಿ ನಿರ್ದೇಶಕರ ಜೊತೆ ಕಥೆ,ಚಿತ್ರಕಥೆ ರಚನೆಯಲ್ಲಿ ತೊಡಗಿಸಿಕೊಂಡಿದ್ದೆ. ಪಾತ್ರದ ನರೇಷನ್ ರೀತಿ, ಮೈಮ್ ಮಾಡುವ ಬಗೆ ಕಂಡ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರು, ನಟನೆ ಆರಂಭದಿದ್ದಾರೆ, ಪಾತ್ರ ಮೈಮ್ ಮಾಡುತ್ತಿದೆ ಅಭಿಮಾನ್ ರಾಯ್, ನಿರ್ದೇಶಕರೇ ಈ ಪಾತ್ರವನ್ನು ವಿಜಯ್ ಅವರೇ ಮಾಡಬಹುದಲ್ಲ ಎಂದು ಹೇಳಿದ್ದರು. ಆ ಮೂಲಕ ಪಾತ್ರವೂ ಸಿಕ್ಕಿತು. ಅಲ್ಲಿಂದ ನಟನೆ ಯಾನ ಆರಂಭವಾಯಿತು. ನಟನೆ ಅರಂಭಕ್ಕೆ ಅಭಿಮಾನ್ ರಾಯ್ ಒಂದು ರೀತಿಯಲ್ಲಿ ಕಾರಣ.

• ನಿಮ್ಮನ್ನು ಗುರುತಿಸಿದ ಚಿತ್ರಗಳಾವುವು

6-5=2 , ಕರ್ವ, ಕೃಷ್ಣ ಲೀಲಾ, ಹಂಬಲ್ ನಾಗರಾಜ್ ಪೊಲಿಟಿಶೀಯನ್, ಕೃಷ್ಣ ರುಕ್ಕು, ಇತ್ತೀಚೆಗೆ ಬಿಡುಗಡೆಯಾದ “ ಸೌತ್ ಇಂಡಿಯನ್ ಹೀರೋ ಹೀಗೆ ಹಲವು ಚಿತ್ರಗಳು ಯಶಸ್ಸು ತಂದುಕೊಟ್ಟಿವೆ. ಜೊತೆಗೆ ಮನಸ್ಸಿಗೆ ಮುದ ಕೂಡ ನೀಡಿವೆ.ತಿಂಗಳಿಗೆ 3-4 ಚಿತ್ರಗಳಲ್ಲಿ ನಟಿಸಿದೆ. ಆಗ ಎಲ್ಲಾ ಚಿತ್ರಗಳು ಕನಿಷ್ಠ 50 ದಿನ ಓಡುತ್ತಿದ್ದವು.ಈಗ ಬಿಡಿ ಎಂದರು ನಕ್ಕರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin