Adhyaksha" actress Heba Patel in the movie "Ramarasa"
“ರಾಮರಸ” ಚಿತ್ರದಲ್ಲಿ “ಅಧ್ಯಕ್ಷ” ನಟಿ ಹೆಬಾ ಪಟೇಲ್
“ಅಧ್ಯಕ್ಷ” ಚಿತ್ರದಲ್ಲಿ ನಟ ಶರಣ್ ಅವರ ಜೊತೆ ನಟಿಸಿ ಕನ್ನಡ ಪ್ರೆಕ್ಷಕರ ಮನಸ್ಸನ್ನು ಮುಟ್ಟಿ ಕನ್ನಡದ ಮನೆಮಗಳಾದ ಹೆಬಾ ಪಾಟೀಲ್, ಇದೀಗ “ರಾಮರಸ” ಹಂಚಲು ತಂಡದೊಂದಿಗೆ ಸೇರಿಕೊಂಡಿದ್ದಾರೆ.

ತೆಲುಗಿನ ‘ಕುಮಾರಿ 21ಎಫ್ ಚಿತ್ರ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತು. ಗುರು ದೇಶಪಾಂಡೆ ನಿರ್ಮಾಣದ ಜಿ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಸ್ಟುಡಿಯೋ ಮತ್ತು ಬಿ.ಎಂ ಗಿರಿರಾಜ್ ಅವರ ನಿರ್ದೇಶನದ “ರಾಮರಸ” ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಿಕರಣ ಮುಗಿಸಿರುವ “ರಾಮರಸ” ಚಿತ್ರತಂಡ ಸದ್ಯ ಪೆÇಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.
ಅವಳ ಅಂದಕ್ಕೆ ಸೋತವರು
ಮಾತಿಗೆ ಮರುಳಾದವರು
ನಡಿಗೆಗೆ ನಡುಗಿದವರಾರೂ
ಭೂಮಿ ಮೇಲೆ ಉಳಿದೇ ಇಲ್ಲ.
ಗಂಡಸರ ಆಸೆಗೆ ಅವಳು ಒಂದು ಮಿಸ್ಟರಿ.. ಅವಳೇ ಭ್ರಮರಿ
ರಾಮರಸ ಕುಡಿಸಲು,
ನಿತ್ಯ ರತಿರಸವ ಸುರಿಸಲು,
ಪಾತಾಳ ಮೋಹಿನಿ ಭ್ರಮರಿಯಾಗಿರುವ
ಹೆಬ್ಬಾ ಪಟೇಲಳಿಗೆ ಹುಟ್ಟು ಹಬ್ಬದ ನಲ್ವಾರೈಕೆಗಳು

ಎನ್ನುತ್ತಲೇ ರಾಮರಸ ಚಿತ್ರತಂಡ ನಟಿ ಹೆಬಾ ಪಾಟೀಲ್ಗೆ ಹುಟ್ಟುಹಬ್ಬದ ಶುಭಕೋರಿದೆ.

