ಮಾಗಡಿ ಕೋಟೆ ಮೈದಾನದಲ್ಲಿ ಅಣ್ಣಯ್ಯ-ಪುಟ್ಟಕ್ಕನ ಮಕ್ಕಳು’ ಸಂಕ್ರಾಂತಿ ಸಂಭ್ರಮ
ವರುಷದ ಸಂಕ್ರಾಂತಿ ಹಬ್ಬವನ್ನು ಜನರ ಜೊತೆ ಆಚರಿಸಲು ‘ಪುಟ್ಟಕ್ಕನ ಮಕ್ಕಳು’ ಮತ್ತು ಅಣ್ಣಯ್ಯ ಕುಟುಂಬಗಳು ಕೆಂಪೇಗೌಡರ ಹುಟ್ಟೂರಾದ ಮಾಗಡಿಗೆ ಬರಲಿದೆ

ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಕಳೆ ಹೆಚ್ಚಿಸಲು ಜೀ ವಾಹಿನಿ ಮುಂದಾಗಿದ್ದು ಮಾಗಡಿಯ ಕೋಟೆ ಮೈದಾನದಲ್ಲಿ ಅಣ್ಣಯ್ಯ-ಪುಟ್ಟಕ್ಕನ ಮಕ್ಕಳು’ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
‘ಪುಟ್ಟಕ್ಕನ ಮಕ್ಕಳು’ ಕುಟುಂಬದಿಂದ ಪುಟ್ಟಕ್ಕ, ಕಂಠಿ, ಸ್ನೇಹ, ಸಹನಾ, ರಾಜಿ, ಗೋಪಾಲ ಮತ್ತು `ಅಣ್ಣಯ್ಯ’ ಕುಟುಂಬದಿಂದ ಶಿವೂ, ಪಾರು, ರತ್ನ, ರಾಣಿ, ರಮ್ಯಾ, ರಶ್ಮಿ, ವೀರಭದ್ರ, ಪರಶು ಇನ್ನಿತರ ಕಲಾವಿದರು ನಿಮ್ಮನ್ನು ಮನರಂಜಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಮಾತಿನ ಮಲ್ಲಿ ಹೆಸರಾಂತ ನಿರೂಪಕಿ ಶಾಲಿನಿ ವಹಿಸಲಿದ್ದಾರೆ. ಹಾಡು, ನೃತ್ಯ ಮತ್ತು ಮನರಂಜನೆಯ ಈ ಸುಗ್ಗಿ ಸಿಗಲಿದೆ

ಕಿರುತೆರೆಯ ನೆಚ್ಚಿನ ತಾರೆಗಳನ್ನು ಭೇಟಿಯಾಗಲು, ಸಂಕ್ರಾಂತಿಯನ್ನು ಜೊತೆಯಾಗಿ ಆಚರಿಸಲು ‘ಅಣ್ಣಯ್ಯ-ಪುಟ್ಟಕ್ಕನ ಮಕ್ಕಳು’ ಸಂಕ್ರಾಂತಿ ಸಂಭ್ರಮ ಆಚರಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು ಪಾಸ್‍ಗಳು ಉಚಿತವಾಗಿದ್ದು ಜೀû ಕನ್ನಡ ವಾಹಿನಿಯು ಯಾವುದೇ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಮೊದಲು ಬಂದವರಿಗೆ ಆದ್ಯತೆ ಎಂದು ವಾಹಿನಿ ತಿಳಿಸಿದೆ
ಮತ್ಯಾಕೆ ತಡ, ಬೇಗ ಬೇಗ ಬಂದು ಪಾಸ್ ತೆಗೆದುಕೊಳ್ಳಿ. ಹಾಗಾದ್ರೆ ಜನವರಿ 8 ರಂದು ಭೇಟಿಯಾಗೋಣವಾ ಎಂದು ವಾಹಿನಿ ತಿಳಿಸಿದೆ

