After shooting for "Bairadevi", the fear of the devil disappeared: Actress Radhika Kumaraswamy

“ಬೈರಾದೇವಿ” ಚಿತ್ರೀಕರಣ ಮಾಡಿದ ಬಳಿಕ ದೆವ್ವದ ಭಯ ಮಾಯ: ನಟಿ ರಾಧಿಕಾ ಕುಮಾರಸ್ವಾಮಿ - CineNewsKannada.com

“ಬೈರಾದೇವಿ” ಚಿತ್ರೀಕರಣ ಮಾಡಿದ ಬಳಿಕ ದೆವ್ವದ ಭಯ ಮಾಯ: ನಟಿ ರಾಧಿಕಾ ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಕಂಡ ಅಪರೂಪದ‌ ನಟಿ,ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷೆಯ ” ಬೈರಾದೇವಿ” ಚಿತ್ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಯಶಸ್ಸು ಗಳಿಸಿದರೆ ಭಾಗ ಎರಡು ಮಾಡುವ ಉದ್ದೇಶ ಚಿತ್ರತಂಡ ಹೊಂದಿದೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಮಾಹಿತಿ ನೀಡಲು ತಂಡ ಹಾಜರಿತ್ತು. ನಟಿ ರಾಧಿಕಾ ಕುಮಾರಸ್ವಾಮಿ , ನಿರ್ಮಾಪಕ ರವಿರಾಜ್, ಹಿರಿಯ ನಟ ರಮೇಶ್ ಅರವಿಂದ್, ಕನ್ನಡದ ಮತ್ತೊಬ್ಬ ಹಿರಿಯ ನಟಿ ಅನುಪ್ರಭಾಕರ್, ನಿರ್ದೇಶಕ ಶ್ರೀಜೈ ,ಹಿರಿಯ ಕಲಾವಿದ ರಂಗಾಯಣ ರಘು, ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಚಿತ್ರತಂಡದ ಹಲವರು ಮಾಹಿತಿ ನೀಡಿದರು.

#RadhikaKumarswamy

ಈ ವೇಳೆ ಮಾತಿಗಿಳಿದ ನಟಿ ರಾಧಿಕಾ ಕುಮಾರಸ್ವಾಮಿ, ಕಥೆ ಕೇಳಿ ಥ್ರಿಲ್ ಆಗಿದ್ದೆ. ಪಾತ್ರಕ್ಕೆ ನಾನು ಸೂಕ್ತವಾಗದಿದ್ದರೆ ಬೇರೆ ನಟಿಯರನ್ನು ಆಯ್ಕೆ ಮಾಡಿಕೊಳ್ಳಿ, ನಾನು ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದೆ. ಚಿತ್ರದಲ್ಲಿ ಅಘೋರಿಯ ಪೋಟೋ ಶೂಟ್ ಮಾಡಿದ ಬಳಿಕ ನೀವೇ ಮಾಡಿ ಎಂದು‌ ನಿರ್ದೇಶಕರು ಹೇಳಿದರು. ಚಿತ್ರ ಅಂತಿಮವಾಗಿ ಅಕ್ಟೋಬರ್ 3ರಂದು ಬಿಡುಗಡೆಯಾಗುತ್ತಿದೆ.
ಕನ್ನಡದಲ್ಲಿ‌‌ ಮೊದಲು ಬಿಡುಗಡೆ ಮಾಡಿ ಆ ನಂತರ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲಾಗುವುದು. ಹಿರಿಯ ಕಲಾವಿದ ರಂಗಾಯಣ ಚಿತ್ರದಲ್ಲಿದ್ದರೆ ಅದರ ಕಳೆಯೇ ಬೇರೆ.‌ಚಿತ್ರದಲ್ಲಿ ಭಂಗಿ ಸೇದುವುದನ್ನು ಹೇಳಿಕೊಟ್ಟ ಗುರು. ಭಂಗಿ‌ ಸೇದುವ ಸೀನ್ ಅದ್ಬುವಾಗಿ ಬಂದಿದೆ ಅವರು ಎಂದರು

ಜೀವನದಲ್ಲಿ ಒಂದು ಬಾರಿಯೂ ಸ್ಮಶಾನಕ್ಕೆ ಹೋಗಿರಲ್ಲ. ಚಿತ್ರ ಮಾಡುವ ಮುನ್ನ ಸ್ಮಶಾನ, ದೆವ್ವ ಅಂದರೆ ಭಯ‌ ಇತ್ತು ಆದರೆ ಹಾರರ್ ಚಿತ್ರ ಎಂದರೆ ಅಚ್ಚುಮೆಚ್ಚು ,ಹೀಗಾಗಿ ನಿರ್ದೇಶಕರು ಸ್ಮಶಾನದ ಸೆಟ್ ಹಾಕುವುದಾಗಿ ಹೇಳಿದರು. ಚಿತ್ರೀಕರಣ ಸಮೀಪ ಬಂದ ವೇಳೆ ನಿರ್ಮಾಪಕರು ಮತ್ತು ನಿರ್ದೇಶಕರು ಮುಂಚೆಯೇ ಮಾತನಾಡಿಕೊಂಡು ಸ್ಮಶಾನದಲ್ಲಿ ಚಿತ್ರೀಕರಣ ಮಾಡಲು ನಿರ್ದರಿಸಿದ್ದರು. ನಿರ್ದೇಶಕರು ಮನೆಗೆ ಬಂದು ರಾ ಫೀಲಿಂಗ್ ಬೇಕು ಒರಿಜಿನಲ್‌ ಸ್ಮಶಾನದಲ್ಲಿ ಚಿತ್ರೀಕರಣ ಮಾಡೋಣ ಎಂದರು. ನಿರ್ದೇಶಕರು ಕೇಳಿದಾಗ ಇಲ್ಲ ಎನ್ನಲು ಸಾದ್ಯವಿಲ್ಲ. ಒಪ್ಪಿಕೊಂಡು ಅಭಿನಯಿಸಿದ್ದೇನೆ‌‌ ಎಂದರು.

ಚಿತ್ರೀಕರಣ ಮಾಡುವಾಗ ಎದುರಿಸಿದ ಸಮಸ್ಯೆ ಸವಾಲು ಒಂದೆರಡಲ್ಲ ಎಲ್ಲಾ‌ ಅಡೆ ತಡೆ ದಾಟಿ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರ ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಸಶ್ಮಾನದಲ್ಲಿ‌ ಚಿತ್ರೀಕಣ ಮಾಡಿಡದ ಬಳಿಕ ಸ್ಮಶಾನ ದೆವ್ವ ಎಂದರೆ ಇದ್ದ ಭಯ ಮಾಯವಾಗಿದೆ. ಈ ಹಂತದ‌ ತನಕ‌ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಮತ್ತು ಧನ್ಯವಾದ ಅರ್ಪಿಸುವುದಾಗಿ ಮಾಹಿತಿ ಹಂಚಿಕೊಂಡರು

#RameshArvind

ಹಿರಿಯ ನಟ ರಮೇಶ್ ಅರವಿಂದ್ ಮಾತನಾಡಿ , ಚಿತ್ರದಲ್ಲಿ‌ ತಾವೇ ಅಭಿನಯಿಸಬೇಕು ಎಂದು ನಿರ್ದೇಶಕ ಶ್ರೀಜೈ ಹೇಳಿದರು. ಕನ್ನಡ ಮತ್ತು ತಮಿಳಿನಲ್ಲಿ ನಿರ್ದೇಶನ ಒಪ್ಪಿಕೊಂಡಿದ್ದೆ.. ಹೀಗಾಗಿ ಡೇಟ್ಸ್ ಸಮಸ್ಯೆ ಇದೆ. ನನಗೆ ಇಲ್ಲ ಎನ್ನಲು ಮನಸ್ಸಿಲ್ಲ ಎಂದೆ. ನೀವು ಚಿತ್ರದಲ್ಲಿ ಮಾಡದಿದ್ದರೆ ಸಿನಿಮಾನೇ ಮಾಡಲ್ಲ ಎಂದರು. ಆಗ ಬನ್ನಿ ಕಥೆ ಹೇಳಿ ಇಷ್ಟವಾದರೆ ಮಾಡುವೆ ಎಂದೆ‌.. ನಿರ್ದೇಶಕರು ಹೇಳಿದ ಕಥೆ ಕೇಳಿ ಥ್ರಿಲ್ ಆಗಿ ತಕ್ಷಣ ಒಪ್ಪಿಕೊಂಡೆ ಎಂದು ಮಾಹಿತಿ ನೀಡಿದರು

ಆಪ್ತ‌ಮಿತ್ರ ಚಿತ್ರದ‌‌ ಬಳಿ‌ಕ ಆ ಮಾದರಿಯ ಜಾನರ್‌ ಚಿತ್ರ ‌ಬಂದಿಲ್ಲ‌ ಆ ಮಾದರಿಯಲ್ಲಿ ಹೊಸ ಮಾದರಿಯ ಚಿತ್ರವಾಗಲಿದೆ ಎನ್ನುವುದು ಒಂದು ಕಾರಣವದರೆ ಅದಕ್ಕೂ ಹಿಂದಿನ 10 ವರ್ಷದ ಹಿಂದೆ ಮಾಡಿದ ಮಾದರಿಯ ಪಾತ್ರ. ಹೀಗಾಗಿ ಈ ಎರಡೂ ಕಾರಣದಿಂದ‌ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ .ಮೂರನೇ ಅಂಶ ಎಂದರೆ ಗೊತ್ತಿಲ್ಲದ ಪ್ರಪಂಚ ಅದು‌. ಆ ಅಂಶವೂ ಕೂಡ ಸಿನಿಮಾದಲ್ಲಿ ನಟಿಸುವಂತಾಯಿತು. ಚಿತ್ರದಲ್ಲಿ ಖಡಕ್‌ ಪೊಲೀಸ್ ಅಧಿಕಾರಿಯ ಪಾತ್ರ. ಯಾವುದಕ್ಕೂ ಹೆದರುವುದಿಲ್ಲ. ಆದರೆ ಈತನ ಬದುಕಲ್ಲಿ ಅಘೋಚರ ಶಕ್ತಿ ಆವರಿಸಿಕೊಳ್ಳಲಿದೆ ಅದರಿಂದ‌ ಪಾರಾಗಲು ಬೈರಾದೇವಿ ಮೊರೆ ಹೋಗ್ತಾನೆ. ಅಲ್ಲಿ‌ ಹೋದ ನಂತರ ‌ಏನೆಲ್ಲಾ‌ ಆಗಲಿದೆ ಎನ್ನುವುದು ಕೂತಹಲದ ‌ಸಂಗತಿ ‌ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ ಎಂದು ಮಾಹಿತಿ ನೀಡಿದರು

#AnuPrabhakar

ಹಿರಿಯ ನಟಿ ಅನು ಪ್ರಭಾಕರ್ ಮಾತನಾಡಿ , ನಟಿ ರಾಧಿಕಾ ಜೊತೆ ತವರಿಗೆ ಬಾ ತಂಗಿ ಬಳಿಕ‌ ನವಶಕ್ತಿ ವೈಭವ ಚಿತ್ರದಲ್ಲಿ‌ ನಟಿಸಿದ್ದೇನೆ. ಹಲವು ವರ್ಷಗಳ‌ ನಂತರ ಬೈರಾದೇವಿಯಲ್ಲಿ ನಟಿಸಿದ್ದೇನೆ. ನಾನು ಕೇಳಿದ ಸಂಭಾವನೆಯಲ್ಲಿ ನಯಾ ಪೈಸೆ ಚೌ‌ಕಾಸಿ ಮಾಡದೆ ಅಣ್ಣ ತಂಗಿ ಸಂಭಾವನೆ ನೀಡಿದ್ದಾರೆ. ಚಿತ್ರದಲ್ಲಿ ವಿಭಿನ್ನವಾದ ಪಾತ್ರ. ಬಹುತೇಕ ಅವರ‌ ಮನೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕನ್ನಡದಲ್ಲಿ ಡಬ್ಬಂಗ್ ಸಲೀಸಾಗಿ ಮಾಡಿದೆ. ತೆಲುಗಿನಲ್ಲಿ ಡಬ್ಬಿಂಗ್ ಮಾಡಲು ತೊಂದರೆ ಆಯಿತು. ಹಲವರ ಸಹಕಾರದಿಂದ ಡಬ್ಬಿಂಗ್ ಮುಗಿಸಿದ್ದೇನೆ. ಆದರೆ ಎಲ್ಲಾ ಭಾಷೆಯಲ್ಲಿಯೂ ರಮೇಶ್ ಅವರು ಸರಾಗವಾಗಿ ಡಬ್ಬಿಂಗ್ ಮಾಡಿದರು. ಅವರ‌ ಜೊತೆ ಬಹಳ‌ವರ್ಷದ ನಂತರ ಮತ್ತೊಮ್ಮೆ ನಟಿಸುವ ಅವಕಾಶ ಸಿಕ್ಕಿದೆ.ಇದು ಖುಷಿ ಸಂಗತಿ ಎಂದರು

ರಾಧಿಕಾ ಅವರು ಬೈರಾದೇವಿ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ಕಳೆದ ಪತ್ರಿಕಾಗೋಷ್ಠಿಯಲ್ಲಿ ಇದೇ ಕಡೆ ಸಿನಿಮಾ ಆಗಲಿದೆ‌ ಎಂದು‌ ಮಣ್ಣು ಮಸಿ ಅಂದ್ರು. ಆ ರೀತಿಯ ಯಾವುದೇ ಆಲೋಚನೆ ಪಕ್ಕಕ್ಕಿಟ್ಟು ಸಿನಿಮಾ ಮಾಡಿ ಎಂದು ಮನವಿ ಮಾಡಿದರು

#Raviraj

ನಿರ್ಮಾಪಕ ರವಿರಾಜ್ ಮಾತನಾಡಿ, ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ಜನರು ಮತ್ತು ಪ್ರೇಕ್ಷಕರು ನೋಡಿ‌ ಮೆಚ್ಚಿಕೊಂಡರೆ ಎರಡನೇ ಭಾಗ ಮಾಡುವ ಆಲೋಚನೆ ಇದೆ ಎಂದು‌ ಹೇಳಿದರು.

ನಿರ್ದೇಶಕ ಶ್ರೀಜೈ ಮಾತನಾಡಿ, ಕಥೆ ಕೇಳಿ ರಾಧಿಕಾ‌ ಮೇಡಂ ಥ್ರಿಲ್ ಆಗಿ ನಟಿಸಲು ಒಪ್ಪಿಕೊಂಡರು. ಹಾರರ್ ಚಿತ್ರದ ಕಥೆ ಇಷ್ಟ ಎಂದು ಗೊತ್ತಿತ್ತು. ಹಾಗಾಗಿ ಬೈರಾದೈವಿ ಹಾರರ್ ಜಾನರ್‌ ಕಥೆ ಮಾಡಿದ್ದೇನೆ. ರಾಧಿಕಾ ಮೇಡಂ ನಂತರ ತಕ್ಷಣ ನೆನಪಾದಿದ್ದೇ ರಮೇಶ್ ಸರ್. ಚತ್ರದ 6 ಸೀನ್ ಕೇಳಿ ನಿರ್ಮಾಪಕ ರವಿರಾಜ್ ಥ್ರಿಲ್ ಆದರು. ಚಿತ್ರದಲ್ಲಿ ವಾಮಾಚಾರ ,ಅಘೋರಿ ಯಾವುದನ್ನು ಪ್ರಮೋಟ್ ಮಾಡ್ತಾ ಇಲ್ಲ. ಚಿತ್ರಕ್ಕೆ ಏನು ಬೇಕೋ‌ ಅಷ್ಟನ್ನು ಮಾತ್ರ ಬಳಸಿಕೊಂಡಿದ್ದೇವೆ. ಚಿತ್ರೀಕರಣ ಸಮಯದಲ್ಲಿ‌ ಅನೇಕ‌ ಅಡೆ ತಡೆ ಎದುರಿಸಿದೆವು ಎಲ್ಲವನ್ನೂ ದಾಟಿ ಚಿತ್ರೀಕರಣ ಪೂರ್ಣಗೊಳಿಸಿ‌ ಅಕ್ಟೋಬರ್ 3 ರಿಂದ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ವಾರಣಾಸಿಯಲ್ಲಿ‌ ಚಿತ್ರೀಕರಣ. ಅದ್ಬುತ ವಾಗಿತ್ತು ಯಾಣದಲ್ಲಿ ಚಿತ್ರೀಕರಣ ಸಮಯದಲ್ಲಿ‌ ಜಿಗಣೆ ಕಾಟದ ನಡುವೆಯು ಇಡೀ ತಂಡ ನೀಡಿದ ಸಹಕಾರ ಮರೆಯಲಾಗದ್ದು. ಸ್ಮಶಾನದಲ್ಲಿ‌ .ಚಿತ್ರೀಕರಣ ಮಾಡುವಾಗ ಎಲ್ಲರ ಸಹಕಾರವಿತ್ತು ಚಿತ್ರ ನೋಡಿ ಹರರಿ ಎಂದು‌ ಕೇಳಿಕೊಂಡರು.

ಹಿರಿಯ ಕಲಾವಿದ ರಂಗಾಯಣ ರಘು ಮಾತನಾಡಿ, ರಾಧಿಕಾ ಅವರು ಚಿತ್ರಕ್ಕಾಗಿ ಬಹಳಷ್ಟು ಶ್ರಮ ಹಾಕಿದ್ದಾರೆ ಅದು ಚಿತ್ರದಲ್ಲಿ ಎದ್ದು ಕಾಣುತ್ತದೆ. ಕಾಂತಾರದಲ್ಲಿ ಗಂಡು ದೇವರು ಕೊರಗಜ್ಜ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು. ಈಗ ಹೆಣ್ಣು ದೇವರು ಭೈರಾದೇವಿ ಕಥೆ ತೆರೆಯ ಮೇಲೆ ಬರುತ್ತಿದೆ. ನಿರ್ದೇಶಕ ಶ್ರೀಜೈ ಉತ್ತಮ ‌ಕಥೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ರಾಜ್ಯದಲ್ಲಿರುವ ಎಲ್ಲಾ ಹೆಣ್ಣು ದೇವರನ್ನು ಹೆಸರು ಬಳಕೆ ಮಾಡಿಕೊಂಡಿದ್ದಾರೆ. ರಾಧಿಕಾ ಅವರು ಸ್ಮಶಾನದಲ್ಲಿ ಧೈರ್ಯದಿಂದ ಚಿತ್ರೀಕರಣದಿಂದ ಮಾಡಿದ್ದಾರೆ. ಈಗಾಗಲೇ ಚಿತ್ರ‌ ನೋಡಿದ ಎಲ್ಲರೂ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಕಾಶಿಯಲ್ಲಿ ಚಿತ್ರೀಕರಣ ಅದ್ಬುತ ವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಸ ನಿರ್ದೇಶಕ ರವಿವರ್ಮ ಮಾತನಾಡಿ ,ನಿರ್ದೇಶಕ ಶ್ರೀಜೈ ಕಥೆ ಹೇಳಿದಾಗ ಸಾಹಸ ದೃಶ್ಯಗಳನ್ನು ಹೇಗೆ ಚಿತ್ರೀಕರಣ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿದ್ದೆ. ಚಿತ್ರೀಕರಣದ ಸೆಟ್ ಗೆ ಹೋಗಿದ್ಸಾಗ ನಟಿ ರಾಧಿಕಾ ಅವರ ಮೇಕಪ್‌ ನೋಡಿದಾಗ ಯಾವ ರೀತಿ ಸಾಹಸ ಸಂಯೋಜನೆ ಮಾಡಬೇಕು ಎನ್ನುವುದು ತಿಳಿಯಿತು. ಈ ಮೊದಲು ಮಾಲಾಶ್ರಿ ಮೇಡಂ ಅವರಿಗೆ ಸಾಹಸ ಸಂಯೋಜನೆ ‌ಮಾಡಿದ್ದೆ ಆ ಬಳಿಕ ರಾಧಿಕಾ ಅವರಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ.ಬೈರಾದೇವಿ ಚಿತ್ರದಲ್ಲಿ ಸಾಹಸ‌ ನಿರ್ದೇಶನ ಮಾಡುವುದು ಸವಾಲಾಗಿತ್ತು. ರಾಧಿಕಾ ಅವರ ಡ್ಯಾನ್ಸ್ ನೋಡಿದ್ರಿ ಈಗ ಫೈಟು ಮಾಡಿದ್ದಾರೆ. ಯಾವ ಸನ್ನಿವೇಶ ಹೇಳಿದರೂ ಸರಾಗವಾಗಿ ಮಾಡುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin