“ಗೋಪಿಲೋಲ”ನಿಗೆ ಮಂಜುನಾಥ ಸ್ವಾಮಿ ಆಶೀರ್ವಾದ: ಅಕ್ಟೋಬರ್ 4 ಕ್ಕೆ ಚಿತ್ರ ತೆರೆಗೆ
ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಅಕ್ಟೋಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬಿಡುಗಡೆಗೂ ಮುನ್ನ ಚಿತ್ರತಂಡದ ಸದಸ್ಯರು ಧರ್ಮಸ್ಥಳಕ್ಕೆ ಭೇಟಿನೀಡಿ ಶ್ರೀಮಂಜನಾಥಸ್ವಾಮಿ ದರ್ಶನ ಪಡೆದುಕೊಂಡರು. ಧರ್ಮಾಧಿಕಾರಿಗಳಾದ ಶ್ರೀವೀರೇಂದ್ರ ಹೆಗಡೆ “ಗೋಪಿಲೋಲ” ಚಿತ್ರದ ಪೋಸ್ಟರ್ ಹಾಗೂ ಹಾಡೊಂದನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ಆಶೀರ್ವದಿಸಿದ್ದಾರೆ.
ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ ಮುಖ್ಯ ಕಥಾಹಂದರವುಳ್ಳ ಈ ಚಿತ್ರದಲ್ಲಿ ಲವ್, ಆಕ್ಷನ್ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ನೋಡುಗರೆ ಮನ ಗೆದ್ದಿದೆ.
“ಗೋಪಿಲೋಲ” ಚಿತ್ರಕ್ಕೆ ನಿರ್ಮಾಪಕ ಎಸ್ ಆರ್ ಸನತ್ ಕುಮಾರ್ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕೇಶವಚಂದ್ರ ಅವರದು. ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಕೇಶ್ ಆಚಾರ್ಯ ಅವರದು. ಸಹ ನಿರ್ಮಾಪಕರಾಗಿರುವ ಮಂಜುನಾಥ್ ಅವರೆ ನಾಯಕರಾಗಿ ನಟಿಸಿದ್ದು,
ನಾಯಕಿಯಾಗಿ ನಿಮಿಷ ಕೆ ಚಂದ್ರ ಅಭಿನಯಿಸಿದ್ದಾರೆ. ಎಸ್ ನಾರಾಯಣ್, ಸಪ್ತಗಿರಿ(ತೆಲುಗು, ತಮಿಳು ಖ್ಯಾತ ನಟ), ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.