ವರದಪ್ಪ ಮೊಮ್ಮಗ ಪೃಥ್ವಿರಾಜ್ ನಟನೆಯ “ಮಿಂಚುಹುಳು” ಅಕ್ಟೋಬರ್ 4 ರಂದು ತೆರೆಗೆ
ಡಾ.ರಾಜ್ ಕುಮಾರ್ ಸಹೋದರ ವರದಪ್ಪ ಮೊಮ್ಮಗ ಪೃಥ್ವಿರಾಜ್ ಅಭಿನಯದ ಚೊಚ್ಚಲ ಚಿತ್ರ “ಮಿಂಚುಹುಳು” ಅಕ್ಟೊಬರ್ 4ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ಬಂಡವಾಳ ಹಾಕಿದ್ದು , ವಿಜಯ್ ಕುಮಾರ್ ಮತ್ತು ಅಬ್ದುಲ್ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ. ದೊಡ್ಡ ಹುಲ್ಲೂರು ರುಕ್ಕೋಜಿರಾವ್ ತಮ್ಮೂರಿನ ನಿರ್ಮಾಪಕರ ಜೊತೆ ನಿರ್ಮಾಣದಲ್ಲಿ ಸಹಕಾರ ನೀಡಿದ್ದಾರೆ.
ನಗರ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದ್ದು, ಬೇವಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಆ ತಂದೆಯ ಬದುಕಿನ ಬದುಕಿನ ವೈರುದ್ಯ, ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ.
ಆದರೆ ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ, ಅದು ಏನು ಎಂಬುದೇ ಮಿಂಚುಹುಳು ಚಿತ್ರದ ಕಥಾಹಂದರ.
ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಚಲ್ಲ ಅವರ ಛಾಯಾಗ್ರಹಣ, ರಾಜ್ ಭಾಸ್ಕರ್ ಅವರ ಸಂಗೀತ, ಪುಷ್ಪರಾಜ್ ಅವರ ಸಂಭಾಷಣೆ, ಅಂಜಿ ಕೆ ವೀರ ಅವರ ಸಂಕಲನವಿದೆ.
ಪ್ರೀತಂ, ಪೃಥ್ವಿ ರಾಜಕುಮಾರ್, ಪರಶಿವ ಮೂರ್ತಿ, ಮಾದೇವ್ ಮೂರ್ತಿ, ರಶ್ಮಿ ಗೌಡ, ಪೂರ್ವಿಕ, ಹಿಸಾಕ್ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ