After "Upadhyaksha Movie " chikkanna in Lakshmiputra : AP Arjun's third movie

“ಉಪಾಧ್ಯಕ್ಷ” ಬಳಿಕ ಲಕ್ಷ್ಮೀಪುತ್ರನಾದ ಚಿಕ್ಕಣ್ಣ: ಎಪಿ ಅರ್ಜುನ್ ನಿರ್ಮಾಣದ ಮೂರನೇ ಸಿನಿಮಾ - CineNewsKannada.com

“ಉಪಾಧ್ಯಕ್ಷ” ಬಳಿಕ ಲಕ್ಷ್ಮೀಪುತ್ರನಾದ ಚಿಕ್ಕಣ್ಣ: ಎಪಿ ಅರ್ಜುನ್ ನಿರ್ಮಾಣದ ಮೂರನೇ ಸಿನಿಮಾ

ಉಪಾಧ್ಯಕ್ಷ ಬಳಿಕ ಚಿಕ್ಕಣ್ಣ ನಾಐಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ಲಕ್ಷ್ಮೀಪುತ್ರ.. ಎಪಿ ಅರ್ಜುನ್ ತಮ್ಮದೇ ನಿರ್ಮಾಣ ಸಂಸ್ಥೆ ಎಪಿ ಅರ್ಜುನ್ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆನಾಗರಭಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ನೆರವೇರಿದೆ. ಅರ್ಜುನ್ ಗೂರೂಜಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

ನಿರ್ಮಾಪಕ ಎಪಿ ಅರ್ಜುನ್ ಮಾತನಾಡಿ ಲಕ್ಷ್ಮೀಪುತ್ರ ಕೊರೋನಾ ಸಮಯದಲ್ಲಿ ಮಾಡಿದ ಕಥೆ. ತಾಯಿ ಮಗನಿಗೆ ಸಂಬಂಧ ಇರುವ ಕಥೆ. ಪ್ರತಿಯೊಬ್ಬ ನೋಡಬೇಕಾದ ಎಮೋಷನ್ ಕಥೆ ಚಿತ್ರದಲ್ಲಿದೆ. ಕೊರೊನಾ ಸಮಯದಲ್ಲಿ ಭಾವನೆ-ಸಂಬಂಧ ಇಟ್ಕೊಂಡು ಬರೆದ ಕಥೆ. ಒಮ್ಮೆ ಚಿಕ್ಕಣ್ಣ ಸಿಕ್ಕಾಗ ಹೇಳಿದ್ದು. ಉಪಾಧ್ಯಕ್ಷ ಆದಮೇಲೆ ಕಥೆ ಹೇಳಿದ್ರಲ್ಲ ಅದು ಮಾಣೋಣಾ ಎಂದು ಚಿಕ್ಕಣ್ಣ ಕೇಳಿದರು. ಹೀಗೆ ಶುರುವಾಗಿದ್ದು ಲಕ್ಷ್ಮೀಪುತ್ರ. ಚಿತ್ರಕ್ಕೆ ನಿರ್ಮಾಪಕಿ ನನ್ನ ಪತ್ನಿ. ಕೋ ಪ್ರೊಡ್ಯೂಸರ್ ರವಿ ಕಿರಣ್. ನನ್ನ ಗೆಳೆಯ ವಿಜಯ್ ಸ್ವಾಮಿ ಚಿತ್ರದ ನಿರ್ದೇಶಕರು ಎಂದು ಮಾಹಿತಿ ನೀಡಿದರು.

ನಟ ಚಿಕ್ಕಣ್ಣ ಮಾತನಾಡಿ, ಕಳೆದ ವರ್ಷದ ಜನವರಿಯಲ್ಲಿ ಉಪಾಧ್ಯಕ್ಷ ರಿಲೀಸ್ ಆಗಿತ್ತು. ಈ ವರ್ಷದ ಜನವರಿಯಲ್ಲಿ ಲಕ್ಷ್ಮೀಪುತ್ರ ಮುಹೂರ್ತ ಆಗಿದೆ. ಒಂದು ವರ್ಷವಾಯ್ತು ಒಂದು ಚಿತ್ರದಿಂದ ಇನ್ನೊಂದು ಚಿತ್ರ ಶುರುವಾಗಲು. ಉಪಾಧ್ಯಕ್ಷ ಥಿಯೇಟರ್ ಗೆ ಇಡೀ ಕರ್ನಾಟಕ ಸುತ್ತಿದ ಆ ಸಮಯದಲ್ಲಿ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಸಿನಿಮಾ ನೋಡಲು ಬಂದಿದ್ದರು. ಆಗ ಅಂದುಕೊಂಡಿದ್ದು ನನ್ನ ನೋಡಲು ಫ್ಯಾಮಿಲಿ ಬರುತ್ತದೆ. ಹೀಗಾಗಿ ಮುಂದಿನ ಚಿತ್ರ ಒಳ್ಳೆ ಫ್ಯಾಮಿಲಿ ಕಥೆ ಮಾಡಬೇಕು ಎಂದಾಗ , ಆ ಹುಡುಕಾಟದಲ್ಲಿ ಸಿಕ್ಕಿದ್ದು ಲಕ್ಷ್ಮೀಪುತ್ರ. ಯೂತ್ಸ್ ಹಾಗೂ ಇಡೀ ಕುಟುಂಬ ನೋಡುವ ಸಿನಿಮಾ ಇದು. ಚಿತ್ರದಲ್ಲಿ ಒಂದು ಮೆಸೇಜ್ ಇದೆ ಎಂದು ಹೇಳಿದರು.

ಸಚಿವ ಸಂತೋಷ್ ಲಾಡ್ ಅರ್ಪಿಸುತ್ತಿರುವ ಲಕ್ಷ್ಮೀಪುತ್ರ ಚಿತ್ರಕ್ಕೆ ಎಪಿ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಇವರದ್ದೇ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಎಸ್.ಸ್ವಾಮಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಗಿರೀಶ್ ಆರ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿರುವ ಲಕ್ಷ್ಮೀಪುತ್ರನಿಗೆ ಡಾ.ಕೆ.ರವಿ ವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ರಾಜೇಶ್ ರಾವ್ ಸಹ ನಿರ್ದೇಶನ ಮಾಡುತ್ತಿದ್ದಾರೆ.

ಎಪಿ ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಾಣ ಹಾಗೂ ರವಿ ಕಿರಣ್ ಕೋ ಪ್ರೊಡ್ಯೂಸರ್ ಆಗಿಸಾಥ್ ಕೊಡುತ್ತಿರುವ ಚಿತ್ರದಲ್ಲಿ ತಾರಮ್ಮ, ಧರ್ಮಣ್ಣ ಕಡೂರ್ ಹಾಗೂ ಕುರಿ ಪ್ರತಾಪ್ ತಾರಾ ಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin