ಅಂಬುಜ ಇದೇ 21ಕ್ಕೆ ತೆರೆಗೆ ಬರಲು ಸಜ್ಜು; ಕನ್ನಡದಲ್ಲೊಂದು ಅಪರೂಪದ ಚಿತ್ರ
“ ಕೆಲವು ದಿನಗಳ ನಂತರ” ನಿರ್ದೇಶಕ ಶ್ರೀನಿ ಹನುಮಂತರಾಜು ಅವರು ಇದೀಗ “ ಅಂಬುಜ” ಚಿತ್ರದ ಮೂಲಕ ಅಪರೂಪದ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಅವರ ಪ್ರಯತ್ನಕ್ಕೆ ನಿರ್ಮಾಪಕ ಕಾಶೀನಾಥ್ ಮಡಿವಾಳವರ್ ಅವರು ಚಿತ್ರಕ್ಕೆ ಕಥೆ, ಸಾಹಿತ್ಯದ ಜೊತೆಗೆ ಬಂಡವಾಳವನ್ನೂ ಹಾಕಿದ್ದಾರೆ.
ಕೆಲವು ದಿನಗಳು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ಅವರು “ಅಂಬುಜ” ಚಿತ್ರದಲ್ಲಿಯೂ ನಟಿಸಿದ್ದು ನಿರ್ದೇಶಕ ಶ್ರೀನಿ ಹನುಮಂತರಾಜ್ ಅವರ ಕೆಲಸದ ಮೇಲೆ ಇರುವ ಶ್ರದ್ಧೆ ಮತ್ತು ಬದ್ದತೆಯಿಂದ ಮತ್ತೊಮ್ಮೆ ಕೈಜೋಡಿಸಿದ್ದಾರೆ.
ಅಂಬುಜ ಚಿತ್ರಕ್ಕೆ ನಟಿ ಗಾಯಕಿ ಬಿ.ಜಯಶ್ರೀ ಶೀರ್ಷಿಕೆ ಗೀತೆ ಹಾಡಿದ್ದಾರೆ. ಹಲವು ಹಲವು ವರ್ಷಗಳ ಬಳಿಕ ಹಾಡಿದ್ದು ಚಿತ್ರತಂಡಕ್ಕೆ ಮತ್ತಷ್ಟು ಆನೆಬಲ ಬಂದಇದೆ. ಇದೇ ಖುಷಿಯಲ್ಲಿ ನಿರ್ದೇಶಕ ಶ್ರೀನಿ ಹನುಮಂತರಾಜು ಮತ್ತು ನಿರ್ಮಾಪಕ ಕಾಶೀನಾಥ್ ಮುಖದಲ್ಲಿ ಮಂದಹಾಸ ಮನೆ ಮಾಡಿದೆ, ಇದೇ ತಿಂಗಳ 21ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ.
ರಜನಿ ಸಾಹಸ
ಅಂಬುಜ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿರುತೆರೆ ನಟಿ ರಜನಿ ಅವರು ಹಿರಿಯ ಗಾಯಕಿ ಬಿ.ಜಯಶ್ರೀ ಅವರು ಹಾಡಿರುವ ಗೀತೆಗೆ 25 ಕೆಜಿ ತೂಕದ ಲಂಬಾಣಿ ಧಿರಿಸು ಧರಿಸಿ ನೃತ್ಯ ಮಾಡಿದ್ದಾರೆ. ಮೈಮೇಲೆ ಹೆಚ್ಚು ತೂಕದ ಬಟ್ಟೆ ಹಾಕಿಕೊಂಡು ನೃತ್ಯ ಮಾಡುವುದು ಸಾಮಾನ್ಯದ ಸಂಗತಿಯಲ್ಲ. ಅಂತಹ ಸಾಹಸವನ್ನು ರಜನಿ ಮಾಡಿದ್ದಾರೆ ಎಂದು ಚಿತ್ರತಂಡ ಮೆಚ್ಚುಗೆಯ ಮಾತನಾಡಿದೆ.
ನಿರ್ಮಾಪಕ ಕಾಶೀನಾಥ್ ಡಿ ಮಡಿವಾಳವರ್ ಸಾಹಿತ್ಯ ಬರೆದಿರುವ ಹಾಡಿಗೆ ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಅಚ್ಚುಕಟ್ಟಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಮಾಗಡಿ ರಸ್ತೆಯ ದೇವಾಲಯದ ಬಳಿ ಹಾಕಲಾಗಿದ್ದ ವಿಶೇಷ ಸೆಟ್‍ನಲ್ಲಿ ನಿರ್ದೇಶಕ ಶ್ರೀನಿ ಹನುಮಂತರಾಜು ಅವರ ಸಲಹೆ ಮೇರೆಗೆ ನೃತ್ಯ ನಿರ್ದೇಶಕ ಮೋಹನ್ ಮಾಸ್ಟರ್ ಅವರ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ.
ನಿರ್ದೇಶಕ ಶ್ರೀನಿ ಹನುಮಂತರಾಜು ಮಾಹಿತಿ ನೀಡಿ ನಾಯಕಿ ರಜನಿ 25 ಕೆಜಿ ತೂಕರ ಬಟ್ಟೆ ಹಾಕಿಕೊಂಡು ನೃತ್ಯ ಮಾಡಿದ್ದಾರೆ.ಅವರ ಧೈರ್ಯ, ಮತ್ತು ಕೆಲಸದ ಮೇಲಿರುವ ಶ್ರದ್ಧೆ ಮೆಚ್ಚುವಂತಹುದು.ಇದರ ಜೊತೆಗೆ ಹಿರಿಯ ಗಾಯಕಿ ಬಿ.ಜಯಶ್ರೀ ಅವರು ಟೈಟಲ್ ಟ್ರಾಕ್ ಹಾಡಿದ್ದಾರೆ. ಅವರೇ ಹಾಡಬೇಕು ಎನ್ನುವುದು ತಂಡದ ಬಯಕೆಯಾಗಿತ್ತು. ಚಿತ್ರ ಮತ್ತು ಹಾಡು ಚೆನ್ನಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದ ಶೀರ್ಷಿಕೆ ಗೀತೆಯನ್ನು ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು ಸರಿ ಸುಮಾರು ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಚಿತ್ರೀಕರಣ ಮಾಡಲು ನಿರ್ಮಾಪಕ ಕಾಶೀನಾಥ್ ಅವರು ಸಹಕಾರ ನೀಡಿದ್ದಾರೆ. ಈ ಹಾಡಿಗೆ ಸುಮಾರು 25 ಲಕ್ಷಕ್ಕಿಂತಲೂ ಹೆಚ್ಚು ಖರ್ಚಾಗಿದೆ. ಹಾಡು ಅದ್ಬುತವಾಗಿ ಮೂಡಿ ಬಂದಿದೆ. ಅವರು ಚಿತ್ರದ ಟೈಟಲ್ ಟ್ರಾಕ್ ಬಿಡುಗಡೆಯಾಗಿದೆ. ಹಿರಿಯ ನಟಿ ಮತ್ತು ಗಾಯಕಿ ಬಿ.ಜಯಶ್ರೀ ಅವರು ಶೀರ್ಷಿಕೆ ಗೀತೆ ಹಾಡಿದ್ದಾರೆ. ಹಾಡು ಅಂದುಕೊಂಡದಕ್ಕಿಂತ ಉತ್ತಮವಾಗಿ ಮೂಡಿ ಬಂದಿದೆ.
ಅದರಲ್ಲಿಯೂಈ ಹಾಡಿನ ಮೂಲಕ ಅಂಬುಜಾ ಯಾರು, ಏನು, ಎನ್ನುವುದು ಗೊತ್ತಾಗಲಿದೆ. ಹಾಡು ಚಿತ್ರದಲ್ಲಿ ಪ್ರಮುಖವಾಗಿದೆ, ನಾಯಕಿ ರಜನಿ ಸುತ್ತ ಕಥೆ ಸಾಗಲಿದೆ.ಕ್ರೈಮ್ ರಿಪೋಟರ್ ಪಾತ್ರದಲ್ಲಿ ಶುಭ ಪೂಂಜಾ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸರಿ ಸುಮಾರು 40 ದಿನಗಳ ಕಾಲ ಚಿಕ್ಕಮಂಗಳೂರಿನ ಬಳಿಯಿರುವ ಅತೀ ಎತ್ತರದ ಬೆಟ್ಟ ಎತ್ತಿನ ಭುಜ, ಈ ಬೆಟ್ಟದ ಸುತ್ತಮುತ್ತ ಕೆಲವು ಸಿನಿಮಾ ಮಂದಿ ಚಿತ್ರೀಕರಣ ಮಾಡಿದ್ದಾರೆ. ಆದರೆ, ಬರೋಬ್ಬರಿ ಮೂರು ಕಿಲೋಮೀಟರ್ ಎತ್ತರವಿರುವ ಎತ್ತಿನ ಭುಜ ಬೆಟ್ಟವನ್ನೇರುವ ಸಾಹಸ ಯಾರಿಂದಲೂ ಮಾಡಲಾಗಲಿಲ್ಲ. ಎತ್ತಿನ ಭುಜದ ತುತ್ತ ತುದಿಯನ್ನೇರಿ ಹಾಡೊಂದನ್ನು ಚಿತ್ರೀಕರಿಸಿದೆ. ನಟಿ ಶುಭಪುಂಜಾ ಹಾಗೂ ದೀಪಕ್ ಸುಬ್ರಮಣ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ತಾಯಿ ಪಾತ್ರದಲ್ಲಿ ರಜಿನಿ ಕಾಣಿಸಿಕೊಂಡಿದ್ದು, ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ಮಿಂಚಿದ್ದಾಳೆ. ಇಬ್ಬರು ಲಂಬಾಣಿ ವೇಷಭೂಷಣ ತೊಟ್ಟು ಲಾಲಿ ಹಾಡಿಗೆ ಮೆರಗು ತುಂಬಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ. ಚಿತ್ರವನ್ನು ಮಾರ್ಸ್ ಸಂಸ್ಥೆ ವಿತರಣೆ ಮಾಡುತ್ತಿದೆ. ಕನ್ನಡದಲ್ಲಿ ಮತ್ತೊಂದು ವಿಭಿನ್ನ ಸಿನಿಮಾವನ್ನು ನಿರ್ದೇಶಕ ಶ್ರೀನಿ ತೆರೆಯ ಮೇಲೆ ತರಲು ಮುಂದಾಗಿದ್ದಾರೆ.