ನೀರಿನಾಳದಲ್ಲಿ ” ಅಮ್ಮು” ಶೀರ್ಷಿಕೆ ಅನಾವರಣ : ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಪ್ರಯತ್ನ
ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರತಿಭೆಗಳು ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಇದರ ಜೊತೆಗೆ ವಿನೂತನ ಪ್ರಯತ್ನದ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದೀಗ ಅಂತಹುದೇ ಮತ್ತೊಂದು ಪ್ರಯತ್ನ “ ಅಮ್ಮು”.
“ಟಗರು ಪಲ್ಯ” ಚಿತ್ರದ ಚೊಚ್ಚಲ ಅಭಿನಯಕ್ಕೆ ಪಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭರವಸೆಯ ನಟಿ ಅಮೃತಾ ಪ್ರೇಮ್ ಎರಡನೇ ಚಿತ್ರ “ಅಮ್ಮು ” ಶೀರ್ಷಿಕೆ ಅನಾವಣಗೊಂಡಿದೆ.ಈ ಚಿತ್ರದಲ್ಲಿ ಯುವ ನಟ ಸ್ಮೈಲ್ ಗುರು ರಕ್ಷಿತ್ ಹಾಗು ಜೆರೂಶಾ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಶೀರ್ಷಿಕೆಯನ್ನು ನಟ,ನಿರ್ದೇಶಕ ದುನಿಯಾ ವಿಜಯ್ , ನೆನಪಿರಲಿ ಪ್ರೇಮ್ ಅನಾವರಣ ಮಾಡಿದರು, ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲು ಎನ್ನುವಂತೆ ಸಾಗರದಾಳದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಲಾಗಿದೆ.
ಕನ್ನಡ ಚಿತ್ರರಂಗಕ್ಕೆ ಐಂದ್ರಿತಾ ರೇ, ಕೃತಿ ಕರಬಂಧ, ಆಶಿಕಾ ರಂಗನಾಥ್ ಸೇರಿದಂತೆ ಅನೇಕ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಆಕಾಶ್, ಅರಸು , ಮೆರವಣಿಗೆ ಚಿತ್ರಗಳ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ಈ ಚಿತ್ರದ ಮೂಲಕ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಜೆರುಶಾ ಅವರನ್ನು ನಾಯಕಿಯನ್ನಾಗಿ ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ.
ಹೊಸ ಚಿತ್ರ ಅಮ್ಮು ಶೀರ್ಷಿಕೆ ಅನಾವರಣ ಮಾಡಿ ನಟ, ನಿರ್ದೇಶಕ ವಿಜಯ್ ಕುಮಾರ್, ಮಾತನಾಡಿ ಕನ್ನಡದಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದೆ. ಎಲ್ಲಾ ಹೊಸ ಪ್ರತಿಭೆಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು
ನಟ ನೆನಪಿರಲಿ ಪ್ರೇಮ್ ಮಾತನಾಡಿ, ಮಗಳು ಮೊದಲ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಳು, ಇದೀಗ ಎರಡನೇ ಚಿತ್ರದಲ್ಲಿ ಒಳ್ಳೆಯ ಅವಕಾಶ ಮತ್ತು ಪಾತ್ರ ಸಿಕ್ಕಿದೆ. ಹಾಗೆ ನೋಡಿದರೆ ಮಗಳು ಚಿತ್ರರಂಗಕ್ಕೆ ಬರುತ್ತಾಳೆ ಅಂದುಕೊಂಡಿರಲಿಲ್ಲ, ಮಗ ತಯಾರಿ ಮಾಡಿಕೊಂಡಿದ್ದ. ಈ ನಡುವೆ ಅನಿರೀಕ್ಷಿತವಾಗಿ ಸಿಕ್ಕ ಟಗರು ಪಲ್ಯದ ಅವಕಾಶದ ಮೂಲಕ ಅಮೃತಾ ನಾಯಕಿಯಾಗಿ ಯಶಸ್ವಿಯಾಗಿದ್ದಾಳೆ,ಇದಕ್ಕಿಂತ ಅಪ್ಪನಿಗೆ ಇನ್ನೇನು ಬೇಕು ಎಂದರು
ನಿರ್ದೇಶಕ ಮಹೇಶ್ ಬಾಬು ಮಾತನಾಡಿ , ಚಿತ್ರರಂಗದಲ್ಲಿ ನೆಲೆ ನಿಲ್ಲಲು ವಜ್ರೇಶ್ವರಿ ಕಂಬೈನ್ಸ್ ಕಾರಣ. ಡಾ. ರಾಜ್ ಕುಮಾರ್ , ಪಾರ್ವತಮ್ಮ ರಾಜ್ ಕುಮಾರ್, ಹಾಗು ಪುನೀತ್ ರಾಜ್‍ಕುಮಾರ್ ಮತ್ತು ಕುಟುಂಬ ಅದಕ್ಕೆ ಸದಾ ಚಿರಋಣಿ. ಅಮ್ಮು ಚಿತ್ರದ ಕಥೆ ಮಾಡಿಕೊಂಡು ನಟ ರಕ್ಷಿತ್ ನೀವೇ ಸಿನಿಮಾ ಮಾಡಬೇಕು ಅಂದರು. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಪಾಂಡಿಚೆರಿಯಲ್ಲಿ ಅಂಡರ್ ವಾಟರ್‍ನಲ್ಲಿ ಶೀರ್ಷಿಕೆ ಅನಾವರಣ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಮೂಲಕ ವೀರಮದಕರಿ ಚಿತ್ರದ ಬಾಲನಟಿ ಜೆರೂಶಾ ಅವರನ್ನು ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯ ಮಾಡಲಾಗುತ್ತಿದೆ. ಅಮೃತಾ ಪ್ರೇಮ್ ಅವರಿಗೆ ಉತ್ತಮ ಪಾತ್ರ. ಇಬ್ಬರು ನಾಯಕಿಯರಲ್ಲಿ ಅಮ್ಮು ಯಾರು ಎನ್ನುವುದು ಕುತೂಹಲ ಎಂದರು
ನಟಿ ಅಮೃತಾ ಪ್ರೇಮ್, , ಮುದ್ದಾದ ಕಾಲೇಜು ಹುಡುಗಿ, ಎರಡನೇ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಟಗರು ಪಲ್ಯಕ್ಕೆ ನೀಡಿದ ಬೆಂಬಲ ಮತ್ತು ಸಹಕಾರವನ್ನು ಅಮ್ಮು ಚಿತ್ರಕ್ಕೆ ನೀಡಲಿ, ಅಮ್ಮು ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾಗುತ್ತಿರುವ ಜೆರೂಶಾ ಅವರಿಗೆ ಒಳ್ಳೆಯಾದಾಗಲಿ ಎಂದು ಕೇಳಿಕೊಂಡರು.
ಮತ್ತೊಬ್ಬ ನಟಿ ಜೆರುಶಾ ಮಾಹಿತಿ ನೀಡಿ , ಮಾರ್ಡನ್ ಹುಡುಗಿಯ ಪಾತ್ರ, ನಿರ್ದೇಶಕ ಮಹೇಶ್ ಬಾಬು ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಅಮೃತಾ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದರು
ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ಈಗಿನ ಕಾಲದ ಯುವ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಕತೆ ಬರೆದಿದ್ದೇನೆ ಸ್ಮೈಲ್ ಗುರು ಕಿರುಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮಹೂರ್ತ ಮಾಡಿದ್ದೆ. ಕಿರು ಚಿತ್ರದ ಮೂಡಿ ಬಂದ ಬಗ್ಗೆ ಮಾದ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರಿಂದ ಕಿರುತೆರೆಯಲ್ಲಿ “ಪದ್ಮಾವತಿ” ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಮೊದಲೇ ಸಿನಿಮಾ ಮಾಡುವ ಕನಸಿತ್ತು. ಆಗಲೇ ನಿರ್ದೇಶಕ ಮಹೇಶ್ ಬಾಬು ಹಾಗು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು ಕೆಲಸ ಮಾಡಬೇಕು ಅಂದುಕೊಂಡಿದ್ದೆ. ಅದರಂತೆ ಇಬ್ಬರೂ ಜೊತೆಗೂಡಿದ್ದಾರೆ ಎಂದರು
ನಿರ್ಮಾಪಕರಾದ ಅನುರಾಗ್ ಆರ್ ಚಿತ್ರ ಸೆಟ್ಟೇರಲು ನಟ ರಕ್ಷಿತ್ ಕಾರಣ ,ಬೆಳಂಬೆಳಗ್ಗೆ ರಕ್ಷಿತ್ ಮನೆಗೆ ಬಂದು ಕಥೆ ಕೇಳಿ ಅಂದ್ರು, ಆ ಬಳಿಕ ನಿರ್ದೇಶಕ ಮಹೇಶ್ ಬಾಬು ಅವರನ್ನು ಪರಿಚಯಿಸಿದರು. ನಾವು ಅಪ್ಪು ಸರ್ ದೊಡ್ಡ ಪ್ಯಾನ್ .ಅವರ ಜೊತೆ ಕೆಲಸ ಮಾಡಿದವರ ಬಳಿ ಚಿತ್ರ ಮಾಡುತ್ರಿದ್ದೇವೆ. ಎಲ್ಲೆಲ್ಲೋ ಇದ್ದವರನ್ನು ಒಂದು ಗೂಡಿಸಿ ಚಿತ್ರ ಮಾಡುತ್ತಿದ್ದೇವೆ. ರಕ್ಷಿತ್ , ಅಮೃತಾ ಹಾಗು ಜೆರುಶಾ ಅವರ ಜೋಡಿ ಅದ್ಬುತ, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರು.
ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗುರು ಹಂಸಲೇಖ ಜೊತೆ ಇದ್ದಾಗಿನಿಂದಲೂ ನಿರ್ದೇಶಕ ಮಹೇಶ ಬಾಬು ಅವರನ್ನು ಬಲ್ಲೆ. ಅವರ ಚಿತ್ರದಲ್ಲಿ ಸಂಗೀತಕ್ಕೆ ಮಹತ್ವ ಕೊಡ್ತಾರೆ. ನಾಯಕ ರಕ್ಷಿತ್ ಅವರಿಂದ ಚಿತ್ರ ಆಗುತ್ತಿದೆ . ನೆನಪಿರಲಿ ಪ್ರೇಮ್ ಅವರ ಚಿತ್ರಗಳಿಗೆ ಟ್ರಾಕ್ ಸಿಂಗರ್ ನಿಂದ ಹಿಡಿದು ಎಲ್ಲಾ ರೀತಿಯ ಕೆಲಸ ಮಾಡಿದ್ದೇನೆ. ಈಗ ಅವರ ಮಗಳ ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ಖುಷಿಕೊಟ್ಟಿದೆ ಎಂದರು.
ನಿರ್ಮಾಪಕಾದ ಮಿಥುನ್ ಹಾಗು ಚೇತನ್ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಕರಿಬಸವ ತಡಕಲ್ ಅವರನ್ನು ಸಾಹಿತಿಯಾಗಿ ಚಿತ್ರರಂಗಕ್ಕೆ ಪರಿಚಯ ಮಾಡಲಾಗಿದೆ