“ಅಮೂಲ್ ಬೇಬಿ” ಚಿತ್ರದ ಪೋಸ್ಟರ್ ಬಿಡುಗಡೆ

ಇದೂವರೆಗೂ ಯಾವ ಭಾಷೆಯಲ್ಲೂ ತೆರೆಕಾಣದ ಅಂಶಗಳನ್ನು ಒಳಗೊಂಡ ಕಾಮಿಡಿ ಚಿತ್ರ ‘ಅಮೂಲ್ ಬೇಬಿ’ ಪೆÇೀಸ್ಟರ್‍ನ್ನು ಮಾಜಿ ಶಾಸಕ ಎ.ಮಂಜುನಾಥ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಪಾನಿಪುರಿ’ ‘ಜಿಂಕೆಮರಿ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ಪಿ.ನವೀನ್ ಕುಮಾರ್ ಸಿನಿಮಾಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ ಹಾಗೂ ರಾಗ ಸಂಯೋಜಿಸಿ ಆಕ್ಷನ್ ಕಟ್ ಹೇಳಿದ್ದಾರೆ.

ಮಾನಸ ಕಂಬೈನ್ಸ್ ಅಡಿಯಲ್ಲಿ ಮಾಗಡಿ ಮೂಲದ ಉದ್ಯಮಿ ಬಿ.ನರಸಿಂಹಮೂರ್ತಿ ಬಂಡವಾಳ ಹೂಡಿರುವುದು ಹೊಸ ಅನುಭವ. ಸಂಪೂರ್ಣ ಹಾಸ್ಯ, ಪ್ರೀತಿ ಆಧಾರಿತ ಸನ್ನಿವೇಶಗಳು ಇರುವುದರಿಂದ ಹಿರಿಯ ನಟ ನರಸಿಂಹರಾಜು, ಚಾರ್ಲಿ ಚಾಪ್ಲಿನ್ ಮತ್ತು ಮಿ.ಬೀನ್ ಕಟ್‍ಔಟ್‍ಗಳು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದೆ.
ಮೂವರು ಹುಡುಗರು, ಒಬ್ಬಳ ಮಧ್ಯೆ ನಡೆಯುವ ಘಟನೆಗಳು ನೋಡುಗರನ್ನು ನಗಿಸುವಂತೆ ಮಾಡುತ್ತದೆ. ಅದು ಏನು ಎಂಬುದರ ಗುಟ್ಟನ್ನು ಬಿಟ್ಟುಕೊಡದೆ ನಿರ್ದೇಶಕರು ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಗೀತೆಗಳು ಚೆನ್ನಾಗಿ ಬಂದಿರುವುದರಿಂದ ಈಗಾಗಲೇ ಎ2 ಮ್ಯೂಸಿಕ್ ಸಂಸ್ಥೆಯು ಹಕ್ಕುಗಳನ್ನು ಪಡೆದುಕೊಂಡಿದೆ.

ಧಾರಾವಾಹಿ ಕಲಾವಿದರುಗಳಾದ ಭಗತ್, ಶಿವ ಹಾಗೂ ರಂಗಭೂಮಿ ಪ್ರತಿಭೆ ಆವಿನ್ ನಾಯಕರುಗಳು. ‘ಗಂಗೆಗೌರಿ’ ಸೀರಿಯಲ್‍ನ ವಿದ್ಯಾಶಾಸ್ತ್ರೀ ನಾಯಕಿ. ಮತ್ತೋಂದು ಪ್ರಮುಖ ಪಾತ್ರದಲ್ಲಿ ‘ಸೀತಾರಾಮ’ ಧಾರವಾಹಿ ಖ್ಯಾತಿಯ ಬೇಬಿ ರೀತುಸಿಂಗ್ ನಟಿಸಿದ್ದಾರೆ. ಇವರೊಂದಿಗೆ ಶ್ವೇತಾ.ಎಂ, ಪೂಜಿತ, ಪ್ರತಿಮ, ಮೈತ್ರಿಸತೀಶ್ ಮುಂತಾದವರು ಅಭಿನಯಿಸಿದ್ದಾರೆ.

ಸಂಗೀತ ಮಾಥ್ಯೂಸ್‍ಮನು, ಛಾಯಾಗ್ರಹಣ ವೀನಸ್‍ಮೂರ್ತಿ, ನೃತ್ಯ ರಾಮು, ಸಾಹಸ ಚಂದ್ರುಬಂಡೆ ಅವರದಾಗಿದೆ. ಬೆಂಗಳೂರು, ಮಾಗಡಿ, ತಾವರೆಕೆರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‍ನಿಂದ ಪ್ರಶಂಸೆಗೆ ಒಳಪಟ್ಟಿರುವ ಸಿನಿಮಾ ಇನ್ನರೆಡು ತಿಂಗಳಿನಲ್ಲಿ ಜನರಿಗೆ ತೋರಿಸಲು ತಂಡ ಯೋಜನೆ ರೂಪಿಸಿಕೊಂಡಿದೆ.