“ಎಕ್ಕ’ ಭೂಗತ ಲೋಕದ ಒಳ ಹೊರಗು ಅನಾವರಣ ಮಾಡುವ ಪ್ರಯತ್ನ
“ಯುವ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ದೊಡ್ಮನೆ ಕುಟುಂಬದ ಕುಡಿ ಯುವರಾಜ್ ಕುಮಾರ್ ಅಭಿನಯದ ಹೊಸ ಚಿತ್ರ “ಎಕ್ಕ” ಸೆಟ್ಟೇರಿದೆ. ಬಂಡೆ ಮಾಕಾಳಮ್ಮ ದೇವಿಯ ಆಶೀರ್ವಾದದೊಂದಿಗೆ ಚಿತ್ರ ಮುಹೂರ್ತ ನೆರವೇರಿದೆ.
ಯುವ ರಾಜ್‍ಕುಮಾರ್ ಎರಡನೇ ಚಿತ್ರಕ್ಕೆ ಕನ್ನಡ ಚಿತ್ರರಂದ ಮೂರು ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಾದ ಪಿ.ಆರ್.ಕೆ ಪೆÇ್ರಡಕ್ಷನ್ಸ್, ಜಯಣ್ಣ ಫಿಲಂಸ್, ಕೆ.ಆರ್.ಜಿ.ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಮುನ್ನುಡಿ ಬರೆದಿದೆ.
“ಎಕ್ಕ” ಚಿತ್ರ 2025ರ ಜೂನ್ 6 ರಂದು ತೆರೆಗೆ ಬರಲಿದೆ ಎಂದು ತಂಡ ಮಹೂರ್ತದಂದೇ ಪ್ರಕಟಿಸಿದೆ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು
ಮುಹೂರ್ತ ಸಮಾರಂಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಪತ್ನಿ ಶೈಲಜಾ ವಿಜಯ್ ಕ್ಲಾಪ್ ಮಾಡಿ “ಎಕ್ಕ” ಚಿತ್ರಕ್ಕೆ ಶುಭಕೋರಿರೆ ಚಿತ್ರದ ಮೊದಲ ಶಾಟ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ನಿರ್ದೇಶಿಸಿದ್ದು ವಿಶೇಷವಾಗಿತ್ತು. ನಿರ್ಮಾಪಕ ಕಾರ್ತಿಕ ಗೌಡ ತಾಯಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮೆರಾ ಬಟನ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ಜಯಣ್ಣ, ಭೋಗೇಂದ್ರ ಸೇರಿದಂತೆ ತಂಡ ಹಾಜರಿದ್ದರು. ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ‘ಎಕ್ಕ’ ಒಬ್ಬ ಯುವಕನ ಕಥೆ ಹೇಳುತ್ತದೆ. ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ ಎಕ್ಕ”.
ಚಿತ್ರವನ್ನು ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ “ಎಕ್ಕ” ಚಿತ್ರದ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಿದ್ದತೆ ಮಾಡಿಕೊಂಡಿದೆ.
ಈ ವೇಳೆ ಮಾತನಾಡಿದ ನಿರ್ದೇಶಕ ರೋಹಿತ್ ಪದಕಿ “ಎಕ್ಕ ಒಂದು ಮೆಗಾ ಚಿತ್ರವಾಗಿದ್ದು,ಜವಾಬ್ದಾರಿ ಹೊತ್ತಿರುವ ಹೆಮ್ಮೆ ನನಗಿದೆ. ಚಿತ್ರದ ಎಲ್ಲ ನಿರ್ಮಾಪಕರು, ಕನ್ನಡ ಜನರು, ಯುವ ರಾಜ್ ಕುಮಾರ್ ಮತ್ತು ಅವರ ಅಭಿಮಾನಿಗಳ ನಂಬಿಕೆಯನ್ನು ಚಿತ್ರ ಉಳಿಸಲಿದೆ, ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ” ಎಂದರು.
ನಟ ಯುವ ರಾಜ್ ಕುಮಾರ್ ಮಾತನಾಡಿ, “ತಾಯಿ ಆಶಿರ್ವಾದದೊಂದಿಗೆ, ಅಪ್ಪು ಚಿಕ್ಕಪ್ಪನ ಆಶಿರ್ವಾದದೊಂದಿಗೆ ಇವತ್ತು “ಎಕ್ಕ” ಚಿತ್ರ ಆರಂಭಿಸಿದ್ದೇವೆ. ಮೂರು ಹೆಸರಾಂತ ನಿರ್ಮಾಣ ಸಂಸ್ಥೆಗಳೊಡನೆ, ಕೆಲಸ ಮಾಡುತ್ತಿರುವುದು ಖುಷಿ ಇದೆ” ಎಂದು ಹೇಳಿದರು
ನಾಯಕಿ ಸಂಪದಾ ಮಾತನಾಡಿ, “ಎಕ್ಕ ಚಿತ್ರದ ಆರಂಭ ಬಹಳ ಮಂಗಳಕರವಾಗಿ ನೆರವೇರಿರುವುದು ಸಂತೋಷವನ್ನುಂಟು ಮಾಡಿದೆ. ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರವಾಗಿ ಎದುರು ನೋಡುತ್ತಿದೇನೆ” ಎಂದು ತಿಳಿಸಿದರು.
“ಎಕ್ಕ” ಚಿತ್ರದಲ್ಲಿ ಯುವ ರಾಜ್ ಕುಮಾರ್, ಸಂಪದಾ, ಅತ್ತುಲ್ ಕುಲಕರ್ಣಿ, ಶ್ರುತಿ ಕೃಷ್ಣ, ರಾಹುಲ್ ದೇವ್ ಶೆಟ್ಟಿ ಮುಂತಾದವರು ನಟಿಸಲಿದ್ದು, ಚಿತ್ರಿಕಥೆ ರೋಹಿತ್ ಪದಕಿ ಮತ್ತು ವಿಕ್ರಮ್ ಹತ್ವಾರ್ ರಚಿಸಿರುತ್ತಾರೆ. ಚರಣ್ ರಾಜ್ ಸಂಗೀತ, ವಿ.ನಾಗೇಂದ್ರ ಪ್ರಸಾದ್, ನಾಗಾರ್ಜುನ ಶರ್ಮ, ನಟರಾಕ್ಷಸ ಡಾಲಿ ಧನಂಜಯ, ರೋಹಿತ್ ಪದಕಿ ಸಾಹಿತ್ಯ ರಚಿಸಲಿದ್ದಾರೆ.
ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿದ್ದು, ದೀಪು ಎಸ್ ಕುಮಾರ್ ಸಂಕಲನ,ಮತ್ತು ವಿಶ್ವಾಸ್ ಕಶ್ಯಪ್ ಪೆÇ್ರಡಕ್ಷನ್ ವಿನ್ಯಾಸ ಮಾಡಲಿದ್ದಾರೆ. ಚಿತ್ರದ ಫೈಟ್ಸ್ ಗಳನ್ನು ಅರ್ಜುನ್ ರಾಜ್ ಮತ್ತು ಚೇತನ್ ಡಿಸೌಜಾ ನಿರ್ದೇಶಿಸಲಿದ್ದಾರೆ.