"Andondithu Kaala" song 'Arere Yaro Evalu..' released: Expectations rise

“ಅಂದೊಂದಿತ್ತು ಕಾಲ” ಚಿತ್ರದ ‘ಅರೇರೇ ಯಾರೋ ಇವಳು..’ ಹಾಡು ಬಿಡುಗಡೆ : ನಿರೀಕ್ಷೆ ಹೆಚ್ಚಳ - CineNewsKannada.com

“ಅಂದೊಂದಿತ್ತು ಕಾಲ” ಚಿತ್ರದ ‘ಅರೇರೇ ಯಾರೋ ಇವಳು..’ ಹಾಡು ಬಿಡುಗಡೆ : ನಿರೀಕ್ಷೆ ಹೆಚ್ಚಳ

ಈಗಾಗಲೇ ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ “ಅಂದೊಂದಿತ್ತು ಕಾಲ” ಚಿತ್ರದ ಅಂದೊಂದಿತ್ತು ಕಾಲ” ಚಿತ್ರದ ಎರಡನೇ ಹಾಡು ‘ಅರೇರೇ ಯಾರೋ ಇವಳು.. ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಜೊತೆಗೆ ನಿಶಾ ರವಿಕೃಷ್ಣನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ

‘ಮುಂಗಾರು ಮಳೆಯಲ್ಲಿ .” ಹಾಡು ಯೂಟ್ಯೂಬ್ ನಲ್ಲಿ 36.4 ಮಿಲಿಯನ್‍ಗೂ ಅಧಿಕ ವೀಕ್ಷಣೆ ಪಡೆದಿತ್ತು. ಜೊತೆಗೆ ಈ ಹಾಡಿಗೆ ಹೆಚ್ಚಿನ ಮಂದಿ ರೀಲ್ಸ್ ಮಾಡಿದ್ದರು. ಇದರ ನಡುವೆ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದ್ದು ಇದೂ ಕೂಡ ಯಶಸ್ವಿಯಾಗುವ ನಿರೀಕ್ಷೆ ಚಿತ್ರತಂಡದ್ದು.

ಚಿತ್ರದ ಮೊದಲ ಹಾಡಿನ ಫೀಮೇಲ್ ವರ್ಷನ್ ರುಚಿತ ರಾಜೇಶ್ ಯುವ ಗಾಯಕಿ ಹಾಡಿ ಗಮನ ಸೆಳೆದರು. ತದನಂತರ ಎರಡನೇ ಗೀತೆಯನ್ನು ರಾಜ್ಯಕ್ಕೆ 10ನೇ ತರಗತಿಯಲ್ಲಿ ಮೊದಲ ರಾಂಕ್ ಪಡೆದಿರುವ ಮಲ್ಲಸಂದ್ರದಲ್ಲಿರುವ ಬಿ .ಎನ್. ಆರ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಂದ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಚಿತ್ರವನ್ನು ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ 29 ರಂದು ಚಿತ್ರ ತೆರೆಗೆ ಬರಲಿದ್ದು ಇದೊಂದು ಪ್ಯೂರ್ ಲವ್ ಹಾಗೂ ಗೆಳೆತನ ಚಿತ್ರವಾಗಿದೆ

ಈ ವೇಳೆ ನಟ ವಿನಯ್ ರಾಜಕುಮಾರ್ ಮಾತನಾಡಿ ಚಿತ್ರದ ಮೊದಲ ಸಾಂಗ್ ದೊಡ್ಡ ಹಿಟ್ ಆಗಿದೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ, ಇದು ನನ್ನ ಪೆವರೇಟ್ ಗೀತೆ.ನಿರ್ದೇಶಕ ಕೀರ್ತಿ ಗೆ ಇದನ್ನೇ ಮೊದಲು ಬಿಡಿ ಎಂದಿದ್ದೆ. ಚಿತ್ರದಲ್ಲಿ 16ವರ್ಷದ ಹುಡುಗನ ಗೆಟಪ್‍ನಲ್ಲಿ ಮಾಡುವುದು ಚಾಲೆಂಜ್ ಆಗಿತ್ತು. ತೂಕ ಕಡಿಮೆ ಮಾಡುವುದು ಕಷ್ಟ ಆಗಿತ್ತು. ಹಾಡು ತುಂಬಾ ಚೆನ್ನಾಗಿ ಬಂದಿದೆ. ಲೊಕೇಶನ್ , ಸಾಂಗ್ ಎಲ್ಲವೂ ಸೊಗಸಾಗಿದೆ. ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆಹತ್ತನೇ ತರಗತಿ ಓದುವಾಗ ಬಹಳ ಮುಗ್ಧ ಹುಡುಗ. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ನಿಮ್ಮ ಬೆಂಬಲ ಇರಲಿ ಎಂದರು.

ನಟಿ ನಿಶಾ ರವಿಕೃಷ್ಣನ್ ಮಾತನಾಡಿ ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಇಂಪಾರ್ಟೆಂಟ್ ಆಗಿದೆ. ನಿರ್ದೇಶಕರು , ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ರೀತಿ ನಟ ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರ ಎಂದು ಹೇಳಿದರು

ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾಹಿತಿ ನೀಡಿ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ಚಿತ್ರದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೊರೊನಾ ಸಮಯದಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದು , ಆಗ ಯುಗಾದಿಯ ಹಬ್ಬ , ನಿರ್ಮಾಪಕರು ಜೊತೆ ಇದ್ದು ಸಂಭ್ರಮಿಸಿದ್ದ ಕ್ಷಣ ಮರೆಯಲು ಸಾಧ್ಯವಿಲ್ಲ. ನಮಗೆ ಏನು ಬೇಕು ಅದೆಲ್ಲವನ್ನು ನಿರ್ಮಾಪಕ ಭುವನ್ ಸುರೇಶ್ ನೀಡಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು , ವಿನಯ್ ರಾಜಕುಮಾರ್ ಹಾಗೂ ನಿಶಾ ಕಾಣಿಸಿಕೊಂಡಿದ್ದಾರೆ ಅಭಿನಯಿಸಿದ್ದಾರೆ ಎಂದರು

ನಿರ್ಮಾಪಕ ಭುವನ್ ಸುರೇಶ್ ಮಾತನಾಡಿ ಹುಡುಗರ ಶ್ರಮದ ಬಗ್ಗೆ ಬಹಳ ನಂಬಿಕೆ ಇದೆ. ಚಿತ್ರ ಚೆನ್ನಾಗಿ ಬಂದಿದೆ. ಇದಕ್ಕೂ ಮೊದಲು ಕಾಲಾಪತ್ತರ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ಈಗಾಗಲೇ ಮುಂಗಾರು ಮಳೆಯಲ್ಲಿ… ಹಾಡು ದೊಡ್ಡ ಹಿಟ್ ಆಗಿದ್ದು ,ರಾಜಕೀಯ ಸ್ನೇಹಿತರು ಹಾಗೂ ನಮ್ಮೂರಿನ ಜನರು ಹಾಡಿನ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಕೂಡ ಹಿಟ್ ಆಗಲಿ. ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ , ನೀವು ಎಲ್ಲರೂ ಬಂದು ನೋಡಿ ಹರಸಿ ಎಂದರು.

ಸಂಗೀತ ನಿರ್ದೇಶಕ ರಾಘವೇಂದ್ರ .ವಿ ಮಾತನಾಡಿ ನಮ್ಮ ಮೊದಲ ಸಾಂಗ್ ಮೇಘಾ ಹಿಟ್ ಆಗಿದ್ದು , ನಿಮ್ಮಗಳ ಪ್ರೋತ್ಸಾಹ ಇದಕ್ಕೆ ಕಾರಣ. ಈಗ ಎರಡನೇ ಹಾಡು ಬಿಡುಗಡೆ ಆಗಿದೆ. ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ಹೇಳುವೆ. ಇಡೀ ಸಾಂಗ್ ನಲ್ಲಿ ನಿಶಾ ಅವರ ಲುಕ್ ಹಾಗೂ ವಿನಯ್ ಇನೂಸೆಂಟ್ ಹೈಲಟ್ ಆಗಿದೆ. ಪ್ರತಿ ಶಾಟ್ ಕೂಡ ಅದ್ಭುತವಾಗಿ ಬಂದಿದೆ. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿವೆ ಎಂದರು. ಛಾಯಾಗ್ರಹಕ ಅಭಿಷೇಕ್ ಕಾಸರಗೋಡು , ಸಂಕಲನಗಾರ ಕೀರ್ತಿ, ನೃತ್ಯ ನಿರ್ದೇಶಕ ರಘು ಆರ್.ಜೆ ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈಗ ‘ಅರೇರೇ ಯಾರೋ ಇವಳು …’ ಸಾಂಗ್ ರಿಲೀಸ್ ಆಗಿದ್ದು , 90ರ ಕಾಲಘಟ್ಟದಲ್ಲಿ ನಾಯಕ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ಅಭಿನಯಿಸಿದ್ದಾರೆ. ಹಾಡು ಮಧುರವಾಗಿ ಮನಮುಟ್ಟುವಂತಿದೆ. ಈ “ಅಂದೊಂದಿತ್ತು ಕಾಲ” ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin