ಚಂದನವನಕ್ಕೆ ಮತ್ತೊಬ್ಬ ಯುವ ನಾಯಕ “ರಾಹುಲ್” ಪ್ರವೇಶ - CineNewsKannada.com

ಚಂದನವನಕ್ಕೆ ಮತ್ತೊಬ್ಬ ಯುವ ನಾಯಕ “ರಾಹುಲ್” ಪ್ರವೇಶ

ಯುವರತ್ನ ಹಾಗೂ ಬಘೀರ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ರಾಹುಲ್ ಇದೀಗ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ. ಅದುವೇ “ನೀ ನಂಗೆ ಅಲ್ಲವಾ” ಚಿತ್ರದ ಮೂಲಕ.

ಬೆಂಗಳೂರಿನ ರಾಹುಲ್ ಆರಂಭದಿಂದ ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸುಹೊತ್ತು ಆಡಿಷನ್ ಕೊಡುವುದಕ್ಕೆ ಶುರು ಮಾಡಿದರು. ಉಷಾ ಭಂಡಾರಿ ಗರಡಿಯಲ್ಲಿ ಪಳಗಿದರು. ವರ್ಕ್ ಶಾಪ್ ಮುಗಿಸಿಕೊಂಡು ಬಂದು ಸಿನಿಮಾವನ್ನು ಶುರು ಮಾಡಿದರು. ಸಿನಿಮಾ ರಾಹುಲ್ ಅವರಿಗೆ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಡ್ಯಾನ್ಸ್ ಆಗ್ಲಿ, ಆಕ್ಟಿಂಗ್ ಆಗ್ಲಿ ಸೆಟ್ ಹೋಗುವುದಕ್ಕೂ ಮುನ್ನವೇ ರಿಹರ್ಸಲ್ ಮಾಡಿಕೊಂಡು ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅಂದ್ರೆ ರಾಹುಲ್ ಗೆ ಸ್ಪೂರ್ತಿ. ಅವರ ಜೊತೆಗೆ ಯುವರತ್ನ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದಕ್ಕೇನೆ ಸಾರ್ಥಕ ಭಾವ ಫೀಲ್ ಮಾಡ್ತಾರೆ. ಶ್ರೀಮುರುಳಿ ಅಣ್ಣನ ಸ್ಥಾನದಲ್ಲಿ ನಿಂತು ಸಪೆÇೀರ್ಟ್ ಮಾಡ್ತಾ ಇರುವುದಕ್ಕೆ ಖುಷಿ ಪಡ್ತಾರೆ. ಅಪ್ಪು ಸರ್ ಬಿಟ್ರೆ ಗೋಲ್ಡನ್ ಹಾರ್ಟ್ಸ್ ಅಂದ್ರೆ ಅಂದ್ರೆ ಮುರುಳಿ ಅಣ್ಣನೆ. ನನ್ನ ಫಿಟ್ನೆಸ್ ಗೂ ಅವರೇ ಕಾರಣ ಅಂತಾರೆ ರಾಹುಲ್.

ಸಂಗೀತ ನಿರ್ದೇಶಕ ಸೂರಜ್ ಅವರಿಂದ ಮನೋಜ್ ಅವರನ್ನ ಭೇಟಿ ಮಾಡಿದರು. ಅಲ್ಲಿಂದ ಶುರುವಾದ ಕಥೆಯೇ ನೀ ನಂಗೆ ಅಲ್ಲವಾ ಸಿನಿಮಾ. ಕಥೆ ಎಲ್ಲಾ ಮಾಡಿಕೊಂಡು ಜಯರಾಮ್ ದೇವಸಮುದ್ರ ಅವರನ್ನು ಭೇಟಿ ಮಾಡಿದರು. ಅವರಿಗೂ ಕಥೆ ಇಷ್ಟವಾಗಿ ಸುರಮ್ ಮೂವಿ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಜಯರಾಮ್ ದೇವಸಮುದ್ರ, ಸಿನಿಮಾ ಮೇಲೆ ವಿಪರೀತ ಪ್ಯಾಷನ್ ಹೊಂದಿರುವ ವ್ಯಕ್ತಿ. ಚೈತ್ರಾ ಆಚಾರ್ ಗೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಜೊತೆಗೆ ಶ್ರೀಮುರುಳಿ ಜೊತೆಗೂ ಸಿನಿಮಾ ಮಾಡುತ್ತಿದ್ದು, ಶೀಘ್ರದಲ್ಲಿಯೇ ಅಧಿಕೃತ ಟೈಟಲ್ ಅನೌನ್ಸ್ ಆಗಲಿದೆ.

ಆನ ಮತ್ತು ಮೇರಿ ಸಿನಿಮಾ ಮಾಡಿರುವ ಮನೋಜ್ ಪಿ ನಡುಲಮನೆ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾ ಇದ್ದಾರೆ. ಈಗಾಗಲೇ ಸಿನಿಮಾದ ಟಾಕಿ ಪೋಷನ್ ಮುಗಿದಿದೆ ಮಿಡಲ್ ಕ್ಲಾಸ್ ಹುಡುಗನ ಕಥೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin