ಅಗರ ಗ್ರಾಮದಲ್ಲಿ ನೂತನ ವೈದ್ಯಕೀಯ ಘಟಕಗಳ ಉದ್ಘಾಟನೆ
ತಾತಗುಣಿ ಬಳಿಯ ಅಗರ ಗ್ರಾಮದಲ್ಲಿರುವ ಮಾತೃಛಾಯಾ ಟ್ರಸ್ಟ್ ಆವರಣದ ಬಿಎಂಎಸ್ ಆಸ್ಪತ್ರೆ ಘಟಕ-2 ರಲ್ಲಿ ಆಪರೇಷನ್ ಥಿಯೇಟರ್, ಡಯಾಲಿಸಿಸ್ ಸೆಂಟರ್ ಮತ್ತು ಐಸಿಯು ಘಟಕಗಳನ್ನು ಆಸ್ಪತ್ರೆಯ ಲೈಫ್ ಟ್ರಸ್ಟಿ ಬಿ.ಎಸ್.ರಾಗಿಣಿ ನಾರಾಯಣ ಉದ್ಘಾಟಿಸಿದದರು.
ಟ್ರಸ್ಟಿ ಛೇರ್ಮನ್ ಗೌತಮ್ ಕಲತ್ತೂರ್, ಮಾತೃಛಾಯಾ ಟ್ರಸ್ಟ್ ಸ್ಥಾಪಕ ವಿ. ಕೃಷ್ಣಮೂರ್ತಿ, ಅಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಂಜುನಾಥ್, ವೈದ್ಯಕೀಯ ನಿರ್ವಾಹಕರಾದ ಡಾ.ಸಂಗಮೇಶ್, ವೈದ್ಯಕೀಯ ನಿರ್ದೇಶಕ ಹಾಗೂ ಮಾತೃಛಾಯಾ ಟ್ರಸ್ಟ್ ಟ್ರಸ್ಟಿ ಡಾ.ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಹಿಳೆಯರ ಆರೋಗ್ಯ-ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು,ಪದ್ಮಶ್ರೀ ಡಾ. ಕಾಮಿನಿ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳೆಯರಿಗೆ ಉಚಿತ ಆರೋಗ್ಯ ಕಿಟ್ ವಿತರಿಸಲಾಯಿತು. ಅಪಾರ್ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು.ಶಿಬಿರದಲ್ಲಿ 1000 ಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಲಾಭ ಪಡೆದರು.

