"Apayavide Eccharike : Television’s “Annaiah” makes his silver screen debut as Suri

“ಅಪಾಯವಿದೆ ಎಚ್ಚರಿಕೆ” : ಕಿರುತೆರೆಯ “ಅಣ್ಣಯ್ಯ” ಬೆಳ್ಳಿತೆರೆಗೆ ‘ಸೂರಿ’ಯಾಗಿ ಪಾದಾರ್ಪಣೆ - CineNewsKannada.com

“ಅಪಾಯವಿದೆ ಎಚ್ಚರಿಕೆ” : ಕಿರುತೆರೆಯ “ಅಣ್ಣಯ್ಯ” ಬೆಳ್ಳಿತೆರೆಗೆ ‘ಸೂರಿ’ಯಾಗಿ ಪಾದಾರ್ಪಣೆ

ಕಿರುತೆರೆಯಿಂದ ಹಿರಿತೆರೆಗೆ ನಟ,ನಟಿಯರು ತಂತ್ರಜ್ಞರು ಬಡ್ತಿ ಪಡೆಯುವುದು ನಿತ್ಯದ ಕೆಲಸ. ಇದೀಗ ಆ ಸಾಲಿಗೆ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ “ಅಣ್ಣಯ್ಯ” ಧಾರಾವಾಹಿಯ ನಟ ವಿಕಾಶ್ ಉತ್ತಯ್ಯ ಬೆಳ್ಳಿತೆರೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಜ್ಜುಗೊಂಡಿದ್ದಾರೆ ಅದುವೇ “ ಅಪಾಯವಿದೆ ಎಚ್ಚರಿಕೆ” ಚಿತ್ರದ ಮೂಲಕ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ.

ಅಭಿಜಿತ್ ತೀರ್ಥಹಳ್ಳಿ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ ಗೌಡ ಬಂಡವಾಳ ಹೂಡಿದ್ದು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. “ ಅಪಾಯವಿದೆ ಎಚ್ಚರಿಕೆ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ.

ಈ ವೇಳೆ ಮಾತನಾಡಿದ ನಟ ವಿಕಾಶ್ ಉತ್ತಯ್ಯ.ಸಿನಿಮಾ ಅನ್ನುವುದು ಕೃತಿ, ಹಾಗೆ ಕೃಷಿ. ಅದನ್ನು ರಚಿಸಿ, ರುಚಿಸಿ ನಿರ್ದೇಶಿಸುವುದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅವರ ಬಹು ದಿನಗಳ ಕನಸು. ಆ ಕನಸು ನನಸ್ಸಾಗಿದೆ. ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ನಮ್ಮನೆಲ್ಲಾ ಆಡಿಷನ್ ಮಾಡಿದ ರೀತಿಯೇ ವಿಭಿನ್ನ. ಸೂರಿ ನನ್ನ ಪಾತ್ರದ ಹೆಸರು. ಚಿತ್ರದ ಕಥೆ ಪಾತ್ರ ಚೆನ್ನಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಮಾತನಾಡಿ ಚಿತ್ರರಂಗದೊಂದಿಗೆ ಹತ್ತು ವರ್ಷಗಳ ನಂಟು. ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. “ಅಪಾಯವಿದೆ ಎಚ್ಚರಿಕೆ” ಮೊದಲ ನಿರ್ದೇಶನದ ಚಿತ್ರ. ಪಂಚಭೂತಗಳ ಆಧಾರದ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ಒಂದು ಪಾತ್ರಗಳು ಒಂದೊಂದು ತತ್ವ ಪ್ರತಿನಿಧಿಸುತ್ತದೆ. ವಿಕಾಶ್ ಉತ್ತಯ್ಯ ಸೂರಿ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಭಗವತಿ ,ರಾಧಾ ಎಂಬ ಹೆಸರಿನಲ್ಲೆ ಬ್ರಾಹ್ಮಣ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದರು

ಸಸ್ಪೆನ್ಸ್ ಅಡ್ವೆಂಚರ್ ಹಾರಾರ್ ಜಾನರ್ ನ ಚಿತ್ರಕ್ಕೆ ಸುನಾದ್ ಗೌತಮ್ ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಿತ್ರಕ್ಕೆ ಹರ್ಷಿತ್ ಪ್ರಭು ಸಂಕಲನವಿದೆ. ಚಿತ್ರವನ್ನು ಜನವರಿಯಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದು ಮಾಹಿತಿ ನೀಡಿದದರು

ನಿರ್ಮಾಪಕ ಮಂಜುನಾಥ್ ಮಾತನಾಡಿ “ಕದ್ದು ಮಚ್ಚಿ” ಚಿತ್ರದ ನಂತರ ನಿರ್ಮಾಣ ಮಾಡಿರುವ ಚಿತ್ರವಿದು. ಸಹೋದರಿ ಪೂರ್ಣಿಮಾ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ನಿರ್ದೇಶಕ ಅಭಿಜಿತ್ ಶ್ರಮ ಚಿತ್ರಕ್ಕೆ ಸಾಕಷ್ಟಿದೆ ಎಂದು ತಿಳಿಸಿದರು.

ನಟರಾದ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ನಟಿ ರಾಧಾ ಭಗವತಿ, ಸಂಗೀತ ನಿರ್ದೇಶಕ ಹಾಗು ಛಾಯಾಗ್ರಾಹಕ ಸುನಾದ್ ಗೌತಮ್ ಹಾಗೂ ಸಂಕಲನಕಾರ ಹರ್ಷಿತ್ ಪ್ರಭು “ಅಪಾಯವಿದೆ ಎಚ್ಚರಿಕೆ” ಕುರಿತು ತಮ್ಮ ತಮ್ಮ ಪಾತ್ರಗಳ ಕುರಿತು ವಿವರ ನೀಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin