ಗೀತಾ ಪಿಕ್ಚರ್ಸ್‍ನಿಂದ ಯುವ ನಟ ಧೀರನ್ ರಾಮ್‍ಕುಮಾರ್‍ಗೆ ಹೊಸ ಚಿತ್ರ ಪ್ರಕಟ

“ಭೈರತಿ ರಣಗಲ್” ಯಶಸ್ಸಿನ ನಂತರ, ಗೀತಾ ಪಿಕ್ಚರ್ಸ್ ಮತ್ತೊಂದು ಹ್ಯಾಟ್ರಿಕ್ ಘೋಷಣೆಗೆ ಸಿದ್ಧವಾಗಿದೆ. ನವೆಂಬರ್ 14ರಂದು “ ಎ ಫಾರ್ ಆನಂದ್” ಚಿತ್ರವನ್ನು ಡಾ. ಶಿವರಾಜ್‍ಕುಮಾರ್ ಅವರಿಗೆ ಘೋಷಿಸಿದ ನಂತರ ಇದೀಗ ಸಂಸ್ಥೆ ನಾಲ್ಕನೇ ಚಿತ್ರ ಕೈಗೆತ್ತಿಕೊಂಡಿದೆ.
ಕನ್ನಡ ಚಿತ್ರರಂಗ ಕಂಡ ಧೀಮಂತ ನಿರ್ಮಾಪಕಿ ಡಾ. ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನದ ನಿಮಿತ್ತ ತಮ್ಮ 4ನೇ ಚಿತ್ರವನ್ನು ಪ್ರಕಟಿಸಿದೆ. ಹೊಸ ಚಿತ್ರದಲ್ಲಿ ಧೀರನ್ ರಾಮ್‍ಕುಮಾರ್ ನಾಯಕನಾಗಿ ನಟಿಸಲಿದ್ದಾರೆ. ಚಿತ್ರವನ್ನು ಶಾಖಾಹಾರಿ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ ಆಕ್ಷನ್ ಕಟ್ ಹೇಳಲಿದ್ದಾರೆ
ಗೀತಾ ಪಿಕ್ಚರ್ಸ್ ಈ ಹಿಂದೆ ಹೊಸ ಪ್ರತಿಭೆಗಳನ್ನು ಬೆಳೆಸಲು ಇಚ್ಛೆ ವ್ಯಕ್ತಪಡಿಸಿದ್ದನ್ನು ಕೇಳಿದ್ದೇವೆ. ಈ ಚಿತ್ರ, ಶಿವಣ್ಣನ ಹೊರತಾದ ಬೇರೆ ನಾಯಕನನ್ನು ಕಾಸ್ಟ್ ಮಾಡುವ ಮೊದಲ ಪ್ರಯತ್ನವಾಗಿದೆ.
ನಿರ್ದೆಶಕ ಸಂದೀಪ್ ಸುಂಕದ “ಕೊನೆ ಕೆಲ ತಿಂಗಳುಗಳಿಂದ ಕಥೆಯ ಚರ್ಚೆ ನಡೆಯುತ್ತಿತ್ತು. ಕಥೆಯನ್ನು ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಅವರಿಗೆ ಹೇಳಿದಾಗ, ತುಂಬಾ ಇಷ್ಟಪಟ್ಟು ಚಿತ್ರವನ್ನು ನಿರ್ಮಿಸಲು ಮುಂದಾದರು. ಇಂಥಾ ದೊಡ್ಡ ಬ್ಯಾನರ್ ಜೊತೆ ಎಷ್ಟೋ ನಿರ್ದೆಶಕರಿಗೆ ಕೆಲಸ ಮಾಡುವ ಆಸೆಯಿರುತ್ತದೆ. ನನ್ನ ಎರಡನೇ ಸಿನಿಮಾಗೆ ಈ ಅವಕಾಶ ಸಿಕ್ಕಿದ್ದಕ್ಕೆ ನಾನು ಎಷ್ಟು ಸಂತೋಷ ಪಡುತ್ತೇನೆ ಎಂಬುದು ಹೇಳಲು ಪದಗಳೇ ಸಾಕಾಗಲ್ಲ ಎಂದಿದ್ದಾರೆ.

ನಟ ಧೀರೇನ್ ರಾಮ್ ಕುಮಾರ್ ಪ್ರತಿಕ್ರಿಯೆ ನೀಡಿ ಮೊದಲ ಚಿತ್ರದ ನಂತರ ಪರ್ಫಾರ್ಮೆನ್ಸ್ ಆಧರಿಸಿಕೊಳ್ಳುವ ಚಿತ್ರ ಬೇಕೆಂಬ ಕನಸು ಇತ್ತು. ಹಲವಾರು ಆಫರ್‍ಗಳು ಬಂದರೂ, ನಿರಾಕರಿಸಿ, ಮೇಲೆ ಕೆಲಸ ಮಾಡಲು ಸಮಯ ತೆಗೆದುಕೊಂಡೆ. ನನ್ನ ಎರಡನೇ ಸಿನಿಮಾದಲ್ಲಿ ನನ್ನಲ್ಲಿರುವ ಕಲಾವಿದನನ್ನು ಹೊರ ಹಾಕುವ ಅವಕಾಶವಿದೆ. ಶಾಖಾಹಾರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಮೂಲಕ ದೊಡ್ಡ ಹೆಸರು ಮಾಡಿತ್ತು. ಇಂಥಾ ತಂಡದ ಜೊತೆಗೆ ಕೆಲಸ ಮಾಡುವುದು ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ