New poster of the film "Devanampriya" released: Second phase of shooting to begin soon

“ದೇವನಾಂಪ್ರಿಯ” ಚಿತ್ರದ ಹೊಸ ಪೋಸ್ಟರ್ ಬಿಡುಗಡೆ: ಶೀಘ್ರದಲ್ಲೇ ಶುರು ಎರಡನೇ ಹಂತದ ಚಿತ್ರೀಕರಣ - CineNewsKannada.com

“ದೇವನಾಂಪ್ರಿಯ” ಚಿತ್ರದ ಹೊಸ ಪೋಸ್ಟರ್ ಬಿಡುಗಡೆ: ಶೀಘ್ರದಲ್ಲೇ ಶುರು ಎರಡನೇ ಹಂತದ ಚಿತ್ರೀಕರಣ

‘ಜೋಡಿ ಹಕ್ಕಿ’ ‘ಭೂಮಿಗೆ ಬಂದ ಭಗವಂತ’ ದಂತಹ ಧಾರಾವಾಹಿಗಳಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ತಾಂಡವ್ ರಾಮ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಕನಸು ಕಾಣುತ್ತಿದ್ದಾರೆ. ಒಂದೊಳ್ಳೆ ಕಥೆ ಆಯ್ಕೆ ಮಾಡಿಕೊಂಡು “ದೇವನಾಂಪ್ರಿಯ” ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ದೇವನಾಂಪ್ರಿಯ ಚಿತ್ರದಲ್ಲಿ ಬ್ಯುಸಿಯಾಗಿರುವ ತಾಂಡವರಾಮ್ ಜನ್ಮದಿನದ ಖುಷಿಯಲ್ಲಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ದೇವನಾಂಪ್ರಿಯ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಪೋಸ್ಟರ್ ಬಳಹ ಆಕರ್ಷವಾಗಿದ್ದು, ಇಡೀ ಕುಟುಂಬ ಕುಳಿತು ನೋಡುವ ಚಿತ್ರ ಅನ್ನೋದು ಗೊತ್ತಾಗುತ್ತಿದೆ.

ದೇವನಾಂಪ್ರಿಯ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ. ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ `ದೇವನಾಂಪ್ರಿಯ’ ಸಿನಿಮಾವನ್ನು ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬರಲಿದೆ.

ಹಿರಿಯ ನಟಿ ಉಮಾಶ್ರೀ. ತಾರಾ ಅನುರಾಧಾ, ಚರಣ್ ರಾಜ್, ವೀಣಾ ಸುಂದರ್, ಧರ್ಮ, ತಬಲಾ ನಾಣಿ, ರವಿಶಂಕರ್ ಸೇರಿದಂತೆ ಮತ್ತಿತರರು ತಾರಾಬಳಗದ ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin