Ashwini Puneeth Rajkumar wishes Ajay Movies

ಅಜಯ್ ಮೂವೀಸ್‍ಗೆ ಅಶ್ವಿನಿ ಪುನೀತ್ ರಾಜಕುಮಾರ್ ಶುಭಹಾರೈಕೆ - CineNewsKannada.com

ಅಜಯ್ ಮೂವೀಸ್‍ಗೆ ಅಶ್ವಿನಿ ಪುನೀತ್ ರಾಜಕುಮಾರ್ ಶುಭಹಾರೈಕೆ

ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ಮೊದಲಿನಿಂದಲೂ ಡಾ.ರಾಜಕುಮಾರ್ ಕುಟುಂಬ ಪ್ರೋತ್ಸಾಹ ನೀಡುತಾ ಬಂದಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಅಜಯ್ ಮೂವೀಸ್ ಎಂಬ ನೂತನ ಸಂಸ್ಥೆಯನ್ನು ನಿರ್ಮಾಪಕಿ ಮಮತ ಅಮಿನ್ ಆರಂಭಿಸಿದ್ದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ

ಅಜಯ್ ಸಾಗರ್ ನಿರ್ದೇಶನದಲ್ಲಿ “ಪ್ರೊಡಕ್ಷನ್ಸ್ ನಂ 1” ಚಿತ್ರ ಮೂಡಿಬರುತ್ತಿದೆ. ನಿರ್ಮಾಪಕಿ ಮಮತ ಅಮಿನ್, ನಿರ್ದೇಶಕ ಅಜಯ್ ಸಾಗರ್, ಛಾಯಾಗ್ರಾಹಕ ಮನೀಶ್ ಬಂಗೇರ, ನವಯುಗ ಹೋಟೆಲ್ ನ ಮಾಲೀಕ ಮಾರುತಿ ಸಾಲಿಗ್ರಾಮ, ಕಾರ್ಯಕಾರಿ ನಿರ್ಮಾಪಕ ಪ್ರತಾಪ್ ಸಾಲಿಗ್ರಾಮ ಹಾಗೂ ಪಿ.ಆರ್.ಕೆ ಸಂಸ್ಥೆಯ ಸತೀಶ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಿರ್ಮಾಪಕಿ ಮಮತ ಅಮಿನ್ ಹಾಗೂ ನಿರ್ದೇಶಕ ಅಜಯ್ ಸಾಗರ್ ಮಾತನಾಡಿ ಅಜಯ್ ಮೂವೀಸ್ ಸಂಸ್ಥೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಶುಭಕೋರಿದ್ದು ಬಹಳ ಸಂತೋಷವಾಗಿದೆ. ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಆಶೀರ್ವಾದ ಸಿಕ್ಕಷ್ಟೇ ಖುಷಿಯಾಗಿದೆ ಎಂದಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin