Astira film duo Returns again in atma Film

“ಆತ್ಮ” ಚಿತ್ರ ಮೂಲಕ ಮತ್ತೆ ಒಂದಾದ “ಅಸ್ಥಿರ” ಚಿತ್ರದ ಜೋಡಿ - CineNewsKannada.com

“ಆತ್ಮ” ಚಿತ್ರ ಮೂಲಕ ಮತ್ತೆ ಒಂದಾದ “ಅಸ್ಥಿರ” ಚಿತ್ರದ ಜೋಡಿ

ಆಷಾಡ ಮಾಸ ಶುರುವಾಗುವ ಮುಂಚೆ ಹಲವು ಚಿತ್ರಗಳು ಸೆಟ್ಟೇರುತ್ತದೆ. ಅದೇ ಹಾದಿಯಲ್ಲಿ ‘ಆತ್ಮ’ ಎನ್ನುವ ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಮಾರುತಿ ಮಂದಿರದಲ್ಲಿ ಸರಳವಾಗಿ ನಡೆಯಿತು.

ವಿರಾಜ್ ಫಿಲಿಂ ರೆರ್ಕಾಡಿಂಗ್ ಸ್ಟುಡಿಯೋ ಮಾಲೀಕ ಯುವ ಪ್ರತಿಭೆ ಅನಿಲ್.ಸಿ.ಆರ್ ಕಥೆ, ನಿರ್ಮಾಣ ಮಾಡುವುದರ ಜತೆಗೆ ನಾಯಕರಾಗಿ ಅಭಿನಯಿಸುತ್ತಿರುವುದು ಎರಡನೇ ಅನುಭವ. ಮುನೆಗೌಡ ಸಹ ನಿರ್ಮಾಪಕರಾಗಿ ಗುರಿತಿಸಿಕೊಂಡಿದ್ದಾರೆ.

‘ಅಚಲ’ ‘ಓಂ ಶಾಂತಿ ಓಂ’ ಮತ್ತು ‘ಅಸ್ಥಿರ’ ಚಿತ್ರಗಳಿಗೆ ಆಕ್ಷನ್ ಹೇಳಿರುವ ಎಸ್.ಆರ್.ಪ್ರಮೋದ್ ನಿರ್ದೇಶನ ಮಾಡುತ್ತಿದ್ದಾರೆ.ಪ್ರಾರಂಭದಿಂದ ಅಂತ್ಯದವರೆಗೂ ಹಾರರ್ ಕಥೆಯಲ್ಲಿ ಸಿನಿಮಾ ಸಾಗಲಿದೆ.

ಆರು ಸ್ನೇಹಿತರುಗಳು ವೀಕೆಂಡ್ ಪಾರ್ಟಿಗೆಂದು ಒಂದು ಸ್ಥಳಕ್ಕೆ ಹೋಗುತ್ತಾರೆ. ಅವರ ಗುಂಪಿನಲ್ಲಿ ಒಬ್ಬಳು ಗೋಸ್ಟ್ ಹಂಟರ್ ಇರುತ್ತಾಳೆ. ಅವಳು ಎಲ್ಲರನ್ನು ಭೂತದ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಎಲ್ಲರೂ ಪಾರ್ಟಿ ಮಾಡುತ್ತಿರುವಾಗ ಇವಳು ಮಾತ್ರ ಗೋಸ್ಟ್ ಹಂಟ್ ಮಾಡ್ತಾ ಇರುತ್ತಾಳೆ. ಅಲ್ಲಿ ಸಿಗುವ ಆತ್ಮ ಇಪ್ಪತ್ತು ವರ್ಷಗಳ ಹಿಂದೆ ನಡೆದ ಭಯಾನಕ ಘಟನೆಯ ನಿಗೂಢತೆಯನ್ನು ತೆರೆದುಕೊಳ್ಳುತ್ತದೆ. ಕೊನೆಗೆ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾರೆ ಗೋಸ್ಟ್ ಹಂಟರ್ ಯಾರು ಅದಕ್ಕೆ ಕಾರಣವೇನು ಇವೆಲ್ಲವೂ ಕುತೂಹಲಕಾರಿ ಸನ್ನಿವೇಶಗಳಲ್ಲಿ ಮೂಡಿಬರಲಿದೆ.

ನಾಯಕಿ ಕಾವ್ಯ, ಇವರೊಂದಿಗೆ ಹರ್ಷಿತ್, ದಿವ್ಯ, ಪುಷ್ಪ, ಪ್ರೀತಿ ಮುಂತಾದವರ ನಟನೆ ಇದೆ. ಎರಡು ಹಾಡುಗಳಿಗೆ ನಿತಿನ್‍ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ರಣಧೀರ್‍ನಾಯಕ್, ಸಂಕಲನ ಆಯುರ್‍ಸ್ವಾಮಿ, ಸಂಭಾಷಣೆ ಅಜಯ್‍ವೇದಾಂತಿ, ನಿರ್ವಹಣೆ ದೀಪಕ್‍ಬಾಬು ಅವರದಾಗಿದೆ.

ಜುಲೈ 2ರಿಂದ ಮೈಸೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಿ, ನವೆಂಬರ್‍ದಲ್ಲಿ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin