ವೆಂಕಟ್ ಭಾರದ್ವಜ್ ನಿರ್ದೇಶನದ “ಹೈನಾ” ಚಿತ್ರದ ಆಡಿಯೋ ಹಕ್ಕು ಮಾರಾಟ
ಅಮೃತ ಫಿಲಂ ಸೆಂಟರ್ ಮತ್ತು ಕೆ ಕೆ ಕಂಬೈನ್ಸ್ ಆಡಿಯಲ್ಲಿ ತಯಾರಾಗಿರುವ ಚಿತ್ರ “ಹೈನ”ದ ಆಡಿಯೋ ರೈಟ್ಸ್ ಝೀ ಮ್ಯೂಸಿಕ್ ಪಡೆದುಕೊಂಡಿದೆ ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ಹೇಳಿದ್ಧಾರೆ.
ಚಿತ್ರದಲ್ಲಿ 4 ಹಾಡುಗಳಿದ್ದು ಎಲ್ಲ ವಯಸ್ಸಿನ ಜನರಿಗೆ ಇಷ್ಟವಾಗುವಂಥ ಸಾಹಿತ್ಯ ಸಂಗೀತ ಮತ್ತು ಅದ್ಭುತವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ.ಪ್ರಮುಖವಾಗಿ ಈ ಚಿತ್ರದಲ್ಲಿ ಕನ್ನಡ ರಾಪ್‍ನ “ಹೈನ” ಶೀರ್ಷಿಕೆ ಸಂಗೀತ ಕಾರ್ತಿಕ್ ಗುಬ್ಬಿ ಹಾಡಿದ್ದಾರೆ ಅದೇ ಚಿತ್ರದ ಹೈಲೈಟ್
ಸುಮಾರು 52 ಕ್ಕೂ ಅಧಿಕ ತಾರಾಗಣ ಬಳಗ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದೆ ಭಾರತ – ಬಾಂಗ್ಲಾದೇಶ ಗಡಿಯಲ್ಲಿ ಮತ್ತು ತುಂಬಾ ಅತಿ ಸೂಕ್ಷ್ಮವಾದ ಪ್ರದೇಶಗಳಲ್ಲಿ ಈ ಚಿತ್ರ ತಂಡ ದೃಶ್ಯಗಳನ್ನು ಚಿತ್ರೀಕರಿಸಿದೆ..
“ಹೈನ” ಚಿತ್ರ ನಿಜ ಘಟನೆ ಆಧಾರ ಚಿತ್ರವಾಗಿದ್ದು ಹೈನ ಚಿತ್ರ ಅತಿ ಶೀಘ್ರದಲ್ಲಿ ಬೆಳ್ಳಿ ತೆರೆಮೇಲೆ ಬಿಡುಗಡೆ ಆಗಲಿದೆ, ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿರುವ ಚಿತ್ರಕ್ಕೆ, ಲವ್ ಪ್ರಾನ್ ಮೆಹ್ತಾ ಸಂಗೀತ , ನಿಶಾಂತ್ ನಾಣಿ ಚಿತ್ರಕ್ಕೆ ಛಾಯಾಗ್ರಹಣ., ಲಕ್ಷ್ಮಣ್ ಶಿವಶಂಕರ್ ಸಂಭಾಷಣೆ ಮತ್ತು ಶಮೀಕ್ ಭಾರದ್ವಾಜ್ ರವರ ಸಂಕಲನವಿದೆ
ತಾರಾಗಣದಲ್ಲಿ ಡಾ:ರಾಜ್ ಕಮಲ್, ಹರ್ಷ್ ಅರ್ಜುನ್ ಕಲಾಲ್,ದಿಗಂತ್ ,ಲಕ್ಷ್ಮಣ್ ಶಿವಶಂಕರ್ , ನಿರಂಜನ್ , ವೆಂಕಟ್ ಭಾರದ್ವಾಜ್ , ಶಿಶಿರ್ ಕುಮಾರ್ , ನಂದಕುಮಾರ್ , ಮನೋಹರ್, ಅಭಿಷೇಕ್ ಐಯಂಗಾರ್ , ಲಾರೆನ್ಸ್ಹಾ ಪ್ರೀತಮ್ ಹಾಗು ಇತರರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ