Second birthday celebration for Navarasan's dream baby “MMB Legacy”: Wishes from dignitaries

ನವರಸನ್ ಕನಸಿನ ಕೂಸು “ ಎಂಎಂಬಿ ಲೆಗಸಿಗೆ” ಎರಡನೇ ಹುಟ್ಟುಹಬ್ಬ ಸಂಭ್ರಮ: ಗಣ್ಯರ ಹಾರೈಕೆ - CineNewsKannada.com

ನವರಸನ್ ಕನಸಿನ ಕೂಸು “ ಎಂಎಂಬಿ ಲೆಗಸಿಗೆ” ಎರಡನೇ ಹುಟ್ಟುಹಬ್ಬ ಸಂಭ್ರಮ: ಗಣ್ಯರ ಹಾರೈಕೆ

ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಪ್ರಸ್ತುತ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಚಿತ್ರರಂಗದ ಎಲ್ಲರ ಮನ ಗೆದ್ದಿರುವ ನವರಸನ್, ಕಳೆದ ಎರಡು ವರ್ಷಗಳ ಹಿಂದೆ ಚಿತ್ರಗಳ ಪ್ರಮೋಷನ್‍ಗೆ ಅನುಕೂಲವಾಗುವಂತಹ “ ಎಂಎಂಬಿ ಲೆಗಸಿಗೆ” ಎಂಬ ಸುಸಜ್ಜಿತ ಸಭಾಂಗಣ ಆರಂಭಿಸಿದ್ದಾರೆ.

ಎರಡು ವರ್ಷಗಳಲ್ಲಿ 300ರ ಆಸುಪಾಸಿನ ಸಮಾರಂಭಗಳು ಈ ಸ್ಥಳದಲ್ಲಿ ನಡೆದಿದೆ. ಆ ಎಲ್ಲಾ ಕಾರ್ಯಕ್ರಮಗಳು ಚಿತ್ರದ ಕುರಿತಾದ ಕಾರ್ಯಕ್ರಮಗಳೇ ಆಗಿರುವುದು ವಿಶೇಷ. ಇತ್ತೀಚಿಗೆ “ ಎಂಎಂಬಿ ಲೆಗಸಿಗೆ” ಯ ದ್ವಿತೀಯ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಚಿತ್ರರಂಗದ ಗಣ್ಯರು ಆಗಮಿಸಿ ನವರಸನ್ ಅವರ ಪ್ರಯತ್ನಕ್ಕೆ ಶುಭಹಾರೈಸಿದ್ದಾರೆ.

ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಟರಾದ ಚಂದನ್ ಶೆಟ್ಟಿ, ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಗೋವಿಂದರಾಜು, ಚೇತನ್ ಗೌಡ, ರಾಜೇಶ್, ಜಿ.ಟಿ.ಮಾಲ್‍ನ ಮಾಲೀಕ ಆನಂದ್, “ಜಾಲಿವುಡ್” ಸ್ಟುಡಿಯೋಸ್‍ನ ಬಶೀರ್ ಹಾಗೂ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್, ನಾಗೇಂದ್ರ, ವಿಜಯ್ ಕುಮಾರ್, ಕಲ್ಲೇಶ್ ಮುಂತಾದವರು ಸಮಾರಂಭದಲ್ಲಿ ಭಾಗವಹಸಿ ನವರಸನ್ ಅವರಿಗೆ ಶುಭ ಕೋರಿದರು.

ನಟ,ನಿರ್ಮಾಪಕ, ಸಂಸ್ಥಾಪಕ ನವರಸನ್ ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆ ಚಿತ್ರರಂಗದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಚಲನಚಿತ್ರಗಳ ಕುರಿತಾದ ಸಮಾರಂಭಗಳನ್ನು ನಡೆಸಲು ಸೀಮಿತ ಬಜೆಟ್ ನಲ್ಲಿ ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇದೆ. ಅದು ನಿರ್ಮಾಪಕರಿಗೆ ಅನುಕೂಲವಾಗುವಂತಹದು ಆಗಿರಬೇಕು ಎಂದರು.

ಆ ಕೂಡಲೆ ನಾನು ಈ ವಿಷಯದ ಕುರಿತು ಯೋಚಿಸ ತೊಡಗಿದೆ. ಜಿ.ಟಿ.ಮಾಲ್‍ನ ನಾಲ್ಕನೇ ಅಂತಸ್ತಿನಲ್ಲಿ ವಿಶಾಲವಾದ ಸ್ಥಳವಿತ್ತು. ಇದರ ಮಾಲೀಕರಾದ ಆನಂದ್ ಬಳಿ ಈ ವಿಷಯದ ಬಗ್ಗೆ ಮಾತನಾಡಿದೆ. ಅವರು ಜಾಗ ನೀಡಿದರು. ಕೆಲವೇ ತಿಂಗಳಲ್ಲಿ ಚಲನಚಿತ್ರಗಳ ಟೀಸರ್, ಟ್ರೇಲರ್, ಹಾಡು ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸುವಂತಹ ಸುಸಜ್ಜಿತ “ ಎಂಎಂಬಿ ಲೆಗಸಿಗೆ” ಸಭಾಂಗಣ ಸಿದ್ದವಾಯಿತು ಎಂದರು.

ನಿರ್ಮಾಪಕರಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗದಂತಹ ದರ ನಿಗದಿಪಡಿಸಲಾಯಿತು. ಎರಡು ವರ್ಷಗಳಲ್ಲಿ ಹತ್ತಿರಹತ್ತಿರ 300 ಸಮಾರಂಭಗಳು ಇಲ್ಲಿ ನಡೆದಿದೆ. ಹಾಗಂತ ಇದರಿಂದ ನನಗೆ ಆರ್ಥಿಕವಾಗಿ ತುಂಬಾ ಲಾಭ ಅಂತ ಇಲ್ಲ. ಕೆಲವೊಮ್ಮೆ ನಾನೇ ಕೈಯಿಂದ ಬಾಡಿಗೆ ಕಟ್ಟಿದ್ದು ಇದೆ. ಆದರೆ ಚಿತ್ರರಂಗಕ್ಕೆ ಅದರಲ್ಲೂ ವಿಶೇಷವಾಗಿ ನಿರ್ಮಾಪಕರಿಗಾಗಿ ಈ ಜಾಗವನ್ನು ಆರಂಭಿಸಿದ್ದೇನೆ. ನಿಮ್ಮೆಲ್ಲರ ಪೆÇ್ರೀತ್ಸಾಹ ಸದಾ ಇರಲಿ ಎಂದು ಕೇಳಿಕೊಂಡರು

ಚಿತ್ರರಂಗದ ಇನ್ನೂ ಹೆಚ್ಚಿನ ನಿರ್ಮಾಪಕರು ಈ ಸಭಾಂಗಣದ ಅನುಕೂಲತೆಯನ್ನು ಬಳಸಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಕಲಾವಿದರಿಗೆ, ಚಿತ್ರರಂಗದ ಗಣ್ಯರಿಗೆ, ಪಿ.ಆರ್.ಓ ಗಳಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ವಿಶೇಷವಾಗಿ ಧನ್ಯವಾದ ಹೇಳುವುದಾಗಿ ತಿಳಿಸಿದರು.

“ ಎಂಎಂಬಿ ಲೆಗಸಿಗೆ” ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು ಈ ಸಂಭ್ರಮ ಹಿಂದೆ “ ಎಂಎಂಬಿ ಲೆಗಸಿ”ಯ ಸಿಬ್ಬಂಧಿಯ ಪಾತ್ರವೂ ಹಿರಿದು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin