ಆಗಸ್ಟ್ 7 ಮತ್ತು 8 ರಂದು ಭರತನಾಟ್ಯ ಸ್ಪರ್ಧೆ: ನಟಿ ಭಾವನಾ ರಾಮಣ್ಣ ಆಯೋಜನೆ

ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ, ಸೌಂದರ್ಯ, ಪ್ರತಿಭೆಯಿಂದ ಗಮನ ಸೆಳೆದಿರುವ ಹಿರಿಯ ಭಾವನ ರಾಮಣ್ಣ, ನಟನೆ, ನಿರ್ಮಾಣದ ಜೊತೆಗೆ ಭರತನಾಟ್ಯ ಕಲಾವಿದೆಯೂ ಕೂಡ. ಸಿನಿಮಾದ ನಟನೆ, ರಾಜಕೀಯದ ಜೊತೆಗೆ ಜೊತೆಗೆ ತಮ್ಮ ಮನಸ್ಸಿಗೆ ಆಪ್ತವಾದ ಭರತನಾಟ್ಯವನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಹಿರಿಯ ನಟಿ ಭಾವನಾ ರಾಮಣ್ಣ ಅವರು ಹೂವು ಫೌಂಡೇಶನ್ ಫಾರ್ ಆಟ್ರ್ಸ್ ಸಂಸ್ಥೆಯು ಹಲವಾರು ವರ್ಷಗಳಿಂದ ಕಲೆ ಮತ್ತು ಕಲಾವಿಧರುಗಳ ಏಳಿಗೆ ಮತ್ತು ಪ್ರಗತಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ, ಈಗ 2024ರ ಆಗಸ್ಟ್ ತಿಂಗಳ ಏಳು ಮತ್ತು ಎಂಟನೇ ತಾರೀಖಿನಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ವರ್ಣ ಸ್ಪರ್ಧೆ” ಎಂಬ ಶೀರ್ಷಿಕೆ ಅಡಿಯಲ್ಲಿ ಏರ್ಪಡಿಸಿದ್ದಾರೆ.
ಭರತನಾಟ್ಯದ ಪಠ್ಯದಲ್ಲಿರುವಂತಹ ವರ್ಣ ನೃತ್ಯವನ್ನು ಮಾತ್ರ ಈ ಸ್ಪರ್ಧೆಯಲ್ಲಿ ಅಂಗೀಕರಿಸಲಾಗಿದ್ದು ಮೊದಲನೇ ಬಹುಮಾನ ಒಂದು ಲಕ್ಷ ರೂಪಾಯಿಗಳು ಎರಡನೇ ಬಹುಮಾನ 50,000 ಮೂರನೇ ಬಹುಮಾನ 30,000 ರೂಪಾಯಿಗಳನ್ನು ಬಹುಮಾನವಾಗಿ ವಿಜೇತರು ಪಡೆಯಲಿದ್ದಾರೆ.

ಅರ್ಜಿದಾರರು ನೇರವಾಗಿ ವೆಬ್ಸೈಟ್ ಮೂಲಕ hoovufoundation.com ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಚಾರುಮತಿ – 9 9 0 1 3 05155 ಮತ್ತು ಪ್ರೇಮ್ ಕುಮಾರ್ – 7 4 8 3 4 90143 ಅವರನ್ನು ಸಂಪರ್ಕಿಸಬಹುದಾಗಿದೆ.