"Kadalur Kanmani" release on July 19

ಜುಲೈ, 19 ರಂದು ”ಕಡಲೂರ ಕಣ್ಮಣಿ” ಚಿತ್ರ ಬಿಡುಗಡೆ - CineNewsKannada.com

ಜುಲೈ, 19 ರಂದು ”ಕಡಲೂರ ಕಣ್ಮಣಿ” ಚಿತ್ರ ಬಿಡುಗಡೆ

ರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ವಿಭಿನ್ನ ಪ್ರೇಮಕಥೆಯ “ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್ ಬಿಡುಡಗೆಯಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರ ಇದೇ ತಿಂಗಳ 19ಕ್ಕೆ ತೆರೆಯ ಮೇಲೆ ಬರಲಿದೆ.

ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ಮಾತನಾಡಿ,”ಕಡಲೂರ ಕಣ್ಮಣಿ” ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು. ಕಡಲಿನಲ್ಲಿ ಮುತ್ತು ಸಿಗುವುದು ಎಲ್ಲರಿಗೂ ತಿಳಿದ ಸಂಗತಿ ನನಗೂ ಸಹ ಈ ಈ ಚಿತ್ರದಲ್ಲಿ ಮೂರು ಮುತ್ತುಗಳು ಸಿಕ್ಕಿದೆ. ಅದು ನಮ್ಮ ಚಿತ್ರದ ನಾಯಕ, ನಾಯಕಿ ಹಾಗೂ ನಿರ್ಮಾಪಕರು. ಇವರ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು

ಚಿತ್ರ ಜುಲೈ 19 ರಂದು ತೆರೆಗೆ ಬರಲಿದೆ. ಇದೇ ತಂಡದೊಂದಿಗೆ “ಕಡಲೂರ ಕಣ್ಮಣಿ” ಎರಡನೇ ಭಾಗದಲ್ಲಿ ತರುವ ಸಿದ್ದತೆ ನಡೆಯುತ್ತಿದೆ ಎಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ರಾಮ್ ಪ್ರಸನ್ನ ಹುಣಸೂರು ತಿಳಿಸಿದರು.

ನಾಯಕ ಅರ್ಜುನ್ ನಗರಕರ್ ಮಾತನಾಡಿ, “ವರ್ಣಪಟಲ” ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ನನಗೆ ನಾಯಕನಾಗಿ ಇದು ಮೊದಲ ಚಿತ್ರ. ಅವಕಾಶ ನೀಡಿದ ನಿರ್ದೇಶಕ ಹಾಗು ನಿರ್ಮಾಪಕರಿಗೆ ಧನ್ಯವಾದ ಎಂದರು

ನಿರ್ಮಾಪಕರಾದ ಕೊಳ ಶೈಲೇಶ್ ಆರ್ ಪೂಜಾರಿ, ಬಸವರಾಜ್ ಗಚ್ಚಿ ಮಾತನಾಡಿ ನಾವು ಬ್ಯಾಂಕ್ ಉದ್ಯೋಗಿಗಳು. ಜೊತೆಗೆ ಆಪ್ತಮಿತ್ರರು. ರಾಮ್ ಪ್ರಸನ್ನ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ಎಲ್ಲರು ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ತಿಳಿಸಿದರು.

ಸಹ ನಿರ್ಮಾಪಕ ಮಹೇಶ್ ಕುಮಾರ್ ಎಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದ ಆಕ್ಷನ್ ಸನ್ನಿವೇಶಗಳ ಬಗ್ಗೆ ಚಂದ್ರು ಬಂಡೆ ಮಾಹಿತಿ ನೀಡಿದರು. ಚಿತ್ರವನ್ನು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಡಿಎಸ್‍ಕೆ ಸಿನಿಮಾಸ್ ಸಂಸ್ಥೆಯ ಆಡಿ ಸುನೀಲ್ ಕುಂಬಾರ್ ತಿಳಿಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin