“ಅಪಾಯವಿದೆ ಎಚ್ಚರಿಕೆ” ಚಿತ್ರದ “ಬ್ಯಾಚುಲರ್ಸ್ ಬದುಕು” ಹಾಡು ಬಿಡುಗಡೆ
ಕಿರುತೆರೆಯಲ್ಲಿ ಮೂಡಿ ಬರುತ್ತಿರುವ “ಅಣ್ಣಯ್ಯ” ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮನ ತಲುಪಿರುವ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸುತ್ತಿರುವ “ಅಪಾಯವಿದೆ ಎಚ್ಚರಿಕೆ” ಚಿತ್ರದ “ಬ್ಯಾಚುಲರ್ಸ್ ಬದುಕು” ಹಾಡು ಬಿಡುಗಡೆ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.

ಕನ್ನಡ ಚಿತ್ರರಂಗದ ಬ್ಯಾಚುಲರ್ ನಾಯಕ ನಟರಾದ ತಿಲಕ್, ರಾಕೇಶ್ ಅಡಿಗ, ನವೀನ್ ಶಂಕರ್ ಹಾಗೂ ವಿಕ್ಕಿ ವರುಣ್, ಚಿತ್ರದ ನಿರ್ದೇಶಕರೂ ಆಗಿರುವ ಅಭಿಜಿತ್ ತೀರ್ಥಹಳ್ಳಿ ಬರೆದಿರುವ “ಬ್ಯಾಚುಲರ್ಸ್ ಬದುಕು” ಹಾಡನ್ನು ಲೋಕಾರ್ಪಣೆ ಮಾಡಿ ಬ್ಯಾಚುಲರ್ ಜೀವನದ ಅನುಭವ ಹಂಚಿಕೊಂಡರು
ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಮಾತನಾಡಿ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿವೆ. ನಾನು ಕೂಡ ಊರಿನಿಂದ ಬೆಂಗಳೂರಿಗೆ ಬಂದು ಬ್ಯಾಚುಲರ್ ಜೀವನ ಕಳೆದವನು. ಆ ಅನುಭವಗಳೇ ಈ ಹಾಡು ಬರೆಯಲು ಸ್ಪೂರ್ತಿ ಎಂದರು

ನಾಯಕ ವಿಕಾಶ್ ಉತ್ತಯ್ಯ ಮಾತನಾಡಿ ಹೊಸತಂಡಕ್ಕೆ ಬೆಂಬಲ ನೀಡಲು ಬಂದಿರುವ ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಧನ್ಯವಾದ ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಇದೊಂದು ಹಾರಾರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಂದುಕೊಂಡರು. ಈಗ ಈ ಹಾಡನ್ನು ನೋಡಿದಾಗ ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ ಅನಿಸಬಹುದು.ಎಲ್ಲಾ ಜಾನರ್‍ಗಳನ್ನು ಒಳಗೊಂಡ ಪರಿಶುದ್ಧ ಕೌಟುಂಬಿಕ ಚಿತ್ರ ಎಂದು ಹೇಳಿದರು
ನಿರ್ಮಾಪಕ ಮಂಜುನಾಥ್ ಮಾತನಾಡಿ ಹೊಸತಂಡಕ್ಕೆ ಬೆಂಬಲ ನೀಡಲು ಬಂದಿರುವ ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದರಿಗೆ ಧನ್ಯವಾದ. ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಒಂದೊಳ್ಳೆ ಚಿತ್ರ ಮಾಡಿದ್ದಾರೆ. ಗೆಲ್ಲುವ ಭರವಸೆ ಇದೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು

ಸಂಗೀತ ನಿರ್ದೇಶಕ ಹಾಗೂ ಛಾಯಾಗ್ರಾಹಕ ಸುನಾದ್ ಗೌತಮ್, ನಾಯಕಿ ರಾಧಾ ಭಗವತಿ, ನಟ ಮಿಥುನ್ ತೀರ್ಥಹಳ್ಳಿ, ದೇವ್ ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

