ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು ಸ್ಯಾಂಡಲ್‍ವುಡ್‍ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವಪ್ರೇಮದ ಊರಲಿ’ ಚಿತ್ರದ ಟೈಟಲ್ ಟ್ರ್ಯಾಕ್ ಗಮನ ಸೆಳೆದ ಬೆನ್ನಲ್ಲೇ “ಬಾನಲಿ ಜಾರಿದ…” ಹಾಡು ಬಿಡುಗಡೆಯಾಗಿ ಗಮನ ಸೆಳೆದಿದೆ.

ಸುಮಧುರ ಪ್ರಣಯ ಯುಗಳ ಗೀತೆಯಲ್ಲಿ ನಾಯಕ ಶ್ರೀರಾಮ್ (ಸಂತೋಷ್) ಹಾಗೂ ನಟಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಜೋಡಿಯಾಗಿ ಕಣ್ಮನ ಸೆಳೆದಿದ್ದು, ತಪಸ್ವಿನಿ ಮುದ್ದಾದ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪ್ರೀತಿಯಲ್ಲಿ ಬೀಳುವ ಸುಂದರ ಭಾವನೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ಸುನಾದ ಗೌತಮ್ ಸಂಗೀತ ನಿರ್ದೇಶನದಲ್ಲಿ ನಿನಾದ ನಾಯಕ್ ಮತ್ತು ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ.
ಚಿತ್ರದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಸಾಥ್ ನೀಡಿದ್ದಾರೆ. ಹಿರಿಯ ನಟ ರಂಗಾಯಣ ರಘು ನಾಯಕನ ತಂದೆಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಮತಾ ದೇವೇಂದ್ರ ಎಂ, ಪ್ರಶಾಂತ ಡಿ.ಎಸ್ ಮತ್ತು ರಮೇಶ ಎನ್ ಚಿತ್ರ ನಿರ್ಮಿಸಿದ್ದು, ರಾಜಕಾಂತ್ ಎಸ್.ಕೆ ಛಾಯಾಗ್ರಹಣ ಮತ್ತು ಹರ್ಷಿತ್ ಪ್ರಭು ಸಂಕಲನವಿರುವ ಸಿನಿಮಾ ಸದ್ಯದಲ್ಲೇ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.









