“ಎಕ್ಕ” ಚಿತ್ರದ ‘ಬ್ಯಾಂಗಲ್ ಬಂಗಾರಿ’ಗೆ ಭರ್ಜರಿ ರೆಸ್ಪಾನ್ಸ್ : 10 ಮಿಲಿಯನ್ ವೀವ್ಸ್ ದಾಖಲೆ

ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ನಾಯಕಿ ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗಾರಿ ಆಗಿದ್ದಾರೆ. ಯವರಾಜ್ ಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದೆ. ಸಂಭ್ರಮಾಚರಣೆಯ ಕ್ಷಣದ ಈ ಗೀತೆಗೆ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್‍ಗಳನ್ನೆ ಕಂಪೋಸ್ ಮಾಡಿದ್ದಾರೆ.

ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‍ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ. ಇವರಲ್ಲದೆ ಈ ಚಿತ್ರದಲ್ಲಿ ಸಂಜನಾ ಆನಂದ್ , ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ 18 ರಂದು ಎಕ್ಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ.

Related Posts

Shankarabharana Movie Review : ಖಾಸಗೀ ಬಸ್ ಮತ್ತು ಅದರ ಸುತ್ತ ಸಾಗುವ ಕುತೂಹಲಕಾರಿ ಕಥನ ‘ಶಂಕರಾಭರಣ’

ಚಿತ್ರ : ಶಂಕರಾಭರಣನಿರ್ದೇಶನ : ಸುಮಂತ್ ಭಟ್ಅವಧಿ : 152 ನಿಮಿಷತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ಕೃತಿ ಶೆಟ್ಟಿ, ತನ್ವಿ ರಾವ್, ಸಂಪತ್ ರಾಜ್, ಅನೀಲ್ ಕುಮಾರ್ ಚೌಹ್ಹಾಣ್, ಅರ್ಜುನ್ ಕಜೆ, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಮತ್ತಿತರರುರೇಟಿಂಗ್…

ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಆರಂಭ

ಸದಭಿರುಚಿಯ ಹಾಗೂ ಮನಮುಟ್ಟುವ ಚಿತ್ರಗಳ ನಿರ್ದೇಶಕರೆಂದೇ ಖ್ಯಾತರಾಗಿರುವ ಕಲಾಸಾಮ್ರಾಟ್ ಡಾ.ಎಸ್. ನಾರಾಯಣ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಲತಾ ಜಯಪ್ರಕಾಶ್ ಆರಂಭ ಫಲಕ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581