Bangal Bhangari" song released from "Ekka": Yuva Rajkumar steps in with Sanjana Anand

” ಎಕ್ಕ ” ಚಿತ್ರದ “ಬ್ಯಾಂಗಲ್‌ ಬಂಗಾರಿ” ಹಾಡು ಬಿಡುಗಡೆ : ಸಂಜನಾ ಆನಂದ್ ಜೊತೆ ಹೆಜ್ಜೆ ಹಾಕಿದ ಯುವ ರಾಜ್‌ಕುಮಾರ್ - CineNewsKannada.com

” ಎಕ್ಕ ” ಚಿತ್ರದ “ಬ್ಯಾಂಗಲ್‌ ಬಂಗಾರಿ” ಹಾಡು ಬಿಡುಗಡೆ : ಸಂಜನಾ ಆನಂದ್ ಜೊತೆ ಹೆಜ್ಜೆ ಹಾಕಿದ ಯುವ ರಾಜ್‌ಕುಮಾರ್

ಯುವ‌ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ “ಎಕ್ಕ” ಸಿನಿಮಾದಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಟೈಟಲ್‌ ಟ್ರ್ಯಾಕ್‌ ಹಾಗೂ ಟೀಸರ್‌ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರತಂಡ “ಬ್ಯಾಂಗಲ್‌ ಬಂಗಾರಿ ” ಹಾಡನ್ನು ಅನಾವರಣ ಮಾಡಿದ್ದು ಕುತೂಹಲ ಕೆರಳಿಸಿದೆ

ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬ್ಯಾಂಗಲ್‌ ಬಂಗಾರಿ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಾಯಕ ಯುವರಾಜ್‌ ಕುಮಾರ್‌ ಹಾಗೂ ನಾಯಕಿ ಸಂಜನಾ ಆನಂದ್‌ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ಇಷ್ಟದ ಹುಡಗಿಯನ್ನು ಬ್ಯಾಂಗಲ್‌ ಬಂಗಾರಿ ಅಂತಾ ಕರೆಯುತ್ತಾ ನಾಯಕ ಕುಣಿದು ಕುಪ್ಪಳಿಸಿರುವ ಮೆಲೋಡಿ ಹಾಡು ಇದಾಗಿದೆ. ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ, ಚರಣ್ ರಾಜ್ ಸಂಗೀತ ನೀಡಿದ್ದು, ಅಂತೋನಿ ದಾಸನ್ ‘ಬ್ಯಾಂಗಲ್ ಬಂಗಾರಿ’ಗೆ ಕಂಠ ಕುಣಿಸಿದ್ದಾರೆ.

ಎಕ್ಕ’ ಸಿನಿಮಾಗೆ ನಿರ್ದೇಶಕ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದು ನಾಡಿನ‌ ಮೂರು ಖ್ಯಾತ ನಿರ್ಮಾಣ ಸಂಸ್ಥೆಗಳಾದ ಪಿಆರ್ ಕೆ, ಜಯಣ್ಣ ಫಿಲ್ಸ್ಙ್ ಹಾಗೂ ಕೆ ಆರ್‌ ಜಿ ಸ್ಟುಡಿಯೋ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗುತ್ತದೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ.

ನಾಯಕ ಯುವರಾಜ್‌ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ಭಾರೀ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ಜುಲೈ 18ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin