ನವಂಬರ್ 17ಕ್ಕೆ ಬೆಂಬಿಡದ ನಾವಿಕ ಚಿತ್ರ ತೆರೆಗೆ : ಇನ್‍ಫ್ಲುಯೆನ್ಸರ್ ಹುಡುಗನ ಬದುಕು ಬವಣೆ
ಹೊಸ ಯುವ ಪ್ರತಿಭೆಗಳು ಸೇರಿಕೊಂಡು ನಿರ್ಮಿಸಿರುವ ‘ಬೆಂಬಿಡದ ನಾವಿಕ’ ಚಿತ್ರವನ್ನು ಸಿದ್ದಗೊಳಿಸಿದ್ದಾರೆ. ಶ್ರೀ ಅಂಬಲವಾಡಿ ಮಹಾಕಾಳಿ ಕಂಬೈನ್ಸ್ ಅಡಿಯಲ್ಲಿ ಜಿ.ಮಹೇಶ್ ಬಂಡವಾಳ ಹೂಡಿದ್ದಾರೆ.
ಸದ್ದು ಮಾಡದೆ ಪೂರ್ಣ ಕೆಲಸಗಳನ್ನು ಮುಗಿಸಿರುವ ತಂಡವು ಸುದ್ದಿ ಮಾಡುವ ಸಲುವಾಗಿ ಎರಡು ಹಾಡುಗಳು ಮತ್ತು ಯೋಗರಾಜಭಟ್ ಹಿನ್ನಲೆ ಧ್ವನಿ ನೀಡಿರುವ ಟೀಸರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರ್‍ದಲ್ಲಿ ನಡೆಯಿತು.
ಅದರಲ್ಲೂ ಕಥೆಯು ಇನ್‍ಫ್ಲುಯೆನ್ಸರ್ ಕುರಿತಾಗಿ ಇರುವುದರಿಂದ ಮಾದ್ಯಮ ಮಿತ್ರರು ‘ಪ್ರತಿ ಹೆಜ್ಜೆಗೂ’ ಗೀತೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಚಿತ್ರ ಇದೇ ತಿಂಗಳ 17 ರಂದು ತೆರೆಗೆ ಬರಲಿದೆ.
ನಾಯಕ, ನಿರ್ದೇಶಕ ಶ್ರೀಯಾನ್ ಮಾತನಾಡಿ ಮಂಗಳೂರು ಉಡುಪಿ ನಡುವೆ ನಡೆಯುವ ಥ್ರಿಲ್ಲರ್ ಡ್ರಾಮಾ ಸನ್ನವೇಶಗಳನ್ನು ಒಳಗೊಂಡಿದೆ. ಮಹತ್ವಕಾಂಕ್ಷಿಯುಳ್ಳ ಇನ್‍ಫ್ಲುಯೆನ್ಸರ್ ಯುವಕನಿಗೆ ಇಂಟರ್‍ನೆಟ್ ಮೂಲಕ ಬರುವ ಕಷ್ಟಗಳು ಮತ್ತೆ ಅದರಿಂದ ಹೇಗೆ ಆತನ ಜೀವನ ಬದಲಾಗುತ್ತದೆ. ಎಲ್ಲರಿಗೂ ಗುರಿ ಇರುವಂತೆ ಈತನಿಗೂ ಒಂದಷ್ಟು ಛಾಲೆಂಜಸ್ ಇರುತ್ತದೆ. ಪ್ರತಿ ಕ್ಷಣ ತುಂಬ ಮುಖ್ಯವಾಗಿರುತ್ತದೆ. ಅದು ನಮ್ಮನ್ನು ಯಾವ ರೀತಿಯಾದರೂ ಬದಲಾಯಿಸಬಹುದು ಎಂದು ಹೇಳಿದರು
ನಾಗತ್ತಿಹಳ್ಳಿ ಚಂದ್ರಶೇಖರ್ ಒಡೆತನದ ‘ಟೆಂಟ್‍ಹೌಸ್’ದಲ್ಲಿ ತರಭೇತಿ ಪಡೆದುಕೊಂಡಿರುವ ಶ್ರೀಯಾನ್ ನಾಯಕ ಮತ್ತು ರಚಿಸಿ ನಿರ್ದೇಶನ ಮಾಡಿದ್ದಾರೆ. ಪ್ರಿಯದರ್ಶಿನಿ, ಐಶ್ವರ್ಯ ನಾಯಕಿಯರು.
ಉಳಿದಂತೆ ದಿನೇಶ್‍ಮಂಗಳೂರು, ಬಲರಾಜವಾಡಿ, ವಿಕ್ರಂ, ರಜತ್ ಮುಂತಾದವರು ನಟಿಸಿದ್ದಾರೆ. ಸಂಗೀತ ಮುನ್ನಮೈಸೂರು, ಛಾಯಾಗ್ರಹಣ ಸತೀಶ್‍ರಾಜೇಂದ್ರನ್, ಸಂಕಲನ ಸುನಿಲ್ ಅವರದಾಗಿದೆ. ಮಂಗಳೂರು, ಉಡುಪಿ, ಕಾಪು, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.