ಬಂಜಾರ ಸಮುದಾಯದ ಸಂಸ್ಕೃತಿ ಬಿಂಬಿಸುವ ಚಿತ್ರ ” ಭಾಯ್” ನವಂಬರ್ 17 ಕ್ಕೆ ತೆರೆಗೆ

ಯುವ, ಪ್ರತಿಭಾನ್ವಿತರ ತಂಡ ಸೇರಿಕೊಂಡು ಸದ್ದು ಗದ್ದಲವಿಲ್ಲದೆ ” ಭಾಯ್ ” ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ತರಲು ಸಜ್ಜಾಗಿದ್ದಾರೆ.
ಮಾಜಿ ಪ್ರಧಾನಿಗಳ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಬರೆದಿರುವ ಕಥೆಗೆ ಅವರ ಪತ್ನಿ ಮಾಲಾಶ್ರೀ ಸುರೇಶ್ ಬಂಡವಾಳ ಹಾಕಿದ್ದು ನಾಯಕ ಮತ್ತು ನಿರ್ದೇಶಕನಾಗಿ ಯುವ ಪ್ರತಿಭೆ ಯುವ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೈಲರ್ ಮತ್ತು ಹಾಡಿನ ಬಿಡುಗಡೆಯ ವೇಳೆ ಮಾತಿಗಿಳಿದ ನಿರ್ದೇಶಕ,ಕಮ್ ನಾಯಕ ಯುವ, ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದೆ.ಇದು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಚಿತ್ರ. ಬಂಜಾರ ಸಮುದಾಯದ ಸಂಸ್ಕೃತಿಯನ್ನು ಚಿತ್ರದಲ್ಲಿ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಚಿತ್ರದಲ್ಲಿ ಮಾಸ್ ಫ್ಯಾಮಿಲಿ, ಆಕ್ಷನ್ ಎಂಟಟೈನ್ ಮೆಂಟ್ ಎಲ್ಲವೂ ಇದೆ ಎಂದರು.

ಭಾಯ್ ಎಂದರೆ ಸಹೋದರ ಎಂದು ಕರೆಯಬಹುದು.ಒಳ್ಳೆಯ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದೇವೆ. 7 ವರ್ಷದ ಕನಸು , ಎಲ್ಲರೂ ಏನೇನು ಮಾಡ್ತಾರೆ ನೀವೇಕೆ ನಾಯಕ ಆಗಬಾರದು ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹೇಳಿದ್ದರು ಅವರು ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು ನಾಯಕನಾಗಿದ್ದೇನೆ ಎಂದು ಹೇಳಿದರು

ಕಥೆಗಾರ ಸುರೇಶ್ ಮಾತನಾಡಿ, ಬಂಜಾರ ಸಮುದಾಯದ ಕಥೆ, ಮತ್ತು ಸಂಸ್ಕೃತಿಯನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಒಳ್ಳೆಯ ಕಥೆ ಇದೆ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.
ಇದೇ ತಿಂಗಳ 17ರಂದು ಕನ್ನಡದಲ್ಲಿ ಬಿಡುಗಡೆ ಮಾಡಿ ಆ ನಂತರ ತೆಲುಗು ಸೇರಿದಂತೆ ಬಂಜಾರ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಹೇಳಿಕೊಂಡರು
ನಾಯಕಿ ಪೂಜಾ ಬಸವರಾಜ್ ಮಾತನಾಡಿ ವಿದೇಶಿ ಹುಡುಗಿಯ ಪಾತ್ರ ನನ್ನದು. ಬಂಜಾರ ಕಲೆ ಮತ್ತು ಸಂಸ್ಕøತಿ ಅಧ್ಯಯನಕ್ಕೆ ಬಂದಿರುತ್ತೇನೆ, ಮುಂದೆ ಏನೆಲ್ಲಾ ಆಗಲಿದೆ ಚಿತ್ರದಲ್ಲಿ ನೋಡಿ ಎಂದರು
ಮತ್ತೊಬ್ಬ ನಾಯಕ ನಿತಿನ್ ರಾಜ್ ಮಾತನಾಡಿ ಬಂಜಾರ ಸಮುದಾಯದ ಸಂಸ್ಕøತಿಯ ಜೊತೆ ಜೊತೆಗೆ ¸ ಅಣ್ಣ ತಂಗಿ ,ತಾಯಿ, ತಂಗಿ ಫ್ಯಾಮಿಲಿ ಹಿನ್ನೆಲೆಯನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ಎಂದರು

ಹಿರಿಯ ಕಲಾವಿದ ವಸಂತ್ ಮಾತನಾಡಿ ಭಾಯ್ ಸಿನಿಮಾ ಇಷ್ಡಪಟ್ಟು ಕಷ್ಟ ಮಾಡಿದ ಸಿನಿಮಾ. ಹೂವಿನ ಹಡಗಲಿಯಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿನ ಬಂಜಾರ ಸಮುದಾಯ ತಮ್ಮ ಮನೆಯವರಂತೆ ನಮ್ಮನ್ನು ನೋಡಿಕೊಂಡರು ಎಂದರು
ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಚಲವರಾಜು, ಹೊಸ ತಂಡ ಹೊಸ ಕನಸು ಕಟ್ಟಿಕೊಂಡು ಸಿನಿಮಾ ಮಾಡಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದರು.