ಯುವ ನಟ ಮಿಲಿಂದ್ ಗೌತಮ್ ಹುಟ್ಟುಹಬ್ಬಕ್ಕೆ ಆನ್‍ಲಾಕ್ ರಾಘವ ಚಿತ್ರದ ಹಾಡು ಬಿಡುಗಡೆ
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ಪ್ರತಿಭೆ ಮಿಲಿಂದ್ ಗೌತಮ್ ಆಗಮನವಾಗಿದೆ. ಅವರು ನಾಯಕನಾಗಿ ಕಾಣಿಸಿಕೊಂಡಿರುವ “ ಅನ್‍ಲಾಕ್ ರಾಘವ” ಚಿತ್ರದ ನನ್ ಹುಡುಗಿ ಹಾಡು ಮಿಲಿಂದ್, ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ನಿರ್ಮಾಪಕ ಡಿ ಮಂಜುನಾಥ್ ಪುತ್ರ ಮಿಲಿಂದ್ ಗೌತಮ್‍ಗಾಗಿ ನಿರ್ಮಾಣ ಮಾಡಿರುವ ಚಿತ್ರ ಇದು. ಅವರೊಂದಿಗೆ ನಿರ್ಮಾಣದಲ್ಲಿ ಗಿರೀಶ್ ಕೈಜೋಡಿಸಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಗಳಿವೆ
ಹಿರಿಯ ನಿರ್ದೇಶಕ ಸುನೀಲ್‍ಕುಮಾರ್ ದೇಸಾಯಿ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿ, ಪ್ರತಿಭಾನ್ವಿತ ನಟ ಮಿಲಿಂದ್ ಗೌತಮ್‍ಗೆ ಒಳ್ಳೆಯದಾಗಲಿ ಎಂದು ಹರಸಿದರು.
ಹಾಡು ಬಿಡುಗಡೆ ನಂತರ ಮಾತಿಗಿಳಿದ ನಿರ್ಮಾಪಕ ಮಂಜುನಾಥ್, ಇದೊಂದು ಕನಸು, ಮೊದಲು ಈ ಹಾಡು ಇರಲಿಲ್ಲ. ನಿರ್ದೇಶಕರು ಇಂಗ್ಲೀಷ್ ಹಾಡು ತೋರಿಸಿ ಹಾಡು ಮಾಡೋಣವಾ ಎಂದು ಕೇಳಿದರು ಒಕೆ ಅಂದೆ. ಹಾಡು ಚೆನ್ನಾಗಿ ಮೂಡಿ ಬಂದಿದೆ. ಇದೊಂದು ಆಕ್ಷನ್, ರೋಮಾಂಟಿಕ್ ಕಾಮಿಡಿ ಸೇರಿದಂತೆ ಹಲವು ಅಂಶಗಳಿವೆ ಚಿತ್ರದಲ್ಲಿವೆ. ಬಿಡುಗಡೆಗೆ ಸಜ್ಜಾಗಿದೆ ಎಲ್ಲರ ಸಹಕಾರ ಅಗತ್ಯ ಎಂದು ಕೇಳಿಕೊಂಡರು
ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ ನನ್ನ ಹುಟ್ಟುಹಬ್ಬದ ದಿನ ಹಾಡಿನ ಚಿತ್ರೀಕರಣವಾಗಿತ್ತು. ನಟ ಮಿಲಿಂದ್ ಹುಟ್ಟುಹಬ್ಬಕ್ಕೆ ಹಾಡು ಬಿಡುಗಡೆಯಾಗಿದೆ. ಮುಂದಿನ ವರ್ಷದ ಹುಟ್ಡುಹಬ್ಬಕ್ಕೆ ಕಮರ್ಷಿಯಲ್ ಚಿತ್ರ ತೆರೆಗೆ ಬರಲಿ ಎಂದು ಹಾರೈಸಿದರು.
ಚಿತ್ರದುರ್ಗದಲ್ಲಿ ಹಾಡು ಚಿತ್ರೀಕರಣ ಮಾಡಲಾಗಿದ್ದು ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಬರಲಿದೆ.ಕ್ಲೈಮ್ಯಾಕ್ಸ್‍ಗೆ ಲೀಡ್ ಕೊಡಲಿದೆ.ಛಾಯಾಗ್ರಾಹಕ ಲವಿತ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮಹಿಳೆ ಆಗಿದ್ದರೆ ಮದುವೆ ಆಗಿ ಬಿಡುತ್ತಿದ್ದೆ. ಹೆಂಡತಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು
ನಟ ಮಿಲಿಂದ್ ಗೌತಮ್, ಹುಟ್ಟಹಬ್ಬಕ್ಕೆ ಹಾಡು ಬಿಡುಗಡೆಯಾಗಿದೆ. ಸಾಯಿ ವಿಘ್ನೇಶ್ ಹಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾಡಿದ್ದೇವೆ. ಬೇರೆ ಕಡೆ ಮಾಡಿದ್ದೇವಾ ಅನ್ನಿಸಿತು. ಮುರುಳಿ ಮಾಸ್ಟರ್ ನೃತ್ಯ ಸಂಯೊಜನೆ ಚೆನ್ನಾಗಿದೆ ಎಂದು ಹೇಳಿಕೊಂಡರು
ನಟಿ ರೆಚೆಲ್ ಡೇವಿಡ್ , ಬ್ಯಾಕಾಂಕ್ ಹೋಗೋಣ ಅಂತ ಹೇಳಿ ಆನಂತರ ಟೆಕ್ಸಾಸ್ ಅಂತ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದು ಚಿತ್ರೀಕಣ ಮಾಡಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ನೃತ್ಯ ನಿರ್ದೇಶಕ ಮುರಳಿ, ಛಾಯಾಗ್ರಾಹಕ ಲವಿತ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು