'Bheema' Bala' Vijay Kumar support for Love Reddy film

ಲವ್ ರೆಡ್ಡಿ ಚಿತ್ರಕ್ಕೆ ‘ಭೀಮ” ಬಲ “ ವಿಜಯ್ ಕುಮಾರ್ ಬೆಂಬಲ - CineNewsKannada.com

ಲವ್ ರೆಡ್ಡಿ ಚಿತ್ರಕ್ಕೆ ‘ಭೀಮ” ಬಲ “ ವಿಜಯ್ ಕುಮಾರ್ ಬೆಂಬಲ

ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಚಿತ್ರಕ್ಕೆ ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಅವರ “ಭೀಮ” ಬಲ ಸಿಕ್ಕಿದೆ. ಹೈದರಾಬಾದ್‍ನ ಸ್ಮರಣ್ ರೆಡ್ಡಿ ಲವ್ ರೆಡ್ಡಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ಅಂಜನ್ ಕುಟುಂಬದವರೇ ಬಂಡವಾಳ ಹೂಡಿದ್ದಾರೆ. ನಟಿಯಾಗಿ ಶ್ರಾವಣಿ ಅಭಿನಯಿಸಿದ್ದಾರೆ

ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಸಿನಿಮಾ ನೋಡಿ, ಕಂಟೆಂಟ್ ಇಷ್ಟವಾಗಿ ಲವ್ ರೆಡ್ಡಿ ಸಿನಿಮಾವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡ್ತಿದ್ದಾರೆ. ಜೊತೆಗೆ ಹೊಂಬಾಳೆ ಸಂಸ್ಥೆ ಕನ್ನಡದ ಡಿಸ್ಟ್ರೀಬ್ಯೂಷನ್ ಜವಾಬ್ದಾರಿ ಹೊತ್ತಿದೆ.

ಲವ್ ರೆಡ್ಡಿ ತೆಲುಗು ಸಿನಿಮಾ ಇದಾಗಿದ್ದು, ಇದೀಗ ಕನ್ನಡದಲ್ಲಿ ಡಬ್ ಆಗಿ, ಪ್ರತಿ ಹಾಡುಗಳು, ಡೈಲಾಗ್ಸ್ ಎಲ್ಲವೂ ಕನ್ನಡದಲ್ಲೆ ಮೂಡಿಬಂದಿದೆ. ಮೂಲತಃ ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. ಲವ್ ರೆಡ್ಡಿ ಕನ್ನಡ ವರ್ಷನ್‍ನ ಟ್ರೈಲರ್ ಸ್ಯಾಂಡಲ್ ವುಡ್ ಸಲಗ ನಟ ವಿಜಯ್ ಕುಮಾರ್ ರಿಲೀಸ್ ಮಾಡುವುದರ ಮೂಲಕ ಹೊಸಬರಿಗೆ, ಹೊಸತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ನಟ ವಿಜಯ್ ಕುಮಾರ್ ಮಾತನಾಡಿ, ಲವ್ ರೆಡ್ಡಿ ಸಿನಿಮಾ ನೋಡಿ ನಾಲ್ಕು ದಿನ ಆಯ್ತು. ಪ್ರತೀ ಪಾತ್ರಗಳು ಈಗಲೂ ನನಗೆ ಕಾಡ್ತಿದೆ. ಅಷ್ಟರ ಮಟ್ಟಿಗೆ ಲವ್ ರೆಡ್ಡಿ ಸಿನಿಮಾ ಮೂಡಿ ಬಂದಿದೆ. ಸ್ವಲ್ಪ ಕೆಲಸಗಳಿಗೆ ದುಬೈಗೆ ಹೋಗ್ತಾ ಇದ್ದೀನಿ, ಸಾಧ್ಯ ಆದಷ್ಟು ಅಲ್ಲಿನವರನ್ನು ಭೇಟಿಯಾಗಿ ದುಬೈನಲ್ಲಿ ಲವ್ ರೆಡ್ಡಿ ರಿಲೀಸ್ ಮಾಡುವ ಯೋಚನೆ ಮಾಡ್ತೀದ್ದೀನಿಉ, ಪ್ರತಿ ಪಾತ್ರದಾರಿಗಳನ್ನು ವೇದಿಕೆಗೆ ಬರಮಾಡಿಕೊಂಡು, ನೋಡ್ರಪ್ಪಾ ಸಿನಿಮಾ ಚೆನಾಗಿಲ್ಲ ಅಂದ್ರೆ ಹಠ ಮಾಡ್ಬೇಡಿ, ನಮ್ಮ ಸಿನಿಮಾ ಚೆನ್ನಾಗಿದೆ ಅಂತ, ಸಿನಿಮಾ ಚೆನ್ನಾಗಿದ್ದಾಗ ಹಿಗ್ಗೋದು ಬೇಡ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ ಎಂದು ಕಿವಿ ಮಾತೇಳುತ್ತಾ. ನಿಮ್ಮ ಜೊತೆ ನಾನು ಯಾವಾಗಲೂ ಇರ್ತೀನಿ ಭರವಸೆ ನೀಡಿದರು.

ನಿರ್ಮಾಪಕರು ಮಾತನಾಡಿ ಸಿನಿಮಾದ ಬ್ಯಾಗ್ರೌಂಡ್ ಇಲ್ಲ ನಟ ಅಂಜನ್ ರಾಮಚಂದ್ರ ಕುಟುಂಬದವರು, ಹೊಸಬರು ಸಿನಿಮಾ ಮಾಡ್ತಾರೆ ಅಂದ್ರೆ ಯಾರು ಬಂಡವಾಳ ಹಾಕೋಕೆ ಮುಂದೆ ಬರಲ್ಲ, ಹಾಗಾಗಿ ನಾವೆಲ್ಲರೂ ಸೇರಿ ಫಂಡ್ ಮಾಡಿ ಈ ಸಿನಿಮಾಗೆ ಬಂಡವಾಳ ಹೂಡಿದ್ದೀವಿ. ಒಳ್ಳೆ ಕಂಟೆಂಟ್‍ಗೆ ಸೋಲಿಲ್ಲ, ತೆಲುಗಿನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗ ಕನ್ನಡದಲ್ಲೂ ಬರ್ತಿದ್ದೀವಿ ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ. ಸಿನಿಮಾದ ಕಂಟೆಂಟ್ ಗೆ ಮನಸ್ಸೋತ ಪ್ರಭಾಸ್ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕನ್ನಡದಲ್ಲಿ ನಮ್ಮ ಸಲಗ ನಮ್ಮ ಬೆನ್ನಿಗೆ ನಿಂತಿದ್ದಾರೆ. ವಿಜಯ್ ಕುಮಾರ್‍ಗೆ ನಾವು ಚಿರ ಋಣಿ ಎಂದರು.

ಕಿರುತೆರೆ ನಟ ಎನ್ ಟಿ ರಾಮಸ್ವಾಮಿ ಮಾತನಾಡಿ, ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ ಹೊಸಬರಿಗೆ ಈ ರೀತಿ ರೆಸ್ಪಾನ್ಸ್ ಸಿಕ್ತಿರೋದು ಖುಷಿಯ ವಿಚಾರ. ನಾನೆಲ್ಲೂ ಪ್ರಮೋಷನ್‍ಗೆ ಹೋಗಿರ್ಲಿಲ್ಲ, ಚಿತ್ರತಂಡ ನನ್ನ ಪಾತ್ರಕ್ಕೆ ಹೆಚ್ಚು ಪ್ರಶಂಸೆ ಸಿಕ್ತಿದೆ, ಜನರಿಗೆ ಕನೆಕ್ಟ್ ಆಗ್ತಿದೆ ನೀವು ಪ್ರಮೋಶನ್ ಗೆ ಬನ್ನಿ ಅಂತ ಹೇಳಿದ್ರು. ಹೀಗೆ ಹೈದರಾಬಾದ್ ನಲ್ಲಿ ಒಂದು ಥಿಯೇಟರ್ ವಿಸಿಟ್ ಮಾಡ್ದಾಗ ಸಿನಿಮಾ ನೋಡಿ, ಏಕಾಏಕಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಬಾರಿಸೋಕೆ ಶುರು ಮಾಡಿದ್ರು, ಬಹುಶಃ ಅವರ ಜೀವನದಲ್ಲಿ ಏನಾಗಿತ್ತೋ, ನನ್ನ ಪಾತ್ರ ನೋಡಿ ಅವರಿಗೆ ಕೋಪ ಬಂದು ನನ್ನ ಮೇಲೆ ಕೈ ಮಾಡಿದ್ರು. ಇದು ಒಂದು ರೀತಿಲಿ ವರ ಹೌದು. ಕಾರಣ ಜನರಿಗೆ ನನ್ನ ಪಾತ್ರ ಮುಟ್ಟಿದೆ ಎಂದರು

ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, ತೆಲುಗಿನಲ್ಲಿ ಸೆನ್ಸೇಷನಲ್ ಹಿಟ್ ಆಗಿದೆ. ನಮ್ಮ ಲವ್ ರೆಡ್ಡಿ ಈಗ ಇದೇ 22ಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗ್ತಿದೆ. ಈಗಾಗಲೇ ತೆಲುಗಿನ ಸ್ಟಾರ್ ನಟ ಪ್ರಭಾಸ್, ಹಾಗೂ ಸ್ಟಾರ್ ನಿರ್ದೇಶಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಸಲಗ ಇದು ಬರೀ ಹೆಸರಲ್ಲ, ನಮ್ಮ ಬದುಕು ಎಂದರು

ನಟಿ ಶ್ರಾವಣಿ ಮತ್ತು ನಟ ಅಂಜನ್ ರಾಮಚಂದ್ರ ಮಾತನಾಡಿ, ನಾವು ಕನ್ನಡದವರೇ, ದಯವಿಟ್ಟು ಸಿನಿಮಾನ ನೋಡಿ. ಲವ್ ರೆಡ್ಡಿಗೆ ನಿಮ್ಮ ಬೆಂಬಲವಿರಲಿ. ಯುವ ಪೀಳಿಗೆಗೆಸಲಗ ವಿಜಯ್ ಉದಾಹರಣೆ. ವಿಜಯ್ ಕುಮಾರ್ ನಂಬಿದವರ ಕೈ ಯಾವತ್ತು ಬಿಡಲ್ಲ. ಅವರು ಬರೀ ಸಿನಿಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಹೀರೋ ಎಂದು ಕೊಂಡಾಡಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin