Bollywood actor Emraan Hashmi joined the team of 'Gudhachari-2'

‘ಗೂಢಾಚಾರಿ-2’ ತಂಡ ಸೇರಿಕೊಂಡ ಬಾಲಿವುಡ್ ನಟ ಇಮ್ರಾನ್ ಹಶ್ಮಿ - CineNewsKannada.com

‘ಗೂಢಾಚಾರಿ-2’ ತಂಡ ಸೇರಿಕೊಂಡ ಬಾಲಿವುಡ್ ನಟ ಇಮ್ರಾನ್ ಹಶ್ಮಿ

ಟಾಲಿವುಡ್‍ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ಗೂಢಚಾರಿ' ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡಿವಿ ಶೇಷ್ ಅವರ ಅಭಿನಯದಲ್ಲಿ ಮೂಡಿಬಂದ ಆಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ.ಗೂಢಚಾರಿ 2′ ಸಿನಿಮಾದ ಫಸ್ಟ್ ಲುಕ್ ಪೆÇೀಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಇದೀಗ ಗೂಢಚಾರಿ ಸೀಕ್ವೆಲ್ ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.

ಗೂಢಚಾರಿ 2 ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ ಅವರೀಗ ಟಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. ಗೂಢಚಾರಿ ಬಳಗ ಇಮ್ರಾನ್ ಫಸ್ಟ್ ಲುಕ್ ರಿಲೀಸ್ ಮಾಡಿ ಅವರನ್ನು ಸ್ವಾಗತಿಸಿದೆ.

ಯಾವ ಪಾತ್ರದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ ಎಂಬ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ಇಮ್ರಾನ್ ಹಶ್ಮಿ ಎಂಟ್ರಿಗೆ ಇಡೀ ಚಿತ್ರತಂಡ ಖುಷಿಯಾಗಿದೆ. ಗೂಢಚಾರಿ 2' ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದಮೇಜರ್’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು `ಗೂಢಚಾರಿ 2′ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ಗೂಢಚಾರಿ 2' ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ.ಕಾರ್ತೀಕೇಯ 2′, ಮೇಜರ್' ಮತ್ತುದಿ ಕಾಶ್ಮೀರ್ ಫೈಲ್ಸ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ಗೂಢಚಾರಿ 2' ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ.ಪೀಪಲ್ ಮೀಡಿಯಾ ಫ್ಯಾಕ್ಟರಿ’, ಅಭಿಷೇಕ್ ಅಗರ್ವಾಲ್ ಆಟ್ರ್ಸ್' ಹಾಗೂಎ.ಕೆ. ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ `ಗೂಢಚಾರಿ 2′ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬನಿತಾ ಸಂಧು ಅಡಿವಿ ಶೇಷ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin