'Pretha' movie release on February 23 : Kalakar Harish new movie

ಫೆಬ್ರವರಿ 23ಕ್ಕೆ ‘ಪ್ರೇತ’ ಚಿತ್ರ ಬಿಡುಗಡೆ : ಕಲಾಕಾರ್ ಹರೀಶ್ ಹೊಸ ಚಿತ್ರ - CineNewsKannada.com

ಫೆಬ್ರವರಿ 23ಕ್ಕೆ ‘ಪ್ರೇತ’ ಚಿತ್ರ ಬಿಡುಗಡೆ : ಕಲಾಕಾರ್ ಹರೀಶ್ ಹೊಸ ಚಿತ್ರ

ಕನ್ನಡ ಚಿತ್ರರಂಗದ ಕಲಾಕಾರ್' ಖ್ಯಾತಿಯ ನಟ ಕಂ ನಿರ್ದೇಶಕ ಹರೀಶ್ ರಾಜ್ಪ್ರೇತ’ದ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಹರೀಶ್ ರಾಜ್ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಔಟ್ ಆಂಡ್ ಔಟ್ ಹಾರರ್-ಥ್ರಿಲ್ಲರ್ ಪ್ರೇತ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 23ಕ್ಕೆ ಥಿಯೇಟರ್‍ನಲ್ಲಿಪ್ರೇತ’ ಪ್ರೇಕ್ಷಕರನ್ನು ಬಿಚ್ಚಿಬೀಳಿಸುವ ಯೋಜನೆ ಹಾಕಿಕೊಂಡಿದೆ.

‘ಪ್ರೇತ’ ಸಿನಿಮಾದಲ್ಲಿ ಹರೀಶ್ ರಾಜ್ ಅವರೊಂದಿಗೆ ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ. ಎಂ. ವೆಂಕಟೇಶ್, ಅಮಿತ್ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹರೀಶ್ ರಾಜ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪ್ರೇತ’ ಸಿನಿಮಾ ನಿರ್ಮಾಣವಾಗಿದೆ. ಈವರೆಗೆ ಕಲಾಕಾರ್',ಗನ್’, ಶ್ರೀ ಸತ್ಯನಾರಾಯಣ',ಕಿಲಾಡಿ ಪೊಲೀಸ್ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್
ತೊಟ್ಟಿದ್ದಾರೆ.

ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಪ್ರೇತ ಸಿನಿಮಾಗೆ ಇದೆ. ಪ್ರಮೋದ್ ಮರವಂತೆ, ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರೇತ ಸಿನಿಮಾವನ್ನು ಶಾಲಿನಿ ಆಟ್ರ್ಸ್ ನಡಿ ಜಾಕ್ ಮಂಜು ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin