ಡಿಸೆಂಬರ್ 12 ರಿಂದ ಬಿಪಿಎಲ್ ಕ್ರಿಕೆಟ್ ಟೂರ್ನಿ ಆರಂಭ
ನಟ ಮಹೇಶ್ ವಿ ಸಾರಥ್ಯದಲ್ಲಿ ಡಿಸೆಂಬರ್ 12 ರಿಂದ 15 ರವರೆಗೂ ನಾಲ್ಕು ದಿನಗಳ ಕಾಲ ಬಿಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್ ವುಡ್ ತಾರೆಯರು, ಸರ್ಕಾರಿ ಅಧಿಕಾರಿಗಳು, ವಕೀಲರು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಟ ಮಹೇಶ್ ಮಾತನಾಡಿ ರಾಜ್ ಕಪ್ , ಕೆಸಿಸಿ ಕಪ್ ಸೇರಿದಂತೆ ಅನೇಕ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ್ದೇನೆ. ಈ ಬಾರಿ ನಾನೇ ಹಲವು ಸ್ನೇಹಿತರ ಸಹಕಾರದಿಂದ ಬೆಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 12 ರಿಂದ ನಾಲ್ಕು ದಿನ ರಾಜನಕುಂಟೆಯಲ್ಲಿರುವ ಸುಸ್ಸಜಿತ ಕ್ರಿಕೆಟ್ ಮೈದಾನದಲ್ಲಿ ಈ ಟೂರ್ನಿ ನಡೆಯಲಿದೆ. ಕ್ರಿಕೆಟ್ ಪಂದ್ಯದಲ್ಲಿ ಐಸಿಸಿ ನಿಯಮಗಳು ಏನಿದೆಯೊ ಅದೇ ಇರುತ್ತದೆ. ಪವರ್ ಪ್ಲೇನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಆರು ತಂಡಗಳಿದ್ದು, ಆರು ಜನ ತಂಡದ ಮಾಲೀಕರು, ನಾಯಕರು ಹಾಗೂ ಉಪ ನಾಯಕರನ್ನು ಇಂದು ಪರಿಚಯಿಸುತ್ತಿದ್ದೇವೆ ಎಂದರು
• ಜಿ ಎಲ್ ಆರ್ ವಾರಿಯರ್ಸ್ ಮಾಲೀಕರು ರಾಜೇಶ್, ನಾಯಕ ಲೂಸ್ ಮಾದ ಯೋಗಿ, ಉಪ ನಾಯಕ ಶೋಭನ್ ಬಾಬು.
• ಇಂಡಿಯನ್ ಅಡ್ವೊಕೆಟ್ಸ್ ಮಾಲೀಕರು ಅರವಿಂದ್ ವೆಂಕಟೇಶ್ ರೆಡ್ಡಿ.
• ನಕ್ಷತ್ರ ವಾರಿಯರ್ಸ್ ಮಾಲೀಕರು ನಕ್ಷತ್ರ ಮಂಜು, ನಾಯಕ ಡಾರ್ಲಿಂಗ್ ಕೃಷ್ಣ, ಉಪ ನಾಯಕ ಗಣೇಶ್.
• ಕೆಜಿಎಸ್ ಟಿ ಕಿಂಗ್ಸ್ ಮಾಲೀಕರು ಥೀರನ್ ಮುಖೇಶ್. ನಾಯಕರು ಸತೀಶ್.
• ಭಜರಂಗಿ ಬಾಯ್ಸ್ ತಂಡದ ಮಾಲೀಕರು ಸ್ವಸ್ತಿಕ್ ಆರ್ಯ, ನಾಯಕ ಸಂತೋಷ್ ಬಿಲ್ಲವ ಹಾಗೂ ಉಪ ನಾಯಕ ವ್ಯಾಸರಾಜ್.
• ಕೆಎಸ್ ಪಿ SAMARYA ತಂಡದ ಮಾಲೀಕರು ಅಭಿ ರಾಣವ್. ನಾಯಕ ಸೋಮಶೇಖರ್ ಹಾಗೂ ಉಪನಾಯಕ ಗಣೇಶ್.