Kantara Chapter 1 to release on Gandhi Jayanti next year

ಕಾಂತಾರ ಚಾಪ್ಟರ್ 1 ಮುಂದಿನ ವರ್ಷ ಗಾಂಧಿಜಯಂತಿಯಂದು ತೆರೆಗೆ - CineNewsKannada.com

ಕಾಂತಾರ ಚಾಪ್ಟರ್ 1 ಮುಂದಿನ ವರ್ಷ ಗಾಂಧಿಜಯಂತಿಯಂದು ತೆರೆಗೆ

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಮುಂದಿನ ವರ್ಷ ಅಕ್ಟೋಬರ್ 2 ರಂದು ವಿಶ್ವದಾದ್ಯಂತೆ ಬಿಡುಗಡೆಯಾಗಲಿದೆ.

ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾದ ಬಿಡುಗಡೆಯ ದಿನಾಂಕ ದಿನಾಂಕ ಪ್ರಕಟವಾಗಿದ್ದು ಗಾಂಧಿ ಜಯಂತಿಯಂದು ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಹೊಂಬಾಳೆ ಫಿಲಂಸ್ ರಿಚ್ ಆಗಿಯೇ ಮೂಡಿಬರುತ್ತಿದೆ. ಕುಂದಾಪುರದಲ್ಲಿ ಐತಿಹಾಸಿಕ ಕದಂಬ ಸಾಮ್ರಾಜ್ಯವನ್ನು ಚಿತ್ರತಂಡ ಮರುಸೃಷ್ಟಿಸಿ, ಶೂಟಿಂಗ್ ಮುಂದುವರಿಸಿದೆ. ಈ ಮೂಲಕ ಪ್ರೇಕ್ಷಕನಿಗೆ ಶೌರ್ಯ, ಸಂಸ್ಕೃತಿ ಮತ್ತು ಅತೀಂದ್ರಿಯ ಯುಗಕ್ಕೆ ಕರೆದೊಯ್ಯಲಿದೆ.

ಈ ಸಿನಿಮಾ ಮತ್ತು ತಮ್ಮ ಪಾತ್ರದ ಸಲುವಾಗಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ವಿಶೇಷ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಕೇರಳದ ಅತ್ಯಂತ ಹಳೆಯ ಸಮರ ಕಲೆಯ ಪ್ರಕಾರಗಳಲ್ಲಿ ಒಂದಾದ ಕಲರಿಪಯಟ್ಟು ತರಬೇತಿ ಪಡೆದಿದ್ದಾರೆ. ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅದರಂತೆ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin