"Brat" to hit the screens on October 31st

ಅಕ್ಟೋಬರ್ 31ಕ್ಕೆ “ಬ್ರಾಟ್” ಚಿತ್ರ ತೆರೆಗೆ - CineNewsKannada.com

ಅಕ್ಟೋಬರ್ 31ಕ್ಕೆ “ಬ್ರಾಟ್” ಚಿತ್ರ ತೆರೆಗೆ

ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ” ಬ್ರ್ಯಾಟ್” ಚಿತ್ರ ಅಕ್ಟೋಬರ್ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಯಶಸ್ವಿ”ಕೌಸಲ್ಯ ಸುಪ್ರಜಾ ರಾಮ” ಚಿತ್ರದ ನಂತರ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವ “ಬ್ರ್ಯಾಟ್” ಚಿತ್ರ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಜನರ ಮನ ಗೆದ್ದಿದೆ. ಟೀಸರ್ ಹಾಗೂ ಟ್ರೇಲರ್ ಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಕೃಷ್ಣ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರದಲ್ಲಿದ್ದಾರೆ.

“ಫಸ್ಟ್ ರಾಂಕ್ ರಾಜು” ಚಿತ್ರದ ನಂತರ ಮಂಜುನಾಥ್ ವಿ ಕಂದಕೂರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಮನಿಶಾ ಕಂದಕೂರ್ ನಟಿಸಿದ್ದಾರೆ. ಅಚ್ಯುತಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಶ್ ಕಲ್ಲತ್ತಿ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ “ಬ್ರ್ಯಾಟ್” ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin