“ಅಪರೇಷನ್ ಲಂಡನ್ ಕೆಫೆ” ಚಿತ್ರ ತೆರೆಗೆ ಬರಲು ಸಿದ್ದತೆ - CineNewsKannada.com

“ಅಪರೇಷನ್ ಲಂಡನ್ ಕೆಫೆ” ಚಿತ್ರ ತೆರೆಗೆ ಬರಲು ಸಿದ್ದತೆ

“ಅಪರೇಷನ್ ಲಂಡನ್ ಕೆಫೆ” ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ನವೆಂಬರ್ 28ಕ್ಕೆ ತೆರೆಗೆ ಬರಲಿದೆ. ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿರುವ ಚಿತ್ರ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಡಗೆಯಾಗಲಿದೆ

ಜಿಲ್ಕಾ' ದ ಮೂಲಕ ಲವರ್ ಕಮ್ ಚಾಕಲೇಟ್ ಬಾಯ್ ಚಿತ್ರ ರಸಿಕರ ಗಮನ ಸೆಳೆದಿದ್ದ ಕವೀಶ್ ಶೆಟ್ಟಿಅಪರೇಷನ್ ಲಂಡನ್ ಕೆಫೆ’ ಯ ಮಾಸ್ ಕಮ್ ಅಕ್ಷನ್ ಪೋಸ್ಟರ್ ಮತ್ತು ಟೀಸರ್ ಮೂಲಕ ಚಿತ್ರರಂಗಕ್ಕೆ ಒಬ್ಬ ಪ್ರತಿಭಾವಂತ ನಟನಾಗುವ ಎಲ್ಲಾ ಭರವಸೆ ನೀಡಿದ್ದಾರೆ.

ಕನ್ನಡಿಗರ ಮನೆ ಮಾತಿನ ಬೆಡಗಿ ಮೇಘಾ ಶೆಟ್ಟಿ ಕುತೂಹಲ ಮೂಡಿಸುವ ತಮ್ಮ ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯ ಗೆಟಪ್ಪಿನಲ್ಲಿ ಮಿಂಚುತ್ತಿದ್ದಾರೆ. ಟೆರ್ರರ್ ಲುಕ್ ಮೂಲಕ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡ್ಕೆ ತೆರೆ ಹಂಚಿಕೊಂಡಿದ್ದರೆ ಅರ್ಜುನ್ ಕಾಪಿಕಾಡ್ ಅದರಲ್ಲೂ ವಿಶೇಷವಾಗಿ ಒಬ್ಬ ಆರ್ಮಿ ಆಫೀಸರ್ ಉಡುಪಿನಲ್ಲಿ ತುಂಬಾ ಖದರ್ರಾಗಿ ಕಾಣುತ್ತಿದ್ದಾರೆ.

ಸಡಗರ ರಾಘವೇಂದ್ರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಬಿ. ಸುರೇಶ್, ಧರ್ಮೇಂದ್ರ ಅರಸ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವತ್ಥ್, ಅಶ್ವಿನಿ ಚವೇರಾ ಮುಂತಾದ ಕನ್ನಡ ಮತ್ತು ಮರಾಠಿಯ ಹೆಸರಾಂತ ಕಲಾವಿದರ ಸಂಗಮವಿದೆ. ಚಿತ್ರಕ್ಕೆ ಆರ್. ಡಿ. ನಾಗಾರ್ಜುನ್ ಛಾಯಾಗ್ರಹಣ, ಪ್ರಾಂಶು ಝಾ ಸಂಗೀತ, ವರದರಾಜ್ ಕಾಮತ್ ಕಲಾ ನಿರ್ದೇಶನ, ವಿಕ್ರಂ ಮೊರ್, ಮಾಸ್ ಮಾದ, ಅರ್ಜುನ್ ರಾಜ್ ಸಾಹಸವಿದ್ದು, ಕವಿರಾಜ್ ಮತ್ತು ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಅನಿರುಧ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಶ್ರೀಲಕ್ಷ್ಮಿ ಬೆಳ್ಮಣ್ಣು, ಪ್ರಥ್ವಿ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin