ಸಾಮಾಜಿಕ ಸಂದೇಶದ “ಹೇ ಪ್ರಭು” ನವೆಂಬರ್ 7ರಂದು ಬಿಡುಗಡೆ
ಮನರಂಜನೆಯ ಜೊತೆಗೆ ಬಲವಾದ ನಿರ್ದೇಶಕ ವೆಂಕಟ್ ಭರದ್ವಾಜ್ ನಿರ್ದೇಶನದ “ಹೇ ಪ್ರಭು” ನವಂಬರ್ 7 ರಂದು ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಜ್ಜಾಗಿದೆ .ಡಾ ಸುಧಾಕರ್ ಶೆಟ್ಟಿ ಚಿತ್ರ ಅರ್ಪಿಸುತ್ತಿದ್ದು , ಅಮೃತ ಫಿಲಂ ಸೆಂಟರ್ ಮತ್ತು 24 ರೀಲ್ಸ್ ಸಂಸ್ಥೆ ಜೊತೆಗೂಡಿ ನಿರ್ಮಿಸಿದೆ.

ಸಾಮಾಜಿಕ ಅರ್ಥಪೂರ್ಣ ವಿಷಯಗಳನ್ನು ಜನಪ್ರಿಯ ಶೈಲಿಯಲ್ಲಿ ಚಿತ್ರಿಸುವ ನಿರ್ದೇಶಕ ವೆಂಕಟ್ ಭರದ್ವಾಜ್,ಹೊಸ ಚಿತ್ರ “ಹೇ ಪ್ರಭು” ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಔಷಧಿ ಮತ್ತು ವೈದ್ಯಕೀಯ ಕ್ಷೇತ್ರದ ಅಜ್ಞಾತ ಮತ್ತು ಕತ್ತಲು ಮುಖ ಅನಾವರಣಗೊಳಿಸುವ ಗಂಭೀರ ಅಂಶವಿದೆ. ಔಷಧಿ ಕಂಪನಿಗಳ ಲಾಬಿ, ನಕಲಿ ಔಷಧ ಮಾರಾಟ ಮತ್ತು ಕಾಪೆರ್Çರೇಟ್ ಲಾಭದ ಹಂಬಲ ಇವುಗಳ ಪರಿಣಾಮ ಹೇಗೆ ಜನರ ಆರೋಗ್ಯದ ಮೇಲೆ ಬಾಧೆ ಉಂಟುಮಾಡುತ್ತದೆ ಎಂಬುದನ್ನು ಚಿತ್ರ ಮನರಂಜನೆಯ ಹಾಸ್ಯ, ಭಾವನೆ ಮತ್ತು ವಾಸ್ತವಿಕ ಪಾತ್ರಗಳ ಮೂಲಕ ತೋರಿಸುತ್ತದೆ.
ಇತ್ತೀಚಿನ ಮಕ್ಕಳ ಕೆಮ್ಮಿನ ಸಿರಪ್ ದುರಂತ ದೇಶವನ್ನು ಕಂಗೆಡಿಸಿದ ಬಳಿಕ, ಹೇ ಪ್ರಭು ಕೇವಲ ಸಿನಿಮಾ ಅಲ್ಲ ಅದು ಜನಜಾಗೃತಿ ಮೂಡಿಸುವ ಕಣ್ಣು ತೆರೆಸುವ ಚಿತ್ರ. ನಾಗರಿಕರು ಎಚ್ಚರದಿಂದ, ಅರಿವುಳ್ಳವರಾಗಿ, ಜವಾಬ್ದಾರಿಯುತವಾಗಿ ಬದುಕಬೇಕು ಎಂಬ ಸಂದೇಶವನ್ನು ಈ ಸಿನಿಮಾ ಸಾರುತ್ತದೆ.
ಚಿತ್ರದಲ್ಲಿ ಯಮುನಾ ಶ್ರೀನಿಧಿ, ಜಯ ವರ್ಧನ್, ಸಂಹಿತಾ ವಿನ್ಯಾ, ಗಜಾನನ ಹೆಗ್ಡೆ,ಲಕ್ಷ್ಮಣ ಶಿವಶಂಕರ್, ಡಾ. ಸುಧಾಕರ್ ಶೆಟ್ಟಿ, ಡಾ. ಪ್ರಮೊದ್, ಡಾ. ಆದರ್ಶ್ ಗೌಡ,ವೆಂಕಟ್ ಭರದ್ವಾಜ್, ಹರಿ ಧನಂಜಯ,ಮತ್ತು ಇತರರಿದ್ದಾರೆ.

