Chandru Obayya's “Vaiboga” Launches: New Film Title Revealed

ಚಂದ್ರು ಓಬಯ್ಯನ “ವೈಬೋಗ” ಆರಂಭ : ಹೊಸ ಚಿತ್ರದ ಶೀರ್ಷಿಕೆ ಅನಾವರಣ - CineNewsKannada.com

ಚಂದ್ರು ಓಬಯ್ಯನ “ವೈಬೋಗ” ಆರಂಭ : ಹೊಸ ಚಿತ್ರದ ಶೀರ್ಷಿಕೆ ಅನಾವರಣ

ಯೂ ಟರ್ನ್-2, ರಾಮು ಅಂಡ್ ರಾಮು ಹಾಗು ಕರಿಮಣಿ ಮಾಲೀಕ ಚಿತ್ರಗಳ ಬಳಿಕ ನಿರ್ದೇಶಕ ಚಂದ್ರು ಓಬಯ್ಯ ಇದೀಗ ನಾಲ್ಕನೇ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅದುವೇ “ವೈಭೋಗ”.

ಚಿತ್ರದ ಶೀರ್ಷಿಕೆ ಬಿಡುಗಡೆ ಬಳಿಕ ಮಾತಿಗಿಳಿದ ನಿರ್ದೇಶಕ ಚಂದ್ರು ಓಬಯ್ಯ, ಚಿತ್ರಕ್ಕೆ ಚೇತನ್ ನಿಂಗೇಗೌಡ ಬಂಡವಾಳ ಹಾಕುತ್ತಿದ್ದು ಶ್ರೇಯಸ್ ಮತ್ತು ಸಂಜನಾ ಕದಂ ನಾಯಕ,ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿವರ ನೀಡಿದರು

ವೈಬೋಗ, ಕಮರ್ಷಿಯಲ್ ಸಿನಿಮಾ, ಯುವ್ವನಲ್ಲಿ ಹುಟ್ಟುವ ಪ್ರೀತಿಗೋಸ್ಕರ ಹೆತ್ತವರ ಮರಿಬೇಡ ಎನ್ನುವ ಪ್ರೀತಿಯ ಜೊತೆಗೆ ಹೆತ್ತವರನ್ನು ಕಾಪಾಡಬೇಕು ಎಂದು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಚಿತ್ರವನ್ನುಚನ್ನಪಟ್ಟಣ ಮೈಸೂರು ಮತ್ತಿತರ ಕಡೆ ಚಿತ್ರೀಕರಣ ಮಾಡಿ ಹಾಡುಗಳನ್ನು ಮಂಗಳೂರು ಮತ್ತಿತರ ಕಡೆ ಚಿತ್ರೀಕರಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಒಟ್ಟಾರೆ ಚಿತ್ರೀಕರಣದಲ್ಲಿ 20 ರಿಂದ 30 ಟಾಕಿ ಭಾಗ, 10 ದಿನದಲ್ಲಿ ಹಾಡು ಪೈಟ್‍ಗಳನ್ನು ಚಿತ್ರೀಕರಣ ಮಾಡುವ ಉದ್ದೇಶ ಒಂದಲಾಗಿದೆ. ಈ ತಿಂಗಳ 20 ರಿಂದ ಚಿತ್ರೀಕರಣ ಮಾಡಲಾಗಿದೆ. ರಾಮು ಅಂಡ್ ರಾಮು ಸೆನ್ಸಾರ್ ಆಗಿದೆ.“ಕರೀಮಣಿ ಮಾಲಿಕ” ಚಿತ್ರೀಕರಣ ಮುಗಿದಿದೆ ಎಂದು ಹೇಳಿದರು

ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡಿದರೆ ಹಲವು ಉದ್ಯೋಗ ಸಿಗಲಿದೆ, ವಿಜಯದಶಮಿಗೆ ಮತ್ತೊಂದು ಚಿತ್ರ ಆರಂಭಿಸಲಾಗುವುದು ಆದಾದನಂತರ ಒಂದು ವರ್ಷ ಯಾವುದೇ ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ, ಕೈಗೆತ್ತಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸುವ ಕಡೆಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು .

ನಾಯಕ ಶ್ರೇಯಸ್ ಮಾತನಾಡಿ, ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಓಬಯ್ಯ ಅವರು ಕಥೆ ಹೇಳಿಲ್ಲ. ಒಳ್ಳೆಯ ಚಿತ್ರವಾಗುವ ವಿಶ್ವಾಸವಿದೆ ಎಂದ ಹೇಳಿದರು.

ನಟಿ ಸಂಜನಾ ಕದಂ, ಮೈಸೂರಿನ ಹುಡುಗಿ, ಹಿರಿಯ ಕಲಾವಿದ ಮಂಡ್ಯ ರಮೇಶ್ ಅವರ ಸಂಸ್ಥೆ ನಟನಾದಲ್ಲಿ ಕಲಿತಿದ್ದೇನೆ. ಮೊದಲ ಬಾರಿಗೆ ನಟಿಯಾಗುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಂಡಿ ನಟನಾ ಸಂಸ್ಥೆಗೆ ಹೆಸರು ತರುವ ಜೊತೆಗೆ ಜೊತೆಗೆ ವಯಕ್ತಿಕವಾಗಿ ಚಿತ್ರ ಜೀವನದಲ್ಲಿ ಮುಂದೆ ಬರುವ ವಿಶ್ವಾಸವಿದೆ ಎಂದರು.

ಹಿರಿಯ ಕಲಾವಿದ ಮೂಗು ಸುರೇಶ್ ಮಾತನಾಡಿ, ನಿರ್ದೇಶಕರು ಹಿರಿಯರಾಗಿರಲಿ ಅಥವಾ ಕಿರಿಯರಾಗಿರಲಿ ಕ್ಯಾಮರಾ ಮುಂದೆ ನಿಂತಾಗ ನಾನೊಬ್ಬ ಕಲಾವಿದ. ಅವರು ಹೇಳಿದಂತೆ ಮಾಡುವುದು ನನ್ನ ಕೆಲಸ, ನಿರ್ದೇಶಕರ ವಿಷಯದಲ್ಲಿ ಮೂಗು ತೂರಿಸಲು ಹೋಗುವುದಿಲ್ಲ. ಚಂದ್ರು ಓಬಯ್ಯ ಅವರ ಹಿಂದಿನ ಚಿತ್ರದಲ್ಲಿಯೂ ನಟಿಸಿದ್ದೇನೆ.

ಅದರಲ್ಲಿ ನನ್ನದು ಮತ್ತು ರೇಖಾದಾಸ್ ಕಾಂಬಿನೇಷನ್ ಪಾತ್ರ. ಸೀನ್ ಪೇಪರ್ ನೀಡದೆ, ಸನ್ನಿವೇಶ ವಿವರಿಸಿ ಇದನ್ನು ಇಂಪ್ರೂ ಮಾಡಬಹುದು ನೋಡಿ ಎಂದರು ಅದರಂತೆ ಮಾಡಿದ್ದೇನೆ, ಈ ಚಿತ್ರದಲ್ಲಿ ಉಪನ್ಯಾಸಕನ ಪಾತ್ರ. ಕತೆ ಹೇಳಿಲ್ಲ, ಏಳೆಂಟು ದಿನ ಕಾಲ್ ಶೀಟ್ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಮತ್ತೊಬ್ಬ ಹಿರಿಯ ಕಲಾವಿದ ನಾಗೇಂದ್ರ ಅರಸ್ ಮಾತನಾಡಿ, ಕಿರಿತೆರೆಯಲ್ಲಿ ಮೂಡಿ ಬರುತ್ತಿರುವ ಬ್ರಹ್ಮಗಂಟು ಚಿತ್ರದಲ್ಲಿ ನಾಯಕಿಯ ಅಪ್ಪನ ಪಾತ್ರ ಮಾಡಿದ್ದೆ. ಈ ಚಿತ್ರದಲ್ಲಿ ನಾಯಕನ ಅಪ್ಪನ ಪಾತ್ರ ಮಾಡಿದ್ದೇನೆ. ಅಪ್ಪನ ಪಾತ್ರಕ್ಕೆ ಬಡ್ತಿ ಸಿಕ್ಕಿದೆ. ಒಳ್ಳೆಯ ಪಾತ್ರ, ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ. ಚಂದ್ರು ಓಬಯ್ಯ ಅವರ ಜೊತೆ ಈ ಹಿಂದೆಯೂ ಕೆಲಸ ಮಾಡಿದ್ದೆ ಎಂದರು

ನಿರ್ಮಾಪಕ ಡಾ. ಚೇತನ್ ನಿಂಗೇಗೌಡ ಮಾತನಾಡಿ ಒಳ್ಳೆಯ ಕಥೆ , ಚಿತ್ರದ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ, ಅಪ್ಪ, ಅಮ್ಮ, ಅವಿಭಕ್ತ ಕುಟುಂಬದ ಮಹತ್ವ ಹೇಳುವ ಪ್ರಯತ್ನ ಚಿತ್ರದಲ್ಲಿದೆ ಎಂದು ತಿಳಿಸಿದರು

ಛಾಯಾಗ್ರಾಹಕ ನಿರಂಜನ್ ಬೋಪಣ್ಣ ಸೇರಿದಂತೆ ಹಲವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin