Children's film ``O Nanna Chetana'' will be released on the 15th

ಮಕ್ಕಳ ಚಿತ್ರ “ಓ ನನ್ನ ಚೇತನ” ಇದೇ 15ಕ್ಕೆ ಬಿಡುಗಡೆ - CineNewsKannada.com

ಮಕ್ಕಳ ಚಿತ್ರ “ಓ ನನ್ನ ಚೇತನ” ಇದೇ 15ಕ್ಕೆ ಬಿಡುಗಡೆ

ಮಕ್ಕಳ ಕುರಿತ ಚಿತ್ರ “ ಓ ನನ್ನ ಚೇತನ” ಇದೇ ಶುಕ್ರವಾರ ತೆರೆಗೆ ಬರಲು ಸಜ್ಜಾಗಿದದೆ. ಈ ಹಿನ್ನೆಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದ್ದಾರೆ.

“ಅಪೂರ್ವ” ಚಿತ್ರದಲ್ಲಿ ನಾಯಕಿ ಯಾಗಿದ್ದ ನಟಿ ಅಪೂರ್ವ ಮಕ್ಕಳ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೂ ಕೂಡ ರವಿಚಂದ್ರನ್ ಅವರು ಓ ನನ್ನ ಚೇತನ ಚಿತ್ರಕ್ಕೆ ಬೆಂಬಲ ನೀಡಲು ಪ್ರಮುಖ ಕಾರಣ.

ಈ ವೇಳೆ ಮಾತಿಗಿಳಿದ ರವಿಚಂದ್ರನ್, “ಓ ನನ್ನ ಚೇತನ” ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಪ್ರೇಮಲೋಕ, ಶಾಂತಿಕ್ರಾಂತಿಯ ಅದ್ಭುತ ಸನ್ನಿವೇಶಗಳನ್ನು ನೆನಪು ಮಾಡಿದೆ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ.

ಮೊಬೈಲ್ ನೋಡೋ ಮಕ್ಕಳು, ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೆÇ?ಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ. ದೊಡ್ಡ ತಾರಾಬಳಗವಿಲ್ಲ… ಆದರೆ ದೊಡ್ಡ ತಂತ್ರಜ್ಞರೇ ಕೈ ಜೋಡಿಸಿ ಮಾಡಿರೋ ಅಪ್ಪಟ ರಂಜನೆಯ ಮತ್ತು ಸಂದೇಶವಿರುವ ಸಿನಿಮಾ ಇದಾಗಿದೆ,

ಸೂಕ್ಷ್ಮಾಕಥೆಯ ಜೊತೆ ಪ್ರಸ್ತುತತೆಗೆ ತುಂಬಾ ಹತ್ತಿರೋವಿರೋ ವಿಷ್ಯ ಈ ಚಿತ್ರದ ಜೀವಾಳ. ಹೆಸರೇ ಹೇಳುವಂತೆ.. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ ಇದಾಗಿದೆ . ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನ ಪಡೆದುಕೊಂಡಿದ್ದ ಓ ನನ್ನ ಚೇತನ, ಇದೇ 15ಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ್ತಿದೆ. ಡಾ.ಬಿ.ಜಿ ಮಲ್ಲಿಕಾರ್ಜುನ ಸ್ವಾಮಿ ಈ ಚಿತ್ರವನ್ನ ಮೂನಿಪ್ಲಿಕ್ಸ್ ಸ್ಟುಡಿಯೋಸ್ ನ ಕೆ.ಎ ಸುರೇಶ್ ಅವ್ರ ಮೂಲಕ ರಿಲೀಸ್ ಮಾಡ್ತಿದ್ದಾರೆ.

ಓ ನನ್ನ ಚೇತನ ಅಪೂರ್ವ ಖ್ಯಾತಿಯ ನಟಿ ಅಪೂರ್ವಗೌಡ (ಆಶಾದೇವಿ) ನಿರ್ದೇಶನದ ಚೊಚ್ಚಲ ಚಿತ್ರ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್,ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ.

ಓ ನನ್ನ ಚೇತನ ಚಿತ್ರದ ನೀ ಏನೇ ಹೇಳಹ ಅಂಜು ಹಾಡು ರಿಲೀಸ್ ಆಗಿದ್ದು, ಈ ಹಾಡಿಗೆ ಡಿಜಿಟಲ್ ವೇದಿಕೆಯಲ್ಲಿ ಓಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದ್ರ ಜೊತೆಗೆ ಚಿತ್ರದ ಟೈಟಲ್ ಹಾಡು ಕೂಡ ರಿಲೀಸ್ ಆಗಿದ್ದು, ಮ್ಯೂಸಿಕಲಿ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಅಪ್ಪಟ ಹಳ್ಳಿ ಹಿನ್ನೆಲೆಯಲ್ಲಿ ಚಿತ್ರಿಸಿರೋ ಓ ನನ್ನ ಚೇತನ ನಾಲ್ಕಾರು ಆಯಾಮಗಳಲ್ಲಿ ಗಮನ ಸೆಳೆಯುತ್ತಿದೆ.

ಎಸ್ ಅಂಡ್ ಎಸ್ ಬ್ಯಾನರ್ ನಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್,ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಂದೇಶ ಸಾರುವ ಜೊತೆಗೆ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಆಗಿ ಬರ್ತಿರೋ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟ್ರಟೈನ್ಮೆಂಟ್ ಚಿತ್ರಕ್ಕೂ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿರುವಂತೆ ಕಾಣುತ್ತಿದೆ ಮಕ್ಕಳ ನಟಿಸಿದ್ರು ಎಲ್ಲಾ ದೊಡ್ಡವರೇ ಕೂಡಿ ಮಾಡಿರೋ ಈ ಚಿತ್ರವನ್ನು ನೋಡಬಹುದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin