ಆಗಸ್ಟ್ 20ರಂದು `ಚೋಳ’ ಟೀಸರ್ ಬಿಡುಗಡೆ
ಉತ್ತರ ಕರ್ನಾಟಕ ಭಾಗದ ಸಿನಿಮಾಗಳು ಒಂದೊಂದೇ ಕನ್ನಡ ಚಿತ್ರರಂಗದಲ್ಲಿ ತೆರೆಗೆ ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಸೇರ್ಪಡೆ “ಚೋಳ”.ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ನಟಿಸಿರು ಚಿತ್ರ ಇದು. ಸದ್ಯದಲ್ಲಿಯೇ ಚೋಳ ಚಿತ್ರ ಟೀಸರ್ ಬಿಡುಗಡೆಯಾಗಲು ಸಜ್ಜಾಗಿದೆ.
ಅಂಜನ್ ಚೋಳ' ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಎಂಟ್ರಿ ಕೊಡಲು ಎಡಿಯಾಗಿದ್ದಾರೆ. ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸುರೇಶ್ ಡಿ.ಎಂ
ಚೋಳ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ಟೀಸರ್ ಇದೇ ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ.
ತನ್ನ ಸೃಷ್ಟಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಸುರೇಶ್ ಡಿ.ಎಂ ಪ್ರಯಾಣಿಕರ ಗಮನಕ್ಕೆ'
ರಣಹೇಡಿ’ ಮುಂತಾದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೀಗ ಭಿನ್ನ ಕಥಾನಕದೊಂದಿಗೆ ಚೋಳ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ.
ಇದರಲ್ಲಿ ಗ್ರಾಮೀಣ ಪ್ರತಿಭೆಯಾದ ರೂರಲ್ ಸ್ಟಾರ್ ಅಂಜನ್‍ರನ್ನು ನಾಯಕನನ್ನಾಗಿಸುವ ಮೂಲಕ, ಅವರ ಕನಸುಗಳಿಗೆ ಜೊತೆಯಾಗಿದ್ದಾರೆ. ಅಂದಹಾಗೆ, ಚೋಳ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಇದೊಂದು ಐತಿಹಾಸಿಕ ಕಥಾ ಹಂದರದ ಚಿತ್ರವಾ ಎಂಬಂಥಾ ಅನುಮಾನ ಕಾಡುತ್ತದೆ. ಆದರೆ, ಇದು ಪಕ್ಕಾ ಆಧುನಿಕ ಕಥನ. ಪ್ರೀತಿ, ರೌಡಿಸಂ ಸೇರಿದಂತೆ ಎಲ್ಲವೂ ಬೆರೆತಿರುವ ಚಿತ್ರವೆಂಬ ಸ್ಪಷ್ಟನೆ ನಿರ್ದೇಶಕರ ಕಡೆಯಿದ ಸಿಗುತ್ತದೆ.
ಯರ್ರಾಬಿರ್ರಿ ಅಂತೊಂದು ಸಿನಿಮಾ ಮಾಡಿದ್ದ ರೂರಲ್ ಸ್ಟಾರ್ ಅಂಜನ್‍ರ ಪ್ರತಿಭೆಯನ್ನು ಗಮನಿಸಿದ್ದ ನಿರ್ದೇಶಕ ಸುರೇಶ್ ಈ ಚಿತ್ರಕ್ಕೆ ನಾಯಕನನ್ನಾಗಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿಶಾ ಪಾಂಡೆ ಮತ್ತು ಪ್ರತತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.
ದಿನೇಶ್ ಮಂಗಳೂರು ಮತ್ತು ರಾಜ ಬಲವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ ಮನಮೋಹನ್ ರಾಯ್ ರಂಥ ಹಿರಿಯ ನಟರು ವಿಶೇಷಪಾತ್ರಗಳನ್ನು ನಿಭಾಯಿಸಿದ್ದಾರೆ. ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು, ವರ್ಧನ್ ತೀರ್ಥಹಳ್ಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಶಂಕರ್ ಸಂಕಲನ ಈ ಚಿತ್ರಕ್ಕಿದೆ. ಸಾಕಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕಿಳಿದಿರುವ ಸುರೇಶ್ ಅವರು ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈಗಾಗಲೇ ಭರದಿಂದ ಒಂದಷ್ಟು ಚಿತ್ರೀಕರಣ ನಡೆದಿದೆ. ಮುಖ್ಯ ಭಾಗಗಳ ಇನೊಂದಿಷ್ಟು ಚಿತ್ರೀಕರಣ ಬಾಕಿ ಇದೆ. ಅದು ಮುಗಿದಾಕ್ಷಣವೇ ಆಡಿಯೋ ರಿಲೀಸ್ ಮಾಡಿ, ಅದರ ಬೆನ್ನಲ್ಲಿಯೇ ಟ್ರೈಲರ್ ಅನ್ನೂ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದಾಗಿದೆ.